ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?

|

Updated on: Apr 25, 2021 | 12:57 PM

Coronavirus Cases in Pune: ದೇಶದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಸಿರಮ್ ಇನ್ಸಿಟ್ಯೂಟ್ ಕೊವಿಡ್ ರೋಗದ ವಿರುದ್ಧ ಹೋರಾಡಲು ಲಸಿಕೆ ನಿರ್ಮಾಣದಲ್ಲಿ ತೊಡಗಿತ್ತು. ಅಷ್ಟೇ ಅಲ್ಲ ದೇಶದಲ್ಲಿ ಮೊತ್ತ ಮೊದಲ ಬಾರಿ ಕೊವಿಡ್ ಪ್ರಕರಣ ಪತ್ತೆಯಾದಾಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಇಂಡಿಯನ್ ಇನ್ಸಿಟ್ಯೂಟ್ ಆಫ್ ವೈರಾಲಜಿ(NIV) ಕೊವಿಡ್ ಪರೀಕ್ಷೆ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ

ವೈರಸ್ ಅಧ್ಯಯನ ಕೇಂದ್ರ, ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪುಣೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವುದೇಕೆ?
ಮುಂಬೈಯಲ್ಲಿ ಕೊವಿಡ್ ಪರೀಕ್ಷೆ
Follow us on

ಪುಣೆ: ಭಾರತದಲ್ಲಿ ಕೊವಿಡ್ ಲಸಿಕೆ ಉತ್ಪಾದಿಸುವ ಸಂಸ್ಥೆ, ವೈರಸ್ ಅಧ್ಯಯನ ಕೇಂದ್ರವಿರುವ ನಗರ ಪುಣೆ. ವಿಪರ್ಯಾಸ ಎಂದರೆ ಇಲ್ಲಿ ಅತೀ ಹೆಚ್ಚು ಕೊವಿಡ್ ಸೋಂಕಿತರಿದ್ದಾರೆ. ಹದಿನೈದು ದಿನಗಳ ಹಿಂದೆ ಇಲ್ಲಿ ಲಸಿಕೆ ಕೊರತೆಯೂ ಕಂಡು ಬಂದಿತ್ತು. ನಿನ್ನೆ ಬಳಗ್ಗೆ ಮಂಜಾರಿಯಲ್ಲಿರುವ 42 ಎಕರೆ ವಿಸ್ತೀರ್ಣದ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ದ ಲಸಿಕೆಯೊಂದಿಗೆ ಹೆಚ್ಚಿನ ಟ್ರಕ್ ಗಳು ಹೊರಬರುವ ದೃಶ್ಯಕಾಣಿಸಿದೆ. ‘ವೋ ಸಿರಮ್ ಹೈ, ವಹಾನ್ ಕೊವಿಡ್ ಕಾ ದವಾಯಿ ಬನ್ತಾ ಹೈ’ (ಅದು ಸಿರಮ್, ಕೊವಿಡ್ ಗಾಗಿ ಅಲ್ಲಿ ಲಸಿಕೆ ಸಿದ್ದವಾಗುತ್ತದೆ). ಸಿರಮ್ ಇನ್ಸಿಟ್ಯೂಟ್ ನತ್ತ ಕೈ ತೋರಿಸಿ ಹಣ್ಣುಮಾರುವ ವ್ಯಾಪಾರಿಯೊಬ್ಬರು ಹೀಗೆ ಹೇಳಿದರು. ಕಳೆದ ಒಂದು ವರ್ಷದಿಂದ ಪುಣೆಯ ಸಿರಮ್ ಇನ್ಸಿಟ್ಯೂಟ್ ಹೆಸರು ಹೆಚ್ಚು ಜನಪ್ರಿಯವಾಗಿದೆ.

ದೇಶದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಸಿರಮ್ ಇನ್ಸಿಟ್ಯೂಟ್ ಕೊವಿಡ್ ರೋಗದ ವಿರುದ್ಧ ಹೋರಾಡಲು ಲಸಿಕೆ ನಿರ್ಮಾಣದಲ್ಲಿ ತೊಡಗಿತ್ತು. ಅಷ್ಟೇ ಅಲ್ಲ ದೇಶದಲ್ಲಿ ಮೊತ್ತ ಮೊದಲ ಬಾರಿ ಕೊವಿಡ್ ಪ್ರಕರಣ ಪತ್ತೆಯಾದಾಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಇಂಡಿಯನ್ ಇನ್ಸಿಟ್ಯೂಟ್ ಆಫ್ ವೈರಾಲಜಿ(NIV) ಕೊವಿಡ್ ಪರೀಕ್ಷೆ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ .

