ಅಮೃತ ಕಲಶ ಯಾತ್ರೆಯ ವಿಶೇಷತೆಯೇನು?; ಈ ರೈಲುಗಳ ಮಾರ್ಗವೇನು?

ಅಮೃತ್ ಕಲಶ ಯಾತ್ರೆಯು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಷ್ಟ್ರೀಯ ವೀರರಿಗೆ ನೀಡುವ ಗೌರವವಾಗಿದೆ. 'ಮೇರಿ ಮಾಟಿ ಮೇರಾ ದೇಶ್' ಅಭಿಯಾನವು ತಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಾರತೀಯ ಸೇನೆಯ ಸೈನಿಕರಿಗೆ ಗೌರವವಾಗಿದೆ.

ಅಮೃತ ಕಲಶ ಯಾತ್ರೆಯ ವಿಶೇಷತೆಯೇನು?; ಈ ರೈಲುಗಳ ಮಾರ್ಗವೇನು?
ಅಮೃತ್ ಕಲಶ ಯಾತ್ರೆImage Credit source: Live Mint
Follow us
ಸುಷ್ಮಾ ಚಕ್ರೆ
|

Updated on:Oct 27, 2023 | 11:37 AM

‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನದ ಅಡಿಯಲ್ಲಿ ಭಾಗವಹಿಸುವವರಿಗೆ ನವದೆಹಲಿಗೆ ಆಗಮಿಸಲು ಹಲವಾರು ಅಮೃತ ಕಲಶ ವಿಶೇಷ ರೈಲುಗಳನ್ನು ದೇಶಾದ್ಯಂತ ವ್ಯವಸ್ಥೆ ಮಾಡಲಾಗಿದೆ. ಈ ರೈಲುಗಳು ಇಂದಿನಿಂದ ಅಕ್ಟೋಬರ್ 27ರಿಂದ ನವದೆಹಲಿಗೆ ಸಂಚರಿಸಲಿವೆ. ದಕ್ಷಿಣ ಮಧ್ಯ ರೈಲ್ವೆ (SCR) ಅಕ್ಟೋಬರ್ 28ರಂದು ‘ಅಮೃತ್ ಕಲಶ ಯಾತ್ರಾ’ ಎಂಬ ವಿಶೇಷ ರೈಲು ಸಂಚಾರವನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಅದು ವಿಜಯವಾಡದಿಂದ ನವದೆಹಲಿಗೆ ಚಲಿಸಲಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ “ಮೇರಿ ಮಾಟಿ ಮೇರಾ ದೇಶ್” ಅಭಿಯಾನದ ಭಾಗವಾಗಿ ಅಕ್ಟೋಬರ್ 25ರಂದು ರಾಜ್ ನಿವಾಸ್‌ನಿಂದ “ಅಮೃತ್ ಕಲಶ ಯಾತ್ರೆ”ಗೆ ಚಾಲನೆ ನೀಡಿದ್ದಾರೆ. ಮೇರಿ ಮಾತಿ ಮೇರಾ ದೇಶ್ (MMMD) ಅಭಿಯಾನವು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೇನಾ ಯೋಧರಿಗೆ ಗೌರವ ಸಲ್ಲಿಸುವುದಾಗಿದೆ. ಇದರ ಭಾಗವಾಗಿ ರಾಷ್ಟ್ರದಾದ್ಯಂತದ ಮನೆಗಳಿಂದ ಮಣ್ಣು ಮತ್ತು ಅಕ್ಕಿಯನ್ನು ಸಂಗ್ರಹಿಸಿ ಅಮೃತ ಕಲಶ ಪಾತ್ರೆಗಳಲ್ಲಿ ಇರಿಸಲಾಗುವುದು. ನವದೆಹಲಿಯ ಇಂಡಿಯಾ ಗೇಟ್ ಬಳಿಯ ಕರ್ತವ್ಯಪಥ್‌ನಲ್ಲಿ ‘ಅಮೃತ್ ವಾಟಿಕಾ’ ಮತ್ತು ‘ಆಜಾದಿ ಕಾ ಅಮೃತ್ ಮಹೋತ್ಸವ’ ಸ್ಮಾರಕಗಳ ರಚನೆಯಲ್ಲಿ ಈ ವಸ್ತುಗಳು ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿ ಪಾಕ್ ಸೇನೆಯಿಂದ ಗುಂಡಿನ ದಾಳಿ; ಬಿಎಸ್​ಎಫ್ ಯೋಧರು ಸೇರಿ ಐವರಿಗೆ ಗಾಯ

ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯಿಂದ ಅಮೃತ ಕಲಶ ಯಾತ್ರೆಗೆ ಚಾಲನೆ ನೀಡಿದರು. ಮಣ್ಣು ತುಂಬಿದ ಒಟ್ಟು 270 ಕಲಶಗಳನ್ನು ಸಾಗಿಸುವ ದೆಹಲಿಗೆ ಹೋಗುವ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಅವರು ಚಾಲನೆ ನೀಡಿದರು. ಈ ವರ್ಷ ಸೆಪ್ಟೆಂಬರ್ 20ರಂದು ಅಸ್ಸಾಂನಲ್ಲಿ ಅಮೃತ ಕಲಶ ಯಾತ್ರೆ ಪ್ರಾರಂಭವಾಗಿತ್ತು. ಈ ಯಾತ್ರೆಯ ಭಾಗವಾಗಿ, ಅಸ್ಸಾಂನ ಎಲ್ಲಾ ಗ್ರಾಮಗಳು ಮತ್ತು ಮುನ್ಸಿಪಲ್ ವಾರ್ಡ್‌ಗಳ ಮನೆಗಳಿಂದ ಮಣ್ಣನ್ನು ಸಂಗ್ರಹಿಸಿ ಗುವಾಹಟಿಯಲ್ಲಿ ಒಟ್ಟಿಗೆ ಮಿಶ್ರಣ ಮಾಡಿ ಮಡಕೆಗಳಿಗೆ ಹಾಕಲಾಯಿತು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ರೈಲು ಡಿಕ್ಕಿ; 15 ಮಂದಿ ಸಾವು, ಹಲವರಿಗೆ ಗಾಯ

ಈ ವಿಶೇಷ ರೈಲು ಅಕ್ಟೋಬರ್ 28ರ ಶನಿವಾರ ಬೆಳಿಗ್ಗೆ 10 ಗಂಟೆಗೆ ವಿಜಯವಾಡದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ತ್ರಿಪುರಾ ಮತ್ತು ಮೇಘಾಲಯದ ರೈಲು ಇಂದು ದೆಹಲಿಗೆ ತಲುಪಲಿದ್ದು, ಅಸ್ಸಾಂ ಮತ್ತು ಸಿಕ್ಕಿಂ ರೈಲುಗಳು ಅಕ್ಟೋಬರ್ 28ರಂದು ತಲುಪಲಿವೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಅಮೃತ್ ಕಲಶ ಯಾತ್ರೆಯು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಷ್ಟ್ರೀಯ ವೀರರಿಗೆ ನೀಡುವ ಗೌರವವಾಗಿದೆ. ‘ಮೇರಿ ಮಾಟಿ ಮೇರಾ ದೇಶ್’ (MMMD) ಅಭಿಯಾನವು ತಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಾರತೀಯ ಸೇನೆಯ ಸೈನಿಕರಿಗೆ ಗೌರವವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 27 October 23

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್