ಪಶ್ಚಿಮ ಬಂಗಾಳ: ಇಡಿ ದಾಳಿ ವೇಳೆ ರಕ್ಷಾಕವಚ ಧರಿಸಲಿದ್ದಾರೆ ಸಿಆರ್‌ಪಿಎಫ್ ಯೋಧರು
ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರ ನಿವಾಸದ ಆವರಣಕ್ಕೆ ಹೋದಾಗ ಎದುರಿಸಬೇಕಾದ ಪರಿಸ್ಥಿತಿಯಿಂದ ಸಿಆರ್ ಪಿಎಫ್ ಈಗ ಜಾಗೃತವಾಗಿದ್ದು ಯೋಧರಿಗೆ ಭದ್ರತೆ ಹೆಚ್ಚಿಸಲಾಗಿದೆ. ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದರೂ ತಾವು ಸುರಕ್ಷಿತವಾಗಿದ್ದೇವೆ ಎಂದು ಭದ್ರತಾಪಡೆ ಭಾವಿಸುವುದಿಲ್ಲ. ಇನ್ನು ಮುಂದೆ ಯೋಧರಿಗೆ ಶೀಲ್ಡ್ ಅಥವಾ ರಕ್ಷಾ ಕವಚ ಇರಲಿದ್ದು, ಅವರ ತಲೆಯ ಮೇಲೆ ವಿಶೇಷ ರೀತಿಯ ಹೆಲ್ಮೆಟ್ ಇರಲಿದೆ
ಕೋಲ್ಕತ್ತಾ ಜನವರಿ 08: ಶೋಧ ಕಾರ್ಯದ ವೇಳೆ ಸ್ವತಃ ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳ () ಮೇಲೆಯೇ ಹಲ್ಲೆ ನಡೆದಿದೆ. ಶಸ್ತ್ರಸಜ್ಜಿತ ಸಿಆರ್‌ಪಿಎಫ್ (CRPF) ಸಿಬ್ಬಂದಿ ಇದ್ದರೂ ಈ ದಾಳಿಯನ್ನು ತಡೆಯಲಾಗಲಿಲ್ಲ. ಮತ್ತೊಂದೆಡೆ ಕೇಂEDದ್ರ ಪಡೆಯ ಕಾರಿನ ಗಾಜು ಕೂಡ ಒಡೆದಿದೆ. ಶಹಜಹಾನ್ ಶೇಖ್ (Shahjahan sheikh) ಅವರ ನಿವಾಸದ ಆವರಣಕ್ಕೆ ಹೋದಾಗ ಎದುರಿಸಬೇಕಾದ ಪರಿಸ್ಥಿತಿಯಿಂದ ಸಿಆರ್ ಪಿಎಫ್ ಈಗ ಜಾಗೃತವಾಗಿದ್ದು ಯೋಧರಿಗೆ ಭದ್ರತೆ ಹೆಚ್ಚಿಸಲಾಗಿದೆ. ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದರೂ ತಾವು ಸುರಕ್ಷಿತವಾಗಿದ್ದೇವೆ ಎಂದು ಭದ್ರತಾಪಡೆ ಭಾವಿಸುವುದಿಲ್ಲ. ಇನ್ನು ಮುಂದೆ ಯೋಧರಿಗೆ ಶೀಲ್ಡ್ ಅಥವಾ ರಕ್ಷಾ ಕವಚ ಇರಲಿದ್ದು, ಅವರ ತಲೆಯ ಮೇಲೆ ವಿಶೇಷ ರೀತಿಯ ಹೆಲ್ಮೆಟ್ ಇರಲಿದೆ.
ಪಡಿತರ ಭ್ರಷ್ಟಾಚಾರದ ಆರೋಪ ಹೊತ್ತಿರುವ ಶಂಕರ್ ಆದಯ್ಯ ಅವರನ್ನು ಬುಧವಾರ ಬೆಳಗ್ಗೆ ಸಿಜಿಒ ಕಾಂಪ್ಲೆಕ್ಸ್‌ನಿಂದ ಹೊರಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಇದಕ್ಕೂ ಮುನ್ನ ಇಡಿ ಕಚೇರಿಯ ಹೊರಗೆ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಅಲ್ಲಿ ಕೇಂದ್ರಪಡೆಗಳು ಹೆಲ್ಮೆಟ್, ಬಾಡಿ ಪ್ರೊಟೆಕ್ಟರ್ ಜಾಕೆಟ್, ಕೋಲು, ಶೀಲ್ಡ್ ಧರಿಸಿ ನಿಂತಿದ್ದು ಕಂಡುಬಂತು. ಮೂಲಗಳ ಪ್ರಕಾರ, ಸಂದೇಶಖಾಲಿ ಘಟನೆಯ ನಂತರ, ಸಿಆರ್‌ಪಿಎಫ್ ಯೋಧರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉನ್ನತ ಹಂತದಿಂದ ಈ ಆದೇಶವನ್ನು ನೀಡಲಾಗಿದೆ.
ಜಮ್ಮು ಕಾಶ್ಮೀರ ಮತ್ತು ಮಾವೋವಾದಿ ಪ್ರಾಬಲ್ಯದ ಛತ್ತೀಸ್‌ಗಢದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‌ಪಿಎಫ್ ಯೋಧರು ಸಾಮಾನ್ಯವಾಗಿ ಈ ರೀತಿದಲ್ಲಿ ಕಾಣಿಸಿಕೊಳ್ಳುತ್ತಾರೆ. ಶೋಧ ಕಾರ್ಯಾಚರಣೆ ನಡೆಸುವಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಭದ್ರತೆಯನ್ನು ವಿಸ್ತರಿಸಲಾಗಿದೆ. ಅದೇನೆಂದರೆ, ಮುಂದೆ ಯಾವುದೇ ಶೋಧ ಕಾರ್ಯಾಚರಣೆಗೆ ಮುಂದಾದರೆ ಯೋಧರು ಈ ರೀತಿ ಸಿದ್ಧತೆಯಲ್ಲಿರಬೇಕು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪಡಿತರ ವಿತರಣೆ ಹಗರಣ: ಟಿಎಂಸಿಯ ಶಹಜಹಾನ್ ಶೇಖ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ
ಕಳೆದ ಶುಕ್ರವಾರ ಸಂದೇಶಖಾಲಿಯಲ್ಲಿ ಶೇಖ್ ಶಹಜಹಾನ್ ನಿವಾಸದಲ್ಲಿ ಇಡಿ ಅಧಿಕಾರಿಗಳ ಮೇಲೆ ಅವರ ಅನುಯಾಯಿಗಳು ದಾಳಿ ಮಾಡಿದ್ದರು. ಆ ಹೊತ್ತಲ್ಲಿ ಅಧಿಕಾರಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ಅಲ್ಲಿಂದ ಪಲಾಯನ ಮಾಡಬೇಕಾಯಿತು. ಘಟನೆಯನ್ನು ಎಲ್ಲಾ ವಲಯಗಳು ಖಂಡಿಸಿವೆ. ಘಟನೆಯ ನಂತರ ಮೂರು ದಿನಗಳು ಕಳೆದವು, ಆದರೆ ಶಹಜಹಾನ್ ಅನ್ನು ಇನ್ನೂ ಬಂಧಿಸಲಾಗಿಲ್ಲ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