What India Thinks Today: ಇಂದಿನಿಂದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆ; ಇಲ್ಲಿದೆ ಕಾರ್ಯಕ್ರಮಗಳ ವಿವರ

|

Updated on: Feb 25, 2024 | 7:00 AM

ಇಂದು (ಭಾನುವಾರ)ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ಜಗತ್ತಿನ ಗಣ್ಯರು, ಉದ್ಯಮದ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ನೀಡಲಿದ್ದಾರೆ.

What India Thinks Today: ಇಂದಿನಿಂದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆ; ಇಲ್ಲಿದೆ ಕಾರ್ಯಕ್ರಮಗಳ ವಿವರ
ವಾಟ್ ಇಂಡಿಯಾ ಥಿಂಕ್ಸ್ ಟುಡೇ
Follow us on

ದೆಹಲಿ ಫೆಬ್ರವರಿ 24: ದೇಶದ ಅತಿದೊಡ್ಡ ನೆಟ್‌ವರ್ಕ್ ಟಿವಿ9, ದೆಹಲಿಯಲ್ಲಿ ವಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today )ಗ್ಲೋಬಲ್ ಶೃಂಗಸಭೆ ಆಯೋಜಿಸಿದ್ದು ಇಂದು (ಭಾನುವಾರ)ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ಜಗತ್ತಿನ ಗಣ್ಯರು, ಉದ್ಯಮದ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ನೀಡಲಿದ್ದಾರೆ. ಇಂದು ದೆಹಲಿಯ ಅಶೋಕ್ ಹೋಟೆಲ್‌ನಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಮೊದಲ ದಿನ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಟಿವಿ 9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಕಾರ್ಯಕ್ರಮವನ್ನು ಪರಿಚಯಿಸಲಿದ್ದಾರೆ.ಅದರ ನಂತರ, ಮುಖ್ಯ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಪ್ರಸ್ತುತ ಕಾರ್ಯಕ್ರಮವು ಸಂದರ್ಶನ, ಸೆಮಿನಾರ್ ಮತ್ತು ಪ್ರಶಸ್ತಿ ಸಮಾರಂಭವನ್ನು ಒಳಗೊಂಡಿರುತ್ತದೆ.

ಮೊದಲನೇ ದಿನ ಏನೇನಿರುತ್ತದೆ?

ಸಂಜೆ 4 ಗಂಟೆ ಬರುಣ್ ದಾಸ್, MD & CEO, TV9 ನೆಟ್‌ವರ್ಕ್ ಅವರಿಂದ ಪರಿಚಯ.
ಸಂಜೆ 4.15 – ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸಂದರ್ಶನ
ಸಂಜೆ 4.45 – ಅಭಯ್ ಭೂಟಡ, ಎಮ್‌ಡಿ, ಪೂನಾವಾಲಾ ಫಿನ್‌ಕಾರ್ಪ್ ಅವರಿಂದ ಭಾಷಣ
ಸಂಜೆ 4.55 – ನಕ್ಷತ್ರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ (ಮೊದಲ ಹಂತ)
ಸಂಜೆ 5 ಗಂಟೆ – ಭಾರತಕ್ಕೆ ಕ್ರೀಡಾ ಕ್ಷೇತ್ರ- ಗಣ್ಯರು ಈ ವಿಷಯದ ಕುರಿತು ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು

-ಪುಲ್ಲೇಲ ಗೋಪಿಚಂದ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್
-ಲತಿಕಾ ಖನೇಜಾ, ಸಿಇಒ, ಕಾಲೇಜ್ ಸ್ಪೋರ್ಟ್ಸ್ ಆಫ್ ಮ್ಯಾನೇಜ್‌ಮೆಂಟ್
– ಪೀರ್ ನೌಬರ್ಟ್, CCO, ಬುಂಡೆಸ್ಲಿಗಾ
– ಮಾರ್ಕಸ್ ಕ್ರೀಸ್ಮರ್, ಎಫ್‌ಕೆ ಆಸ್ಟ್ರಿಯಾ ವಿಯೆನ್ನಾದ ಮಾಜಿ ಸಿಇಒ
– ಶುಭ್ರಾಂಶು ಸಿಂಗ್, ಸಿಎಂಒ, ಸಿವಿಬಿಯು ಟಾಟಾ ಮೋಟಾರ್ಸ್
– ಲಾಯ್ಡ್ ಮಥಿಯಾಸ್, ಇಂಡಸ್ಟ್ರಿ ಸ್ಟ್ರಾಟಜಿಸ್ಟ್ ಮತ್ತು ಮಾರ್ಕೆಟಿಂಗ್ ತಜ್ಞ

