What India Thinks Today: ಇಂದಿನಿಂದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆ; ಇಲ್ಲಿದೆ ಕಾರ್ಯಕ್ರಮಗಳ ವಿವರ

ಇಂದು (ಭಾನುವಾರ)ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ಜಗತ್ತಿನ ಗಣ್ಯರು, ಉದ್ಯಮದ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ನೀಡಲಿದ್ದಾರೆ.

What India Thinks Today: ಇಂದಿನಿಂದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆ; ಇಲ್ಲಿದೆ ಕಾರ್ಯಕ್ರಮಗಳ ವಿವರ
ವಾಟ್ ಇಂಡಿಯಾ ಥಿಂಕ್ಸ್ ಟುಡೇ
Follow us
ರಶ್ಮಿ ಕಲ್ಲಕಟ್ಟ
|

Updated on: Feb 25, 2024 | 7:00 AM

ದೆಹಲಿ ಫೆಬ್ರವರಿ 24: ದೇಶದ ಅತಿದೊಡ್ಡ ನೆಟ್‌ವರ್ಕ್ ಟಿವಿ9, ದೆಹಲಿಯಲ್ಲಿ ವಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today )ಗ್ಲೋಬಲ್ ಶೃಂಗಸಭೆ ಆಯೋಜಿಸಿದ್ದು ಇಂದು (ಭಾನುವಾರ)ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ಜಗತ್ತಿನ ಗಣ್ಯರು, ಉದ್ಯಮದ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ನೀಡಲಿದ್ದಾರೆ. ಇಂದು ದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಮೊದಲ ದಿನ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಟಿವಿ 9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಕಾರ್ಯಕ್ರಮವನ್ನು ಪರಿಚಯಿಸಲಿದ್ದಾರೆ.ಅದರ ನಂತರ, ಮುಖ್ಯ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಪ್ರಸ್ತುತ ಕಾರ್ಯಕ್ರಮವು ಸಂದರ್ಶನ, ಸೆಮಿನಾರ್ ಮತ್ತು ಪ್ರಶಸ್ತಿ ಸಮಾರಂಭವನ್ನು ಒಳಗೊಂಡಿರುತ್ತದೆ.

ಮೊದಲನೇ ದಿನ ಏನೇನಿರುತ್ತದೆ?

ಸಂಜೆ 4 ಗಂಟೆ ಬರುಣ್ ದಾಸ್, MD & CEO, TV9 ನೆಟ್‌ವರ್ಕ್ ಅವರಿಂದ ಪರಿಚಯ. ಸಂಜೆ 4.15 – ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂದರ್ಶನ ಸಂಜೆ 4.45 – ಅಭಯ್ ಭೂಟಡ, ಎಮ್‌ಡಿ, ಪೂನಾವಾಲಾ ಫಿನ್‌ಕಾರ್ಪ್ ಅವರಿಂದ ಭಾಷಣ ಸಂಜೆ 4.55 – ನಕ್ಷತ್ರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ (ಮೊದಲ ಹಂತ) ಸಂಜೆ 5 ಗಂಟೆ – ಭಾರತಕ್ಕೆ ಕ್ರೀಡಾ ಕ್ಷೇತ್ರ- ಗಣ್ಯರು ಈ ವಿಷಯದ ಕುರಿತು ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು

-ಪುಲ್ಲೇಲ ಗೋಪಿಚಂದ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ -ಲತಿಕಾ ಖನೇಜಾ, ಸಿಇಒ, ಕಾಲೇಜ್ ಸ್ಪೋರ್ಟ್ಸ್ ಆಫ್ ಮ್ಯಾನೇಜ್‌ಮೆಂಟ್ – ಪೀರ್ ನೌಬರ್ಟ್, CCO, ಬುಂಡೆಸ್ಲಿಗಾ – ಮಾರ್ಕಸ್ ಕ್ರೀಸ್ಮರ್, ಎಫ್‌ಕೆ ಆಸ್ಟ್ರಿಯಾ ವಿಯೆನ್ನಾದ ಮಾಜಿ ಸಿಇಒ – ಶುಭ್ರಾಂಶು ಸಿಂಗ್, ಸಿಎಂಒ, ಸಿವಿಬಿಯು ಟಾಟಾ ಮೋಟಾರ್ಸ್ – ಲಾಯ್ಡ್ ಮಥಿಯಾಸ್, ಇಂಡಸ್ಟ್ರಿ ಸ್ಟ್ರಾಟಜಿಸ್ಟ್ ಮತ್ತು ಮಾರ್ಕೆಟಿಂಗ್ ತಜ್ಞ

