AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆಯ ಉಡುಗೆ ಬಗ್ಗೆ ಕಾಮೆಂಟ್, ಆರೋಪಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದ ನ್ಯಾಯಾಧೀಶರ ವರ್ಗಾವಣೆ

ತಮ್ಮ ವರ್ಗಾವಣೆಯನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌ನ ಏಕಸದಸ್ಯ ನ್ಯಾಯಾಧೀಶರ ಆದೇಶದ ವಿರುದ್ಧ ಸೆಷನ್ಸ್ ನ್ಯಾಯಾಧೀಶರು ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆಯ ಉಡುಗೆ ಬಗ್ಗೆ ಕಾಮೆಂಟ್, ಆರೋಪಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದ ನ್ಯಾಯಾಧೀಶರ ವರ್ಗಾವಣೆ
ಕೇರಳ ಹೈಕೋರ್ಟ್
ರಶ್ಮಿ ಕಲ್ಲಕಟ್ಟ
|

Updated on: Nov 02, 2022 | 3:12 PM

Share

ಕೊಚ್ಚಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಎರಡು ಲೈಂಗಿಕ ಕಿರುಕುಳ ಪ್ರಕರಣಗಳ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ತಮ್ಮ ಆದೇಶದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಸೆಷನ್ಸ್ ನ್ಯಾಯಾಧೀಶರು (sessions judge), ಆರೋಪಿಗಳಿಗೆ ವಿಚಾರಣೆ ದಿನಾಂಕದ ಬಗ್ಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿ ನಂತರ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ ಎಂದು ಕೇರಳ ಹೈಕೋರ್ಟ್‌ಗೆ (Kerala High Court) ಅದರ ರಿಜಿಸ್ಟ್ರಾರ್ ಜನರಲ್ (RG) ಮಾಹಿತಿ ನೀಡಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸೆಷನ್ಸ್ ನ್ಯಾಯಾಧೀಶರು ಅನುಚಿತ ವಿಧಾನ ಕೈಗೊಂಡಿದ್ದು ಇದು ಅವರನ್ನು ಕೊಲ್ಲಂ ಜಿಲ್ಲೆಯ ಕಾರ್ಮಿಕ ನ್ಯಾಯಾಲಯಕ್ಕೆ ವರ್ಗಾಯಿಸಲು ಕಾರಣವಾಯಿತು ಎಂದು ಆರ್‌ಜಿ  ಪಿ ಕೃಷ್ಣ ಕುಮಾರ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ತಮ್ಮ ವರ್ಗಾವಣೆಯನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌ನ ಏಕಸದಸ್ಯ ನ್ಯಾಯಾಧೀಶರ ಆದೇಶದ ವಿರುದ್ಧ ಸೆಷನ್ಸ್ ನ್ಯಾಯಾಧೀಶರು ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ಲೈಂಗಿಕ ಕಿರುಕುಳ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್‌ಗೆ ಜಾಮೀನು ಮಂಜೂರು ಮಾಡಿದ ಸೆಷನ್ಸ್ ನ್ಯಾಯಾಧೀಶ ಎಸ್ ಕೃಷ್ಣಕುಮಾರ್ ಅವರ ಎರಡು ವಿವಾದಾತ್ಮಕ ಆದೇಶಗಳನ್ನು ಉಲ್ಲೇಖಿಸಿದ ಆರ್‌ಜಿ,  ಇದು ಅಧಿಕಾರಿಯ ಅಸಂಬದ್ಧ ವಿಧಾನವನ್ನು ಸೂಚಿಸುತ್ತದೆ ಎಂದಿದ್ದಾರೆ.

ಈ ಆದೇಶಗಳು ಇಡೀ ನ್ಯಾಯಾಂಗವನ್ನು ಸಾಮಾನ್ಯ ಜನರ ಮುಂದೆ ಕೆಟ್ಟ ರೀತಿಯಲ್ಲಿ ನೋಡುವಂತೆ ಮಾಡುವ ಅಧಿಕಾರಿಯ ಧೋರಣೆಯನ್ನು ಸೂಚಿಸುತ್ತವೆ, ಇದು ಸಂಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸದ ಕಡಿಮೆಯಾಗಲು ಕಾರಣವಾಗುತ್ತದೆ” ಎಂದು ಆರ್‌ಜಿ ಅಕ್ಟೋಬರ್ 10 ರಂದು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ನ್ಯಾಯಾಂಗ ಅಧಿಕಾರಿಯು ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ ಪ್ರಕರಣದ ಕುರಿತು ಆರೋಪಿಗಳಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ ನಂತರ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ ಎಂದು ಅಫಿಡವಿಟ್ ನಲ್ಲಿ ಹೇಳಿದೆ.