ಸಂಜೆ 5.45 – ನಕ್ಷತ್ರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ (ಎರಡನೇ ಹಂತ)
ಸಂಜೆ 5.55 – G20 ಶೆರ್ಪಾ ಅಮಿತಾಭ್ ಕಾಂತ್ ಅವರು ಬ್ರಾಂಡ್ ಇಂಡಿಯಾ: ಲೆವರೇಜಿಂಗ್ ಸಾಫ್ಟ್ ಪವರ್ ಕುರಿತು ಮಾತನಾಡಲಿದ್ದಾರೆ
ಸಂಜೆ ಸಂಜೆ 6.25- ನಕ್ಷತ್ರ ಸಮ್ಮಾನ್ (ಮೂರನೇ ಹಂತದ ಪ್ರಶಸ್ತಿಗಳು)
ಸಂಜೆ 6.35 – ಫೈರ್‌ಸೈಡ್ ಚಾಟ್ – ಖ್ಯಾತ ನಟಿ, ಪದ್ಮಶ್ರೀ ರವೀನಾ ಟಂಡನ್ ಫೀಮೇಲ್ ಪ್ರೊಟಗಾನಿಸ್ಟ್- ದಿ ನ್ಯೂ ಹೀರೋ – ಕುರಿತು ಮಾತನಾಡಲಿದ್ದಾರೆ.

ಇದನ್ನೂ ಓದಿ: ನೂತನ ಮುಖ್ಯಮಂತ್ರಿಗಳ ಆಡಳಿತ ಹೇಗಿದೆ? ಟಿವಿ9 ವೇದಿಕೆಯಲ್ಲಿ ಚರ್ಚೆ

ಸಂಜೆ 7 ಗಂಟೆ- – ಟಂಡನ್ ಫೀಮೇಲ್ ಪ್ರೊಟಗಾನಿಸ್ಟ್- ದಿ ನ್ಯೂ ಹೀರೋ

ಭಾಗವಹಿಸುವವರು

– ಖುಷ್ಬೂ ಸುಂದರ್, ಮಹಿಳಾ ಆಯೋಗದ ಸದಸ್ಯೆ
– ಮಿರ್ಜಾಮ್ ಐಸೆಲೆ, ನಿರ್ದೇಶಕ, ಸ್ಟಿಫ್ಟಂಗ್ ಜುಗೆಂಡೌಸ್ತೌಸ್ ಬೇಯರ್ನ್
– ಜೂಲಿಯಾ ಫಾರ್, ಫುಟ್ಬಾಲ್ ಪ್ರಚಾರಕಿ, ಬೊರುಸ್ಸಿಯಾ ಡಾರ್ಟ್ಮಂಡ್
– ಆಯೇಷಾ ಗುಪ್ತಾ, ನಿರ್ದೇಶಕಿ ಎಚ್‌ಆರ್, ಗೇಲ್

ಸಂಜೆ 7.45 ಗಂಟೆ- ನಕ್ಷತ್ರ ಸಮ್ಮಾನ್ ಪ್ರಶಸ್ತಿ (4ನೇ ಹಂತ)

ಸಂಜೆ ರಾತ್ರಿ 7.55 – ಬೌಂಡ್ ಲೆಸ್ ಭಾರತ್: ಬಿಯಾಂಡ್ ಬಾಲಿವುಡ್
ಭಾಗವಹಿಸುವವರು
– ಶೇಖರ್ ಕಪೂರ್, ನಟ, ನಿರ್ದೇಶಕ, ನಿರ್ಮಾಪಕ
– ಕ್ರಿಸ್ಟೋಫರ್ ರಿಪ್ಲಿ, ಸಿಇಒ, ಸಿಂಕ್ಲೇರ್ ಬ್ರಾಡ್‌ಕಾಸ್ಟ್ ಗ್ರೂಪ್
– ರಿಕಿ ಕೇಜ್, ಸಂಗೀತಗಾರ, ಪರಿಸರವಾದಿ
– ವಿ ಸೆಲ್ವಗಣೇಶ್, 2023 ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ತಾಳವಾದ್ಯ ವಾದಕ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