ಸಂಜೆ 5.45 – ನಕ್ಷತ್ರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ (ಎರಡನೇ ಹಂತ) ಸಂಜೆ 5.55 – G20 ಶೆರ್ಪಾ ಅಮಿತಾಭ್ ಕಾಂತ್ ಅವರು ಬ್ರಾಂಡ್ ಇಂಡಿಯಾ: ಲೆವರೇಜಿಂಗ್ ಸಾಫ್ಟ್ ಪವರ್ ಕುರಿತು ಮಾತನಾಡಲಿದ್ದಾರೆ ಸಂಜೆ ಸಂಜೆ 6.25- ನಕ್ಷತ್ರ ಸಮ್ಮಾನ್ (ಮೂರನೇ ಹಂತದ ಪ್ರಶಸ್ತಿಗಳು) ಸಂಜೆ 6.35 – ಫೈರ್‌ಸೈಡ್ ಚಾಟ್ – ಖ್ಯಾತ ನಟಿ, ಪದ್ಮಶ್ರೀ ರವೀನಾ ಟಂಡನ್ ಫೀಮೇಲ್ ಪ್ರೊಟಗಾನಿಸ್ಟ್- ದಿ ನ್ಯೂ ಹೀರೋ – ಕುರಿತು ಮಾತನಾಡಲಿದ್ದಾರೆ.

ಇದನ್ನೂ ಓದಿ: ನೂತನ ಮುಖ್ಯಮಂತ್ರಿಗಳ ಆಡಳಿತ ಹೇಗಿದೆ? ಟಿವಿ9 ವೇದಿಕೆಯಲ್ಲಿ ಚರ್ಚೆ ಸಂಜೆ 7 ಗಂಟೆ- – ಟಂಡನ್ ಫೀಮೇಲ್ ಪ್ರೊಟಗಾನಿಸ್ಟ್- ದಿ ನ್ಯೂ ಹೀರೋ

ಭಾಗವಹಿಸುವವರು

– ಖುಷ್ಬೂ ಸುಂದರ್, ಮಹಿಳಾ ಆಯೋಗದ ಸದಸ್ಯೆ – ಮಿರ್ಜಾಮ್ ಐಸೆಲೆ, ನಿರ್ದೇಶಕ, ಸ್ಟಿಫ್ಟಂಗ್ ಜುಗೆಂಡೌಸ್ತೌಸ್ ಬೇಯರ್ನ್ – ಜೂಲಿಯಾ ಫಾರ್, ಫುಟ್ಬಾಲ್ ಪ್ರಚಾರಕಿ, ಬೊರುಸ್ಸಿಯಾ ಡಾರ್ಟ್ಮಂಡ್ – ಆಯೇಷಾ ಗುಪ್ತಾ, ನಿರ್ದೇಶಕಿ ಎಚ್‌ಆರ್, ಗೇಲ್

ಸಂಜೆ 7.45 ಗಂಟೆ- ನಕ್ಷತ್ರ ಸಮ್ಮಾನ್ ಪ್ರಶಸ್ತಿ (4ನೇ ಹಂತ)

ಸಂಜೆ ರಾತ್ರಿ 7.55 – ಬೌಂಡ್ ಲೆಸ್ ಭಾರತ್: ಬಿಯಾಂಡ್ ಬಾಲಿವುಡ್ ಭಾಗವಹಿಸುವವರು – ಶೇಖರ್ ಕಪೂರ್, ನಟ, ನಿರ್ದೇಶಕ, ನಿರ್ಮಾಪಕ – ಕ್ರಿಸ್ಟೋಫರ್ ರಿಪ್ಲಿ, ಸಿಇಒ, ಸಿಂಕ್ಲೇರ್ ಬ್ರಾಡ್‌ಕಾಸ್ಟ್ ಗ್ರೂಪ್ – ರಿಕಿ ಕೇಜ್, ಸಂಗೀತಗಾರ, ಪರಿಸರವಾದಿ – ವಿ ಸೆಲ್ವಗಣೇಶ್, 2023 ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ತಾಳವಾದ್ಯ ವಾದಕ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್