ಇದು ದೇಶದ ಹೆಚ್ಚಿನ ಆರ್‌ಟಿಪಿಸಿಆರ್ ಮತ್ತು ಕ್ಷಿಪ್ರ ಆಂಟಿಜೆನ್ ಪರೀಕ್ಷೆಗಳು ಇಲ್ಲಿ ನಡೆದಿದೆ. ದೇಶದಲ್ಲಿ SARS-CoV-2 ವೈರಸ್ ನ ಮೊದಲ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಚಿತ್ರ ಬಿಡುಗಡೆ ಮಾಡಿದ್ದು ಇದೇ ಸಂಸ್ಥೆ. ಸಾಂಕ್ರಾಮಿಕ ರೋಗದ ಅವಧಿಯುದ್ದಕ್ಕೂ, ಇದು ವೈರಸ್ ಬಗ್ಗೆ ನಿರ್ಣಾಯಕ ಅಧ್ಯಯನಗಳನ್ನು ಬಿಡುಗಡೆ ಮಾಡಿದೆ. ಜೀನೋಮ್ ಅನುಕ್ರಮವನ್ನು ನಡೆಸುತ್ತಿರುವ ಮತ್ತು ಅದರ ವಿವಿಧ ತಳಿಗಳ ಬಗ್ಗೆ ಅಧ್ಯಯನ ನಡೆಸುವ 10 ಪ್ರಯೋಗಾಲಯಗಳಲ್ಲಿ ಇದೂ ಒಂದು. ವೈಜ್ಞಾನಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ಪುಣೆ ಕೊವಿಡ್ ನಿರ್ವಹಣೆಯ ಅತ್ಯುತ್ತಮ ಉದಾಹರಣೆಯೆಂದು ತೋರುತ್ತದೆ.

ಮಹಾರಾಷ್ಟ್ರದ ಹೆಲ್ತ್ ಬುಲೆಟಿನ್ ಪ್ರಕಾರ ಪುಣೆಯಲ್ಲಿ 13,219 ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. ಮುಂಬೈ ನಂತರ ಅತೀ ಹೆಚ್ಚು ಸೋಂಕಿತರು ಇರುವ ನಗರವಾಗಿದೆ ಪುಣೆ. ಕೊವಿಡ್ ಎರಡನೇ ಅಲೆಯಲ್ಲಿ ಅತೀ ಹೆಚ್ಚುಕೊವಿಡ್ ಪ್ರಕರಣಗಳು ವರದಿಯಾಗಿದ್ದು ಇಲ್ಲಿಯೇ.

ಹೆಚ್ಚಿನ ಸಂಖ್ಯೆಯ ಲಸಿಕೆಗಳನ್ನು ಉತ್ಪಾದಿಸುವ ಅತ್ಯುತ್ತಮ ಸಿರಮ್ ಇನ್ಸ್ಟಿಟ್ಯೂಟ್ ಅನ್ನು ನಾವು ಹೊಂದಿದ್ದೇವೆ , ನಾವು ಇದನ್ನು ಸರಿಯಾಗಿ ನಿರ್ವಹಿಸಲಿಲ್ಲ. ಫೈಜರ್ ಲಸಿಕೆಗಳನ್ನು ಖರೀದಿಸಲು ಇಸ್ರೇಲ್ ದುಪ್ಪಟ್ಟು ಬೆಲೆಯನ್ನು ಪಾವತಿಸಿದೆ ಎಂದು ನಾನು ಲೇಖನವೊಂದರಲ್ಲಿ ಓದಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಲಸಿಕೆಗಳನ್ನು ನೀಡಲು ಅವರು ನಿರ್ಧರಿಸಿದ್ದಾರೆ. ಆದರೆ ನಾವು ಈ ಪ್ರಕ್ರಿಯೆಯನ್ನು ಗೊಂದಲಗೊಳಿಸಿದ್ದೇವೆ. ಪುಣೆಯಲ್ಲಿ ಲಭ್ಯವಿರುವ ಈ ಸೌಲಭ್ಯವನ್ನು ಉತ್ತಮವಾಗಿ ಬಳಸಿಕೊಂಡಿಲ್ಲ ಎಂದು ಇಂಧನ ಮತ್ತು ಪರಿಸರ ಕಂಪನಿಯಾದ ಥರ್ಮ್ಯಾಕ್ಸ್‌ನ ಮಾಜಿ ಅಧ್ಯಕ್ಷ, ಟೀಚ್ ಫಾರ್ ಇಂಡಿಯಾದ ಅನು ಆಗಾ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