ನ್ಯಾಯಾಂಗ ಅಧಿಕಾರಿಯ ಈ ನಿರ್ಧಾರವನ್ನು ಹೈಕೋರ್ಟ್ ತಳ್ಳಿಹಾಕಿದೆ. ಆರ್ ಜಿ ಅವರ ಅಫಿಡವಿಟ್ ಪ್ರಕಾರ, ಸಾಧ್ಯವಾದಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡುವ ನ್ಯಾಯಾಧೀಶರ ಗುಣ ಶ್ಲಾಘನೀಯ. ಆದರೆ ಪ್ರಕರಣಗಳನ್ನು ವಿಲೇವಾರಿ ಮಾಡುವ ಆತುರದಲ್ಲಿ ಕಾನೂನು ಹಕ್ಕುಗಳ ಉಲ್ಲಂಘನೆಯಾಗಬಾರದು ಎಂದಿದೆ ನ್ಯಾಯಾಧೀಶರ ಆದೇಶ ಬಗ್ಗೆ ಸಾರ್ವಜನಿಕರು ಮತ್ತು ಶಿಕ್ಷಣತಜ್ಞರು ಕಟುವಾದ ಮತ್ತು ತೀವ್ರ ಟೀಕೆ ಮಾಡಿದ್ದಾರೆ ಎಂದು ಕೋಝಿಕ್ಕೋಡ್ ನ್ಯಾಯಾಂಗ ಜಿಲ್ಲಾ ಉಸ್ತುವಾರಿ ನ್ಯಾಯಾಧೀಶರು ಗಮನಿಸಿದ್ದಾರೆ ಎಂದು ಅದು ಹೇಳಿದೆ. “ಮೇಲಿನ ಸಂದರ್ಭಗಳಲ್ಲಿ, ಕೋಝಿಕ್ಕೋಡ್ ಜಿಲ್ಲಾ ಉಸ್ತುವಾರಿ ನ್ಯಾಯಾಧೀಶರು ರಿಜಿಸ್ಟ್ರಿಯಿಂದವರದಿಯನ್ನು ಕೇಳಿದ್ದು ಮೇಲ್ಮನವಿದಾರ (ಎಸ್ ಕೃಷ್ಣಕುಮಾರ್) ನೀಡಿದ ಹಲವು ಆದೇಶಗಳು ಮತ್ತು ತೀರ್ಪುಗಳನ್ನು ಪರಿಗಣಿಸಿದ್ದಾರೆಎಂದು ಆರ್ ಜಿ ಅವರ ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ
Image
ಮಹಿಳೆಯರ ಪ್ರಚೋದನಕಾರಿ ಉಡುಗೆ ಪುರುಷನಿಗೆ ಆಕೆ ಮೇಲೆ ದೌರ್ಜನ್ಯವೆಸಗಲಿರುವ ಪರವಾನಗಿ ಅಲ್ಲ: ಕೇರಳ ಹೈಕೋರ್ಟ್
Image
ಲೈಂಗಿಕ ಪ್ರಕರಣದ ಆರೋಪಿ ದಲಿತ ಮಹಿಳೆಯನ್ನು ಮುಟ್ಟಿದ್ದಾನೆ ಎಂಬುದು ನಂಬಲಸಾಧ್ಯ: ಕೇರಳದ ನ್ಯಾಯಾಧೀಶ

ಮಹಿಳೆಯ ಉಡುಗೆಗೆ ಸಂಬಂಧಿಸಿದಂತೆ ನ್ಯಾಯಾಧೀಶರ ಅನಗತ್ಯ ಅಭಿಪ್ರಾಯ ಪರಿಗಣಿಸಿದ ನಂತರ ಮೇಲ್ಕಂಡ ಸ್ವಭಾವದ ವಿಷಯಗಳಲ್ಲಿ ವ್ಯವಹರಿಸುವಾಗ ನ್ಯಾಯಾಧೀಶರು ಅನುಸರಿಸಿದ ಅನುಚಿತ ವಿಧಾನಗಳನ್ನು ಪರಿಗಣಿಸಿ, ನ್ಯಾಯದ ಆಡಳಿತದ ಸಾಮಾನ್ಯ ಹಿತಾಸಕ್ತಿಗಳಿಗಾಗಿ ಅವರನ್ನು ಕೊಲ್ಲಂನ ಲೇಬರ್ ಕೋರ್ಟ್ ಗೆ  ನಿಯೋಜಿಸಲು ಹೈಕೋರ್ಟ್ ನಿರ್ಧರಿಸಿತು.

‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?
Daily Devotional: ನೀರು ಹೇಗೆ ಉಪಯೋಗಿಸಿದ್ರೆ ದುಡ್ಡು ಹಾಗೆ ಖರ್ಚಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗುತ್ತದೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗುತ್ತದೆ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಹಾವುಗಳಿಗೆ ಹೇಗೆ ಆಹಾರ ನೀಡುತ್ತಾರೆಂದು ನೋಡಿದ್ದೀರಾ? ಇಲ್ಲಿದೆ ವಿಡಿಯೋ
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್
ಸಂಸತ್​​ನಲ್ಲಿ ಇ-ಸಿಗರೇಟ್ ಬಳಕೆ ವಿರೋಧಿಸಿದ ಸಚಿವ ಅನುರಾಗ್ ಠಾಕೂರ್