ಇಲ್ಲಿ G.O.A.T ಯಾರು? ರಾಹುಲ್ ಗಾಂಧಿಯ ವಿಶೇಷ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್‌ನ ಜೈರಾಮ್ ರಮೇಶ್! ಅದಕ್ಕೆ ನೆಟ್ಟಿಗರು ಏನಂದರು!?
Jairam Ramesh: ಈ ಯಾತ್ರೆಯ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಶನಿವಾರ ಟ್ವೀಟ್ ಮಾಡಿರುವ ಚಿತ್ರವೊಂದು ಇಂಟರ್ನೆಟ್ ನಲ್ಲಿ ಕಣ್ಣಿಗೆ ರಾಚುತ್ತಿದೆ. ಜನ ಒಂದಿಷ್ಟು ಹೆಚ್ಚಿಗೇ ರಿಯಾಕ್ಟ್ ಮಾಡಿದ್ದು, ನಗೆಯಾಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಕೆಲ ರಾಜ್ಯಗಳ ಅಸೆಂಬ್ಲಿ ಚುನಾವಣೆಗಳು ಮತ್ತು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( Rahul Gandhi) ನೇತೃತ್ವದಲ್ಲಿ ಆರಂಭವಾಗಿರುವ ಪ್ಯಾನ್-ಇಂಡಿಯಾ ಯಾತ್ರೆ ಅಂದರೆ ಭಾರತ್ ಜೋಡೋ ಯಾತ್ರೆಯು (Bharat Jodo Yatra) ಮುಂದುವರಿದಿದೆ. ಸದ್ಯಕ್ಕೆ ತೆಲಂಗಾಣದಲ್ಲಿ 19 ಅಸೆಂಬ್ಲಿ ಮತ್ತು ಏಳು ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿನ ಮತದಾರರು ಡಿಸೆಂಬರ್ 2023 ರಲ್ಲಿ ಹೊಸ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ.
ಈ ಯಾತ್ರೆಯ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಅವರು ಶನಿವಾರ ಟ್ವೀಟ್ ಮಾಡಿರುವ ಚಿತ್ರವೊಂದು ಇಂಟರ್ನೆಟ್ ನಲ್ಲಿ ಕಣ್ಣಿಗೆ ರಾಚುತ್ತಿದೆ. ಜನ ಒಂದಿಷ್ಟು ಹೆಚ್ಚಿಗೇ ರಿಯಾಕ್ಟ್ ಮಾಡಿದ್ದು, ನಗೆಯಾಡಿದ್ದಾರೆ. ರಾಹುಲ್ ಗಾಂಧಿ ತಮ್ಮ ಭುಜದ ಮೇಲೆ ಮೇಕೆ ಮರಿಯನ್ನು ಹೊತ್ತಿರುವ ಚಿತ್ರ ಮತ್ತು ಅದಕ್ಕೆ ಅಡಿಬರಹವಾಗಿ G.O.A.T (greatest of all time) ಎಂದು ಬರೆಯಲಾಗಿದೆ. ಅದಕ್ಕೆ ತಿಳಿದವರು ಹೇಳುವುದು… ಇದು ನಿಜಕ್ಕೂ ‘ಸಾರ್ವಕಾಲಿಕ ಶ್ರೇಷ್ಠ’ ಎಂದು ಸೂಚ್ಯವಾಗಿ/ಸಂಕ್ಷೇಪಣವಾಗಿ ಹೇಳಲಾಗಿದೆ. ಆದರೆ ನೆಟ್ಟಿಗರು ಹೌದು ಇಲ್ಲಿ G.O.A.T ಯಾರು? ಎಂದು ಪ್ರಶ್ನಿಸಿದ್ದಾರೆ.
G.O.A.T. #BharatJodoYatra pic.twitter.com/6PBsaRZdVr
— Jairam Ramesh (@Jairam_Ramesh) October 29, 2022
ರಾಹುಲ್ ಗಾಂಧಿ ಈ ವಾರ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ ನಂತರ ತೆಲಂಗಾಣದಲ್ಲಿ (Telangana) ತಮ್ಮ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯನ್ನು ಮುನ್ನಡೆಸಿದರು. ಇಂದು ಮುಂಜಾನೆ ಕಾಂಗ್ರೆಸ್ಸಿನ ಲೋಕಸಭೆ ಸಂಸದ ರಾಹುಲ್ ಗಾಂಧಿ ತೆಲಂಗಾಣದ ಕೋಯಾ ಬುಡಕಟ್ಟಿನ ಸದಸ್ಯರೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಟ್ವೀಟ್ನಲ್ಲಿ ತೋರಿಸಲಾಗಿದೆ.
“ನಮ್ಮ ಆದಿವಾಸಿಗಳು ನಮ್ಮ ಕಾಲಾತೀತ ಸಂಸ್ಕೃತಿಗಳು ಮತ್ತು ವೈವಿಧ್ಯತೆಯ ಭಂಡಾರಗಳು. ಕೊಮ್ಮ ಕೋಯಾ ಬುಡಕಟ್ಟು ನೃತ್ಯಗಾರರೊಂದಿಗೆ ಹೆಜ್ಜೆಹಾಕಿ ಆನಂದಿಸಿದೆ. ಅವರ ಕಲೆ, ಅವರ ಮೌಲ್ಯಗಳನ್ನು ವ್ಯಕ್ತಪಡಿಸುತ್ತದೆ. ಅದನ್ನು ನಾವು ಕಲಿಯಬೇಕು ಮತ್ತು ಸಂರಕ್ಷಿಸಬೇಕು” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
A river of love is flowing through India, rekindling the hope for progress and prosperity. pic.twitter.com/ZavAm2Nvx8
— Rahul Gandhi (@RahulGandhi) October 23, 2022
ತೆಲಂಗಾಣದಲ್ಲಿ ಯಾತ್ರೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದು 20 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ ಮತ್ತು ಸಂಜೆ 7 ಗಂಟೆಗೆ ಜಡ್ಚೆರ್ಲಾ ಎಕ್ಸ್ ರೋಡ್ ಜಂಕ್ಷನ್‌ನಲ್ಲಿ ರಸ್ತೆಬದಿ ಸಭೆಯನ್ನು ಒಳಗೊಂಡಿರುತ್ತದೆ. ಕಾಂಗ್ರೆಸ್‌ನ ತೆಲಂಗಾಣ ಘಟಕವು ರಾಜ್ಯದಲ್ಲಿ ಯಾತ್ರೆ ಚಟುವಟಿಕೆಗಳನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಹೇಳಿದೆ.
ತೆಲಂಗಾಣದಿಂದ ಯಾತ್ರೆ ಮುಗಿದ ನಂತರ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಅಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ರಾಹುಲ್ ಗಾಂಧಿ ಅವರನ್ನು ಮೆರವಣಿಗೆಯ ಮೂಲಕ ಆಹ್ವಾನಿಸಲಿದ್ದಾರೆ.
ರಾಜ್ಯದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಶಿವಸೇನೆ ಜೊತೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಮಿತ್ರಪಕ್ಷಗಳಾಗಿದ್ದವು. ಸೇನೆಯ ನಾಯಕ ಏಕನಾಥ್ ಶಿಂಧೆ ಬಂಡಾಯದ ನಂತರ ಅದನ್ನು ಉರುಳಿಸಲಾಯಿತು. ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಗೊಳಿಸಲು ಬಿಜೆಪಿ ಜೊತೆ ಅವರು ಯಶಸ್ವಿಯಾಗಿ ಕೈಜೋಡಿಸಿದರು.