ರೋಗದ ವಿರುದ್ಧ ಸುದೀರ್ಘ ಹೋರಾಟ
ನಿವೃತ್ತರ ಮತ್ತು ನಿರಾಶ್ರಿತರ ತಾಣ ಕರೆಯಲ್ಪಡುವ ಪುಣೆಯಲ್ಲಿ ಆರೋಗ್ಯ ವ್ಯವಸ್ಥೆಯು ಉತ್ತಮವಾಗಿದೆ. ರೋಗದ ಆರಂಭಿಕ ಅವಸ್ಥೆಯಲ್ಲಿ ಮೂಲ ಪತ್ತೆ, ಪರೀಕ್ಷೆ, ರೋಗನಿರ್ಣಯ ಮಾಡುವಲ್ಲಿ ಇದು ಪ್ರಧಾನ ಪಾತ್ರ ವಹಿಸಿದೆ. ಪುಣೆಯ ಹಿತಕರ ಮತ್ತು ಸಾಮಾನ್ಯ ರೀತಿಯ ಹವಾಮಾನದಿಂದಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ವ್ಯಕ್ತಿಗಳು ನೆಲೆಸಿದ್ದಾರೆ. ಹೆಚ್ಚು ಬಿಸಿಲೂ ಇಲ್ಲ, ತುಂಬಾ ತಣ್ಣನೆಯ ವಾತಾವರಣವೂ ಅಲ್ಲದ ಈ ನಗರದಲ್ಲಿ ದಟ್ಟವಾದ ಜನಸಂಖ್ಯೆ ರೋಗಗಳು ತ್ವರಿತವಾಗಿ ಹೆಚ್ಚಲು ಕಾರಣವಾಯಿತು.

ಜಿಲ್ಲೆಯ ಅನೇಕ ಸಾರ್ವಜನಿಕ ಸಂಸ್ಥೆಗಳ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳೊಂದಿಗಿನ 150 ವರ್ಷಗಳ ಕಾಲದ ಹೋರಾಟವನ್ನು ನೆನಪಿಸಿಕೊಳ್ಳುತ್ತಾರೆ. ಪುಣೆಯಲ್ಲಿ ಸಾಂಕ್ರಾಮಿಕ ರೋಗಗಳ ವಿರುದ್ಧದ ಸೆಣಸಾಟ 19 ನೇ ಶತಮಾನದಲ್ಲಿ ಪ್ಲೇಗ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಇದು ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಮತ್ತು ಐಟಿ ಹಬ್‌ಗಳಲ್ಲಿ ಒಂದಾಗಿದೆ. ಇದು ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇಯಿಂದಾಗಿ ಇಲ್ಲಿನ ಜನಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಆಕ್ಸಿಜನ್, ಬೆಡ್ ಮತ್ತು ರೆಮ್ ಡಿಸಿವರ್ ಗಾಗಿ ಹೆಚ್ಚುತ್ತಿರುವ ಬೇಡಿಕೆ ಇಲ್ಲಿನ ಜನರನ್ನು ಹೈರಾಣಾಗಿಸಿದೆ.

ಪಿಂಪ್ರಿ-ಚಿಂಚ್‌ವಾಡ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಆಮ್ಲಜನಕ ನೀಡುವಾಗ ಬೆಡ್ ಸಿಗದೆ ಕುರ್ಚಿಯ ಮೇಲೆ ಕುಳಿತುಕೊಳ್ಳಬೇಕಾಯಿತು ಎಂದು ಅವರ ಕುಟುಂಬ ಸದಸ್ಯ ಹೇಳಿದ್ದಾರೆ.ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ನಂತರ ಅವರನ್ನು ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ಮೈದಾನದಲ್ಲಿ ಸ್ಥಾಪಿಸಲಾದ 700 ಹಾಸಿಗೆಗಳ ಜಂಬೊ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು.

