WITT Speaker Gallery Day 2: ಫೆ.26ಕ್ಕೆ ‘ರೈಸ್ ಆಫ್ ದಿ ಗ್ಲೋಬಲ್ ಸೌತ್’ ಸಂವಾದ ನಡೆಸಲಿರುವ ಸಚಿವ ಜೈ ಶಂಕರ್​​

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 24, 2024 | 1:00 PM

ಟಿವಿ9 ನೆಟ್‌ವರ್ಕ್‌ ನಡೆಸುತ್ತಿರುವ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಜೈಶಂಕರ್​ 'ರೈಸ್ ಆಫ್ ದಿ ಗ್ಲೋಬಲ್ ಸೌತ್' ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ಭಾರತದ ವಿದೇಶಾಂಗ ವ್ಯವಸ್ಥೆ ಹೇಗೆ? ಭಾರತದ ರಾಜತಾಂತ್ರಿಕತೆಯ ಶಕ್ತಿ ಏನು? ಎಂಬ ಬಗ್ಗೆ ಮಾತನಾಡಲಿದ್ದಾರೆ.

WITT Speaker Gallery Day 2: ಫೆ.26ಕ್ಕೆ ರೈಸ್ ಆಫ್ ದಿ ಗ್ಲೋಬಲ್ ಸೌತ್ ಸಂವಾದ ನಡೆಸಲಿರುವ ಸಚಿವ ಜೈ ಶಂಕರ್​​
ಜೈಶಂಕರ್​
Follow us on

ಟಿವಿ9 ನೆಟ್‌ವರ್ಕ್‌ನ ನೇತೃತ್ವದಲ್ಲಿ ಫೆ.26ರಂದು ದೆಹಲಿಯಲ್ಲಿ ನಡೆಯಲಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಜೈ ಶಂಕರ್​​ ಭಾಗವಹಿಸಲಿದ್ದಾರೆ. ಅವರು ‘ರೈಸ್ ಆಫ್ ದಿ ಗ್ಲೋಬಲ್ ಸೌತ್’ ಎಂಬ ವಿಚಾರದ ಬಗ್ಗೆ ಈ ಕಾರ್ಯಕ್ರಮದಲ್ಲಿ ಸಂವಾದ ನಡೆಸಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಅವರು ಕೂಡ ಭಾಗವಹಿಸಲಿದ್ದು, ಅವರ ಸಂವಾದ ಕಾರ್ಯಕ್ರಮ ಕೂಡ ನಡೆಯಲಿದೆ.

ಭಾರತದ ವಿದೇಶಾಂಗ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ ವ್ಯಕ್ತಿ ಜೈಶಂಕರ್​​. ವಿಶ್ವದ ಆರ್ಥಿಕತೆ ಮತ್ತು ಭೌಗೋಳಿಕ, ರಾಜಕೀಯ ವಿಚಾರದಲ್ಲಿ ಇವರ ಕೆಲಸ ಮಹತ್ವದ್ದು, ಜೈಶಂಕರ್​​​​ ಒಬ್ಬ ಸಚಿವನಾಗಿದ್ದರು, ಒಬ್ಬ ಚಿಂತಕ ಹಾಗೂ ಬರಹಗಾರ, ಅವರು ಇತ್ತಿಚೇಗೆ ‘ದಿ ಇಂಡಿಯಾ ವೇ’ ಮತ್ತು ‘ವೈ ಭಾರತ್ ಮ್ಯಾಟರ್ಸ್ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ನೆರೆಹೊರೆಯ ವಿಚಾರಗಳನ್ನು, ಭಾರತದ ಸಮಕಾಲೀನ ವಿದೇಶಾಂಗ ನೀತಿ ಸಮಸ್ಯೆಗಳನ್ನು ತುಂಬಾ ವ್ಯವಸ್ಥಿತವಾಗಿ ನಿಭಾಯಿಸುತ್ತಾರೆ.

