AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಆರ್​ಎಸ್​ ಅಧಿಕಾರಿ ಎಂದು ನಂಬಿ ಮದುವೆಯಾಗಿ ಮೋಸ ಹೋದ ಮಹಿಳಾ ಪೊಲೀಸ್​ ಅಧಿಕಾರಿ

ಉತ್ತರ ಪ್ರದೇಶದ ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ)ಯೊಬ್ಬರು ಐಆರ್‌ಎಸ್ ಅಧಿಕಾರಿ ಎಂದುಕೊಂಡು ಮದುವೆಯಾಗುವುದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತ ಓರ್ವ ಫ್ರಾಡ್ ಆಗಿದ್ದು, ಶ್ರೇಷ್ಠಾ ಸೇರಿದಂತೆ ಹಲವರ ಬಳಿ ದುಡ್ಡು ವಸೂಲಿ ಮಾಡುವುದೇ ಕಾಯಕವಾಗಿದೆ. ಈ ಕುರಿತು ಘಾಜಿಯಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಆರ್​ಎಸ್​ ಅಧಿಕಾರಿ ಎಂದು ನಂಬಿ ಮದುವೆಯಾಗಿ ಮೋಸ ಹೋದ ಮಹಿಳಾ ಪೊಲೀಸ್​ ಅಧಿಕಾರಿ
ಶ್ರೇಷ್ಠಾImage Credit source: India Today
ನಯನಾ ರಾಜೀವ್
|

Updated on: Feb 12, 2024 | 8:10 AM

Share

ಶ್ರೇಷ್ಠಾ ಠಾಕೂರ್​ ಉತ್ತರ ಪ್ರದೇಶ(Uttar Pradesh)ದಲ್ಲಿ ಲೇಡಿ ಸಿಂಗಂ ಎಂದೇ ಪ್ರಖ್ಯಾತರಾಗಿರುವ ಡಿಎಸ್​ಪಿ ಆಗಿದ್ದಾರೆ. ಅವರ ಕೆಲಸಗಳು ಜನರಿಗೆ ನಡುಕ ಹುಟ್ಟಿಸುವಂತಿರುತ್ತಿತ್ತು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಎಡವಿದ್ದಾರೆ. ಐಆರ್​ಎಸ್​ ಅಧಿಕಾರಿ ಎಂದು ಮದುವೆಯಾಗಿದ್ದ ಅವರು ಆತ ಓರ್ವ ಫ್ರಾಡ್​ ಎಂಬುದು ಮದುವೆಯ ಬಳಿಕ ಗೊತ್ತಾಗಿತ್ತು.

ಯಾರನ್ನೂ ಕೂಡ ಕಣ್ಣುಮುಚ್ಚಿ ನಂಬುವಂತಿಲ್ಲ, ಜೀವನದಲ್ಲಿ ಎಂಥಾ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಹತ್ತು ಬಾರಿ ಆಲೋಚನೆ ಮಾಡುವುದರ ಜತೆಗೆ ಮದುವೆಯಂತಹ ಸಂದರ್ಭದಲ್ಲಿ ಹಿನ್ನೆಲೆಯನ್ನು ಪರಿಶೀಲನೆ ಮಾಡುವುದು ಅಷ್ಟೇ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸುಳ್ಳು ಹೇಳಿಕೊಂಡು ಮದುವೆಯಾಗಿ ಆಭರಣ, ಹಣವನ್ನೆಲ್ಲಾ ದೋಚಿ ಪರಾರಿಯಾಗುವ ಎಷ್ಟೇ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.

2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶ್ರೇಷ್ಠಾ ಠಾಕೂರ್ ಅವರು 2018 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ರೋಹಿತ್ ರಾಜ್ ಎಂಬ ವ್ಯಕ್ತಿಯನ್ನು ವಿವಾಹವಾದರು. ಶ್ರೇಷ್ಠಾ ಅವರಿಗೆ ರೋಹಿತ್ ರಾಜ್ ರಾಂಚಿಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಪೋಸ್ಟ್ ಮಾಡಲಾದ 2008-ಬ್ಯಾಚ್ IRS ಅಧಿಕಾರಿ ಎಂದು ಸುಳ್ಳು ಹೇಳಿದ್ದ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ವರರಿಲ್ಲದೆ ನಡೆಯಿತು ಸುಳ್ಳು ಸಾಮೂಹಿಕ ವಿವಾಹ, ನಟಿಸಿದವರಿಗೆ ಸಿಕ್ಕಿತ್ತು 

ಮದುವೆಯ ಬಳಿಕ ವಿಷಯಗಳು ತಿರುವು ಪಡೆದಿತ್ತು, ತನ್ನ ಪತಿ ಐಆರ್​ಎಸ್​ ಅಧಿಕಾರಿಯಲ್ಲ ಎಂಬುದು ಗೊತ್ತಾಗಿತ್ತು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಮಹಿಳಾ ಡಿಎಸ್ಪಿ ತನ್ನ ದಾಂಪತ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಸುಮ್ಮನಿದ್ದರು.

ಆದರೆ ಕೊನೆಗೆ ಆತ ಹೆಂಡತಿಯ ಹೆಸರಿನಲ್ಲಿ ವಂಚನೆ ಮಾಡಲು ಶುರು ಮಾಡಿದ್ದ, ಇದರಿಂದ ಬೇಸತ್ತು ಶ್ರೇಷ್ಠಾ ಠಾಕೂರ್ ಮದುವೆಯಾಗಿ ಎರಡು ವರ್ಷಗಳ ಬಳಿಕ ರೋಹಿತ್ ರಾಜ್​ಗೆ ವಿಚ್ಛೇದನ ನೀಡಿದ್ದರು.

ಆದರೂ ಸಮಸ್ಯೆ ಬಗೆಹರಿದಿರಲಿಲ್ಲ, ಆತ ವಂಚನೆಯನ್ನು ಮುಂದುವರೆಸಿದ್ದ ಹೀಗಾಗಿ ಅನಿವಾರ್ಯವಾಗಿ ಅವರು ಘಾಜಿಯಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ರೋಹಿತ್ ಆಕೆಗೂ ಕೂಡ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದ ಎಂಬುದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