ಲಸಿಕೆ ಉತ್ಪಾದನಾ ಸಂಸ್ಥೆಯಿರುವ ಪ್ರದೇಶದಲ್ಲಿಯೇ ಲಸಿಕೆ ಕೊರತೆ
ಎಸ್‌ಐಐನ ಮಂಜಾರಿ ಸ್ಥಾವರವು ನಗರದಲ್ಲಿನ ಎರಡು ದೊಡ್ಡ ಲಸಿಕೆ ಕಾರ್ಖಾನೆಗಳಲ್ಲಿ ಒಂದಾಗಿದೆ. ಈ ಎರಡು ಕಾರ್ಖಾನೆಗಳು ದಿನಕ್ಕೆ 2.4 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿವೆ.
ಕೊವಿನ್ ಪೋರ್ಟಲ್ ಪ್ರಕಾರ, ಪುಣೆಯಲ್ಲಿ ಕನಿಷ್ಠ 20,27,970 ಜನರು ಗುರುವಾರ ತನಕ ಲಸಿಕೆಯ ಮೊದಲ ಡೋಸ್ ಪಡೆದಿದ್ದು, ಇದು ಭಾರತೀಯ ಜಿಲ್ಲೆಗಳಲ್ಲಿ ಅತೀ ಹೆಚ್ಚು ಲಸಿಕೆ ಪಡೆದ ಜಿಲ್ಲೆಯಾಗಿದೆ.

ಕೋವಿಶೀಲ್ಡ್ ಅನ್ನು ಜಗತ್ತಿಗೆ ಕಳುಹಿಸುವ ಈ ನಗರದಲ್ಲಿ ಲಸಿಕೆ ಕೊರತೆ ಕಾಡುತ್ತಲೇ ಇದೆ. ಕಳೆದ ತಿಂಗಳುಗಳಲ್ಲಿ ಎರಡು ಬಾರಿ ಇಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಮಾರ್ಚ್ ತಿಂಗಳಲ್ಲಿ ಲಸಿಕೆಗಳ ದಾಸ್ತಾನು ಮುಗಿಯುತ್ತಿದ್ದಂತೆ, ಕೋವಾಕ್ಸಿನ್ ಅನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರಮುಖ ಲಸಿಕೆಯನ್ನಾಗಿ ಮಾಡಲಾಯಿತು. ಇತ್ತೀಚೆಗೆ ಲಸಿಕೆಗಳ ದಾಸ್ತಾನು ತುಂಬಾ ಕಡಿಮೆಯಾಗಿದ್ದು ಕೇವಲ ಎರಡು ದಿನಗಳವರೆಗೆ ಇರುತ್ತದೆ.

ಅಧಿಕಾರಿಗಳು ಇದನ್ನು ಬೇಡಿಕೆ-ಪೂರೈಕೆ ಸಮಸ್ಯೆ (demand-supply ) ಎಂದು ಕರೆದರು. ರಾಜಕೀಯ ಮತ್ತು ಕೈಗಾರಿಕಾ ಚಟುವಟಿಕೆಗಳಿಂದ ಸಂಸ್ಥೆಗಳು ಅಧಿಕ ಬೇಡಿಕೆಗಳನ್ನು ಪೂರೈಸಬೇಕಾಗಿ ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ..ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸುಪ್ರಿಯಾ ಸುಲೆ, ಪುಣೆಯ ಬಾರಾಮತಿಯ ಸಂಸದ ಮತ್ತು ಆರ್‌ಎಸ್‌ಎಸ್‌ನ ಸ್ಥಳೀಯ ಘಟಕ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರು ಲಸಿಕೆ ಪಡೆಯುವಂತೆ ಮಾಡಿದರು.