ಇನ್ನು ಜೈಶಂಕರ್​​ ಅವರು ‘ಆತ್ಮನಿರ್ಭರ್ ಭಾರತ್’ ಮತ್ತು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ನಂತಹ ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆಗಳು ಹೇಗೆ ವಿದೇಶದಲ್ಲಿ ಪರಿಣಾಮ ಉಂಟು ಮಾಡಿದೆ. ಎಂಬುದನ್ನು ವಿವರಿಸಿದ್ದಾರೆ. ಸಮಾಜ ಕಲ್ಯಾಣ, ದೇಶೀಯ ಉತ್ಪಾದನೆ ಮತ್ತು ಕೌಶಲ್ಯ ಅಭಿವೃದ್ಧಿಯ ವಿಷಯದಲ್ಲಿ ಕ್ರಾಂತಿಕಾರಿಯಾಗಿದೆ ಎಂದು ತಮ್ಮ ಮೊದಲ ಪುಸ್ತಕದಲ್ಲಿ ‘ದಿ ಇಂಡಿಯಾ ವೇ’ ಅಲ್ಲಿ ತಿಳಿಸಿದ್ದಾರೆ. ಜೈಶಂಕರ್​​ ಅವರ ಎರಡನೇ ಪುಸ್ತಕ ‘ವೈ ಭಾರತ್ ಮ್ಯಾಟರ್ಸ್​​ನಲ್ಲಿ ಜಾಗತಿಕ ರಂಗದಲ್ಲಿ ಭಾರತದ ಏರಿಕೆ ಹೇಗಿದೆ ಎಂಬುದುನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಟಿವಿ9 ನೆಟ್‌ವರ್ಕ್‌ ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಸೇವಕ ಮೋದಿ ಭಾಗಿ

ಜೈಶಂಕರ್​​ ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಅವರು ಮಾಡಿದ ಕೆಲಸ ಅದ್ಭುತವಾಗಿದೆ. ಭಾರತದ ವಿದೇಶಾಂಗ ನೀತಿ ಇತರ ದೇಶಗಳಿಗೆ ಪ್ರೇರಣೆಯಾಗುವಂತೆ ಕೆಸಲ ಮಾಡಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಇವರ ಪಾತ್ರ ದೊಡ್ಡದ್ದು, ವಿದೇಶಗಳ ರಾಜಕೀಯ ಬಿಕ್ಕಟ್ಟಿನ ಪರಿಹಾರದಲ್ಲಿ ಇವರ ಕೆಲಸ ಮಾದರಿಯಾಗಿದೆ. ಉಕ್ರೇನ್ ಮತ್ತು ಇತರ ಸಂಘರ್ಷ ಭಾರತ ನಿಲುವು ಎಲ್ಲದರಲ್ಲೂ ಇವರ ಪಾತ್ರ ಮಹತ್ವದ್ದು.

ಜನವರಿ 2015ರಿಂದ ಜನವರಿ 2018 ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಜೈಶಂಕರ್ ಅವರು ವಯಸ್ಸು 69 ವರ್ಷ. ಮೇ 2019 ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿ ನೇಮಕಗೊಂಡರು. ನಟವರ್ ಸಿಂಗ್ ನಂತರ ಭಾರತದ ವಿದೇಶಾಂಗ ಸಚಿವರಾಗಿ ನೇಮಕಗೊಂಡ ಎರಡನೇ ರಾಜತಾಂತ್ರಿಕ ಅಧಿಕಾರಿ.

38 ವರ್ಷಗಳ ದೇಶ ಸೇವೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸಿಂಗಾಪುರದ ಹೈ ಕಮಿಷನರ್ (2007-2009) ಮತ್ತು ಜೆಕ್ ರಿಪಬ್ಲಿಕ್ (2001-2004), ಚೀನಾ (2009-2013) ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ US (2014-2015) ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮಾತುಕತೆಯಲ್ಲಿ ಜೈಶಂಕರ್ ಪ್ರಮುಖ ಪಾತ್ರ ವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 5:23 pm, Wed, 21 February 24