Champai Soren: ಶಿಬು ಸೊರೆನ್ ಆಪ್ತ, ಜಾರ್ಖಂಡ್‌ನ ನೂತನ ಮುಖ್ಯಮಂತ್ರಿ ಚಂಪೈ ಸೊರೆನ್ ಕಿರುಪರಿಚಯ

Jharkhand New CM: ಆಪಾದಿತ ಭೂ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸುವ ಮುನ್ನವೇ ರಾಜೀನಾಮೆ ನೀಡಿದ ಹೇಮಂತ್ ಸೊರೆನ್ ಅವರ ಉತ್ತರಾಧಿಕಾರಿಯಾಗಿ ಚಂಪೈ ಸೊರೆನ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಟೈಗರ್ ಚಂಪೈ ಸೊರೆನ್ ಎಂದು ಕರೆಯಲ್ಪಡುವ ಈ ನಾಯಕನ ಕಿರುಪರಿಚಯ ಇಲ್ಲಿದೆ.

Champai Soren: ಶಿಬು ಸೊರೆನ್ ಆಪ್ತ, ಜಾರ್ಖಂಡ್‌ನ ನೂತನ ಮುಖ್ಯಮಂತ್ರಿ ಚಂಪೈ ಸೊರೆನ್ ಕಿರುಪರಿಚಯ
ಚಂಪೈ ಸೊರೆನ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 02, 2024 | 4:04 PM

ದೆಹಲಿ ಫೆಬ್ರುವರಿ 02: ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಹಿರಿಯ ನಾಯಕ ಚಂಪೈ ಸೊರೆನ್ (Champai Soren) ಶುಕ್ರವಾರ ಜಾರ್ಖಂಡ್ (Jharkhand) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಪಾದಿತ ಭೂ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸುವ ಮುನ್ನವೇ ರಾಜೀನಾಮೆ ನೀಡಿದ ಹೇಮಂತ್ ಸೊರೆನ್ ಅವರ ಉತ್ತರಾಧಿಕಾರಿಯಾಗಿ ಚಂಪೈ ಸೊರೆನ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಚಂಪೈ ಸೊರೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಅಲಂಗೀರ್ ಆಲಂ ಮತ್ತು ಆರ್‌ಜೆಡಿ ನಾಯಕ ಸತ್ಯಾನಂದ್ ಭೋಕ್ತಾ ಕೂಡ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಚಂಪೈ ಸೊರೆನ್ ಯಾರು?

  1.  67 ವರ್ಷ ವಯಸ್ಸಿನ ಚಂಪೈ ಸೊರೆನ್ ಅವರು ಜಾರ್ಖಂಡ್‌ನ 12 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  2.  ಅವರು ಜಾರ್ಖಂಡ್‌ನ ಕೊಲ್ಹಾನ್ ಪ್ರದೇಶದಿಂದ ಆರನೇ ಮುಖ್ಯಮಂತ್ರಿಯಾಗಿದ್ದಾರೆ. ಇದು ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್ ಮತ್ತು ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಗಳನ್ನು ಒಳಗೊಂಡಿದೆ.
  3.  ಹಿಂದೆ ಜಾರ್ಖಂಡ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಚಂಪೈ ಪ್ರಮುಖ ಬುಡಕಟ್ಟು ನಾಯಕ ಮತ್ತು ರಾಜಕಾರಣಿ.
  4. “ಜಾರ್ಖಂಡ್‌ನ ಹುಲಿ” ಎಂದು ಕರೆಯಲ್ಪಡುವ ಚಂಪೈ ಸೊರೆನ್ 1990 ರ ದಶಕದಲ್ಲಿ ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.
  5. ಕೃಷಿಕ ಕುಟುಂಬದಲ್ಲಿ ಜನಿಸಿದ ಚಂಪೈ ಸೊರೆನ್ ತಮ್ಮ ಆರಂಭಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪಡೆದಿದ್ದು 10 ನೇ ತರಗತಿಯವರೆಗೆ ಓದಿದರು.
  6. ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನೊಂದಿಗೆ ತನ್ನನ್ನು ತಾನು ಹೊಂದಿಕೊಂಡು ಪ್ರತ್ಯೇಕ ಜಾರ್ಖಂಡ್ ಬೇಡಿಕೆಯ ಸಮಯದಲ್ಲಿ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಅವರು ಜೆಎಂಎಂ ಅಧ್ಯಕ್ಷ ಶಿಬು ಸೊರೆನ್ ಅವರ ನಿಷ್ಠಾವಂತರು ಎಂದು ಹೇಳಲಾಗುತ್ತದೆ.
  7. ಚಂಪೈ ಸೊರೆನ್ ಅವರು 1991 ರಲ್ಲಿ ಸರೈಕೆಲಾ ಕ್ಷೇತ್ರದಿಂದ ಉಪಚುನಾವಣೆ ಮೂಲಕ ಪಕ್ಷೇತರ ಶಾಸಕರಾಗಿ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು.
  8. ವರ್ಷಗಳಲ್ಲಿ, ಅವರು ಸರೈಕೆಲಾದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು ಗೆದ್ದರು. ಮೊದಲು ಪಕ್ಷೇತರ ನಂತರ JMM ಟಿಕೆಟ್‌ನಲ್ಲಿ ಗೆದ್ದಿದ್ದರು.
  9. ಚಂಪೈ ಸೊರೆನ್ ಅವರು ಅರ್ಜುನ್ ಮುಂಡಾ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸೆಪ್ಟೆಂಬರ್ 2010 ರಿಂದ ಜನವರಿ 2013 ರವರೆಗೆ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು.
  10. 2019 ರಲ್ಲಿ, ಅವರು ಹೇಮಂತ್ ಸೊರೆನ್ ಅವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಸಾರಿಗೆ ಸಚಿವರಾದರು.

ಇದನ್ನೂ ಓದಿ:ಜಾರ್ಖಂಡ್​​​ನ 12ನೇ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ಪ್ರಮಾಣವಚನ ಸ್ವೀಕಾರ

81 ಸದಸ್ಯರ ಜಾರ್ಖಂಡ್ ಅಸೆಂಬ್ಲಿಯಲ್ಲಿ  ಜೆಎಂಎಂ ನೇತೃತ್ವದ ಮೈತ್ರಿಕೂಟವು 47 ಶಾಸಕರನ್ನು ಹೊಂದಿದ್ದು, ಜೆಎಂಎಂನಿಂದ 29, ಕಾಂಗ್ರೆಸ್‌ನಿಂದ 17 ಮತ್ತು ಆರ್‌ಜೆಡಿಯಿಂದ 1 ಶಾಸಕರನ್ನು ಒಳಗೊಂಡಿದೆ. ಬಿಜೆಪಿ 26 ಸದಸ್ಯರನ್ನು ಹೊಂದಿದ್ದರೆ, ಎಜೆಎಸ್‌ಯು ಪಕ್ಷವು ಮೂರು ಸದಸ್ಯರನ್ನು ಹೊಂದಿದೆ. ಹೆಚ್ಚುವರಿಯಾಗಿ, ಎನ್‌ಸಿಪಿ ಮತ್ತು ಸಿಪಿಐ (ಎಂಎಲ್) ತಲಾ ಒಬ್ಬ ಶಾಸಕರನ್ನು ಮತ್ತು ಇಬ್ಬರು ಪಕ್ಷೇತರರನ್ನು ಹೊಂದಿದೆ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್