ಲಸಿಕೆ ವಿತರಣೆ ಪ್ರಾರಂಭವಾದಾಗ, ಎನ್‌ಸಿಪಿಯ ಸುಪ್ರಿಯಾ ಸುಲೆ ತನ್ನ ಎಲ್ಲ ರಾಜಕೀಯ ಕಾರ್ಯಕರ್ತರನ್ನು ಲಸಿಕೆ ಪಡೆಯಬೇಕೆಂದು ಹೇಳಿದರು.ಸುಲೆ ಅವರಿಗೆ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಬೆಂಬಲವಿರುವುದರಿಂದ ಅಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ನಾವು ಮೂರು ದಿನಗಳಲ್ಲಿ ಲಸಿಕೆ ಹಾಕಬೇಕೆಂದು ನಿರೀಕ್ಷಿಸುತ್ತಿದ್ದ ಜನರು ಒಂದೇ ದಿನದಲ್ಲಿ ಲಸಿಕೆ ಪಡೆದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಸಿಕೆ ಪಡೆಯಲು ಅರ್ಹತೆ ಹೊಂದಿರುವ ಶೇ 95 ರಷ್ಟು ಸ್ವಯಂಸೇವಕರು ಲಸಿಕೆ ಪಡೆದಿದ್ದಾರೆ ಎಂದು ಪುಣೆಯ ಆರ್ ಎಸ್ಎಸ್ ಶಾಖೆಯ ಪಿಆರ್​ಒ ಮನೋಜ್ ಪೋಚತ್ ಹೇಳಿದ್ದಾರೆ.

ಪುಣೆ ಫ್ಲಾಟ್ ಫಾರಂ ಫಾರ್ ಕೊವಿಡ್ 19 ರೆಸ್ಪಾನ್ಸ್ (PPCR) ಎಂಬ ಸ್ವಯಂ ಸೇವಕ ಸಂಘಟನೆಯ ನಿರ್ವಾಹಕ ಮತ್ತು ಮಹರಟ್ಟಾ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಅಂಡ್ ಅಗ್ರಿಕಲ್ಚರ್ (MCCIA) ಅಧ್ಯಕ್ಷ ಸುಧೀರ್ ಮೆಹ್ತಾ ಪ್ರಕಾರ ಇಲ್ಲಿರುವ ಕೈಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶೇ 75-80 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಹಲವೆಡೆ ಲಸಿಕೆ ಪಡೆಯಲು ಜನರ ಸಂಖ್ಯೆ ಅಧಿಕ ಪ್ರಮಾಣದಲ್ಲಿರಲಿಲ್ಲ. ಹಾಗಾಗಿ ಲಸಿಕೆ ಕೊರತೆ ಇದೆ ಎಂದು ಹೇಳಲಾಗುವುದಿಲ್ಲ

ಪುಣೆಯಲ್ಲಿ ಲಸಿಕೆ ತಯಾರಾಗುತ್ತಿದೆ. ಹಾಗಾಗಿ ನಾವು ಲಸಿಕೆ ಮೊದಲು ಪಡೆಯಬೇಕು ಎಂದು ಇಲ್ಲಿನ ಜನರು ಭಾವಿಸಿದ್ದಾರೆ ಎಂದು ದಿ ಪ್ರಿಂಟ್ ಜತೆ ಮಾತನಾಡಿದ ಪುಣೆ ಡಿವಿಷನಲ್ ಕಮಿಷನರ್ ಹೇಳಿದ್ದಾರೆ.

ಆದಾಗ್ಯೂ, ಲಸಿಕೆ ಉತ್ಪಾದನಾ ಘಟಕ ಮತ್ತು ಸಾಂಕ್ರಾಮಿಕ ನಿರ್ವಹಣೆ ನಡುವಿನ ಅಂತರವನ್ನು ಕಿಲೋಮೀಟರ್‌ಗಳಲ್ಲಿ ಅಳೆಯಲಾಗುವುದಿಲ್ಲ. ಕಳೆದ ವಾರ ತನಕ ಪುಣೆ ಇತರ ಜಿಲ್ಲೆಗಳಂತೆ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆದ ನಂತರವೇ ಲಸಿಕೆ ಪ್ರಮಾಣವನ್ನು ಪಡೆಯುತ್ತದೆ. ಲಸಿಕೆ ತಯಾರಕರಾದ ಎಸ್‌ಐಐ ಮತ್ತು ಭಾರತ್ ಬಯೋಟೆಕ್ (ಕೊವಾಕ್ಸಿನ್‌ಗೆ) ಕೇಂದ್ರವು ಆದೇಶಗಳನ್ನು ನೀಡುತ್ತದೆ ಮತ್ತು ಪ್ರತಿ ರಾಜ್ಯಕ್ಕೆ ಹೋಗುವ ಪ್ರಮಾಣಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ.

ಆದರೆ ಈಗ ನರೇಂದ್ರ ಮೋದಿ ಸರ್ಕಾರವು ರಾಜ್ಯಗಳಿಗೆ ಲಸಿಕೆಗಳನ್ನು ಸಂಗ್ರಹಿಸಲು ಮತ್ತು ಅವುಗಳ ಸ್ಥಳೀಯ ಅಗತ್ಯಗಳು ಮತ್ತು ವಾಸ್ತವಗಳಿಗೆ ಅನುಗುಣವಾಗಿ ಆಡಳಿತ ನಡೆಸಲು ಅವಕಾಶ ನೀಡಲು ನಿರ್ಧರಿಸಿದೆ.

ಪುಣೆ ಮತ್ತು ಅದರ ವೈಜ್ಞಾನಿಕ ಸಮುದಾಯ
ಕೊವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲೆಗೆ ಸಹಾಯ ಮಾಡುವಲ್ಲಿ ಪುಣೆಯ ವೈಜ್ಞಾನಿಕ ಸಮುದಾಯವು ಯಾವ ಪಾತ್ರವನ್ನು ವಹಿಸಿದೆ ಎಂಬ ಪ್ರಶ್ನೆ ಕೇಳಿದರೆ ವಿಭಿನ್ನವಾದ ಉತ್ತರಗಳು ಲಭಿಸುತ್ತವೆ.  ನಮ್ಮ ಕೆಲವು ಹಿರಿಯ ಅಧಿಕಾರಿಗಳು ಎನ್‌ಐವಿಗೆ ಭೇಟಿ ನೀಡಿದ್ದು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ವೈರಸ್ ಮತ್ತು ವೈರಸ್ ದ್ವಿಗುಣಗೊಳ್ಳುವುದು ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳಿಗೆ ಇಲ್ಲಿ ಉತ್ತರ ಸಿಕ್ಕಿದೆ . ರೂಪಾಂತರಕ್ಕೆ ಸಂಬಂಧಿಸಿದಂತೆ ಈಗ ನಾವು ಅವರಿಂದ ಮಾಹಿತಿ ಪಡೆಯಲು ಯೋಚಿಸುತ್ತಿದ್ದೇವೆ ಎಂದು ಕೊವಿಡ್ -19 ರ ರಾಜ್ಯ ಸಲಹೆಗಾರ ಡಾ. ಸುಭಾಷ್ ಸಲುಂಖೆ ಅವರು ದಿ ಪ್ರಿಂಟ್‌ಗೆ ತಿಳಿಸಿದರು.

ಐಐಎಸ್ಇಆರ್, ಎನ್ಐವಿಯನ್ನು ಹೆಚ್ಚಾಗಿ ಜಿಲ್ಲಾ ಕಾರ್ಯಪಡೆ ಸಭೆಗಳಿಗೆ ಸಲಹೆಗಾಗಿ ಆಹ್ವಾನಿಸಲಾಗುತ್ತದೆ. ಐಐಎಸ್ಇಆರ್ ಸಿರೊಸರ್ವಿಯನ್ನು ಸಹ ಮಾಡಿತು. ಇದನ್ನು ಜಿಲ್ಲಾ ಕಾರ್ಯಪಡೆಯು ಪ್ರಾಯೋಜಿಸಿತು, ಎನ್ಐವಿ ಕೂಡ ಕೊಡುಗೆ ನೀಡುತ್ತಿದೆ. ನಾವು ಆಗಾಗ್ಗೆ ವೈರಸ್ ಮತ್ತು ಹರಡುವಿಕೆಯನ್ನು ಚರ್ಚಿಸುತ್ತೇವೆ ಎಂದು ಪುಣೆ ಮಹಾನಗರ ಪಾಲಿಕೆ ಆಯುಕ್ತ ವಿಕ್ರಮ್ ಕುಮಾರ್ ಹೇಳಿದ್ದಾರೆ.

ಎರಡನೇ ಅಲೆ ಉಂಟುಮಾಡುವ ರೂಪಾಂತರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, ಅವರು ನಮಗೆ ಹೇಳಿಲ್ಲ, ಅವರು ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಉತ್ತರಿಸಿದ್ದಾರೆ.

ಇಲ್ಲಿನ ವೈಜ್ಞಾನಿಕ ಸಮುದಾಯವು ತನ್ನ ಸಂಶೋಧನೆಯನ್ನು ಮೀರಿದೆ. ನಾನು ವೈಜ್ಞಾನಿಕ ರೀತಿಯಲ್ಲಿ ಕಾಳಜಿ ವ್ಯಕ್ತಪಡಿಸಿದ್ದನ್ನು ಕೇಳಿಲ್ಲ, ಆದರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಿವಿಧ ವೈದ್ಯರು,ಎನ್​ಜಿಒ ಇಲ್ಲಿದ್ದಾರೆ ಎಂದು ಪುಣೆ ಮೂಲದ ಪತ್ರಕರ್ತೆ ವಿನಿತಾ ದೇಶ್​ಮುಖ್ ಹೇಳಿದ್ದಾರೆ.

ಅವರು ಸಂವಹನ ನಡೆಸುತ್ತಿದ್ದಾರೆ ಎಂದು ನೀವು ಹೇಳುವಂತಿಲ್ಲ, ಅವರು ದೆಹಲಿಯಲ್ಲಿ ತಮ್ಮ ಹಿರಿಯರ ಮೂಲಕ ಸಂವಹನ ನಡೆಸುತ್ತಾರೆ, ಮತ್ತು ಇದು ತಪ್ಪಲ್ಲ ಎಂದು ಪುಣೆಯ ಪುರಸಭೆಯ ಮಾಜಿ ಆಯುಕ್ತ ಮತ್ತು ಮಹಾರಾಷ್ಟ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಮಹೇಶ್ ಜಗಾಡೆ ಹೇಳಿದ್ದಾರೆ.

ಸಂಸ್ಥೆಗಳು ಮತ್ತು ಪುಣೆ ಜಿಲ್ಲೆಯ ನಡುವಿನ ಸಂವಹನವನ್ನು ರೆಡ್-ಟ್ಯಾಪಿಸಮ್ ಮಿತಿಗೊಳಿಸುತ್ತದೆ ಎಂದು ಮಹಾರಾಷ್ಟ್ರದ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಅವಿನಾಶ್ ಭೋಂಡ್ವೆ ಹೇಳಿದರು.

ಅವರು ಎಂದಿಗೂ ಹೊಸ ರೂಪಾಂತರಿಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಯಾವಾಗಲೂ ಐಸಿಎಂಆರ್ ಮತ್ತು ಆರೋಗ್ಯ ಸಚಿವಾಲಯದ ಮೂಲಕ ಬಿಡುಗಡೆಯಾಗುತ್ತದೆಎಂದು ಅವರು ಹೇಳಿದರು.

ಇದು ಪುಣೆಯಲ್ಲಿನ ವ್ಯತಿರಿಕ್ತ ಸ್ಥಿತಿಯನ್ನು ತೋರಿಸುತ್ತದೆ .ನೀತಿ ರಚಿಸುವವರು ದೆಹಲಿಯಲ್ಲಿದ್ದಾರೆ, ಎನ್ಐವಿ ಕೇವಲ ಭೌಗೋಳಿಕ ಸ್ಥಳವಾಗಿದೆ. ಅವರು ಎಲ್ಲಿಯಾದರೂ ಇರಬಹುದು ಆದರೆ ಅದು ಫೆಡರಲ್ ರಚನೆಯಾಗಿದೆ, ಅವುಗಳನ್ನು ದೆಹಲಿಯಿಂದ ನಡೆಸಲಾಗುತ್ತಿದೆ, ಇಲ್ಲದಿದ್ದರೆ ಅದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಎಂದು ಜಾಗಡೆ ಹೇಳಿರುವುದನ್ನು ದಿ ಪ್ರಿಂಟ್ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ:ಭಾರತದಲ್ಲಿ ಪತ್ತೆಯಾದ ಈ ‘ಸೂಪರ್​ಬಗ್’ ಮುಂದಿನ ಮಹಾಪಿಡುಗು ಎನ್ನುತ್ತಿದೆ ವೈದ್ಯ ವಿಜ್ಞಾನ ಲೋಕ: ಹೊಸಿಲಲ್ಲಿದೆಯೇ ಮತ್ತೊಂದು ಸಾಂಕ್ರಾಮಿಕ?

(Why vaccine and virus research hub Pune among the worst affected in Covid infections )

Published On - 12:55 pm, Sun, 25 April 21