AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಪತಿ ಬೆಟ್ಟಿಂಗ್ ಕಟ್ಟುವುದನ್ನು ನಿಲ್ಲಿಸುವಂತೆ ಮಾಡು -ವನದೇವತೆಗೆ ಮಹಿಳೆಯ ಆರ್ದತೆಯ ವಿಭಿನ್ನ ಬಿನ್ನಹ

Medaram Sammakka Saralamma: ಇತ್ತೀಚೆಗಷ್ಟೇ ನಡೆದ ಮೇಡಾರಂ ಜಾತ್ರೆಯಲ್ಲಿ ತೆಲುಗು ರಾಜ್ಯಗಳು ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಸಮ್ಮಕ್ಕನ ದರ್ಶನ ಪಡೆದರು. ಪೂಜೆ ಸಲ್ಲಿಸಿ ತಮ್ಮ ಪ್ರಾರ್ಥನೆ ಸಲ್ಲಿಸಿದರು. ಹುಂಡಿಗೆ ಹಣ ಹಾಕಿದರು. ಆದರೆ ಮಹಿಳಾ ಭಕ್ತರೊಬ್ಬರು ಹುಂಡಿಯಲ್ಲಿ ಹಾಕಿದ ಚಿಕ್ಕ ಪತ್ರ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನನ್ನ ಪತಿ ಬೆಟ್ಟಿಂಗ್ ನಿಲ್ಲಿಸಬೇಕು ಮತ್ತು ತನ್ನ ಅಕ್ಕನ ಮಗನಿಗೆ ಐಐಐಟಿ ಸೀಟು ಸಿಗಬೇಕು ಎಂದು ಅವರು ಆ ಪತ್ರದಲ್ಲಿ ಟಿಪ್ಪಣಿ ಬರೆದಿದ್ದಾರೆ.

ನನ್ನ ಪತಿ ಬೆಟ್ಟಿಂಗ್ ಕಟ್ಟುವುದನ್ನು ನಿಲ್ಲಿಸುವಂತೆ ಮಾಡು -ವನದೇವತೆಗೆ ಮಹಿಳೆಯ ಆರ್ದತೆಯ ವಿಭಿನ್ನ ಬಿನ್ನಹ
ಪತಿ ಬೆಟ್ಟಿಂಗ್ ಕಟ್ಟುವುದನ್ನು ನಿಲ್ಲಿಸಲಿ -ಮಹಿಳೆಯ ವಿಭಿನ್ನ ಬಿನ್ನಹ
ಸಾಧು ಶ್ರೀನಾಥ್​
|

Updated on: Mar 04, 2024 | 3:40 PM

Share

ದೇವರೆಂದರೆ ಭಕ್ತರಿಗೆ ಆಪ್ತ. ದೇವಸ್ಥಾನಕ್ಕೆ ಹೋದಾಗ ಭಕ್ತರು ತಮ್ಮ ಮನದಾಳದ ಆಸೆಯನ್ನು ಈಡೇರಿಸುವಂತೆ ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ. ತಮ್ಮ ಆಸೆ ಈಡೇರಿಕೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತಾರೆ. ಕೆಲವರು ಒಳ್ಳೆಯ ಕೆಲಸ ಸಿಗಲಿ, ಇನ್ನು ಕೆಲವರು ಜೀವನದಲ್ಲಿ ಸೆಟ್ಲ್ ಆಗಲಿ ಎಂದು ದೇವರಲ್ಲಿ ಹಾರೈಸುವುದು ಸರ್ವೇಸಾಮಾನ್ಯ. ಆದರೆ ಒಬ್ಬ ಮಹಿಳಾ ಭಕ್ತೆಗೆ ವಿಚಿತ್ರವಾದ ಕಾಟ ಕಾಡಿತ್ತು.

ಇತ್ತೀಚೆಗಷ್ಟೇ ನಡೆದ ಮೇಡಾರಂ ಜಾತ್ರೆಯಲ್ಲಿ ತೆಲುಗು ರಾಜ್ಯಗಳು ಮಾತ್ರವಲ್ಲದೆ ದೇಶ ವಿದೇಶಗಳಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಸಮ್ಮಕ್ಕನ ದರ್ಶನ ಪಡೆದರು. ಪೂಜೆ ಸಲ್ಲಿಸಿ ತಮ್ಮ ಪ್ರಾರ್ಥನೆ ಸಲ್ಲಿಸಿದರು. ಹುಂಡಿಗೆ ಹಣ ಹಾಕಿದರು. ಆದರೆ ಮಹಿಳಾ ಭಕ್ತರೊಬ್ಬರು ಹುಂಡಿಯಲ್ಲಿ ಹಾಕಿದ ಚಿಕ್ಕ ಪತ್ರ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನನ್ನ ಪತಿ ಬೆಟ್ಟಿಂಗ್ ನಿಲ್ಲಿಸಬೇಕು ಮತ್ತು ತನ್ನ ಅಕ್ಕನ ಮಗನಿಗೆ ಐಐಐಟಿ ಸೀಟು ಸಿಗಬೇಕು ಎಂದು ಅವರು ಆ ಪತ್ರದಲ್ಲಿ ಟಿಪ್ಪಣಿ ಬರೆದಿದ್ದಾರೆ. ದೇಗುಲದ ಆಡಳಿತ ಮಂಡಳಿಯವರು ಹುಂಡಿ ಲೆಕ್ಕ ಹಾಕುವಾಗ ಈ ಚೀಟಿ ದೊರೆತಿದ್ದು ಅದರ ಸಾರಾಂಶವು ವೈರಲ್ ಸುದ್ದಿ ಆಗಿದೆ.

Also Read: ಆಂಧ್ರ ಅಸೆಂಬ್ಲಿ ಚುನಾವಣೆ: TDP ಗೆಲ್ಲುತ್ತೆ ಎಂದ ಪ್ರಶಾಂತ್ ಕಿಶೋರ್, ಭಗ್ಗನೆ ಕಿಡಿಕಾರಿದ ಜಗನ್ ಪಾರ್ಟಿ ನಾಯಕರು!

ಇತ್ತೀಚೆಗಷ್ಟೇ ಸಮ್ಮಕ್ಕ, ಸರಳಮ್ಮ ಜಾತ್ರೆಯ ಹುಂಡಿ ಎಣಿಕೆ ಮುಂದುವರಿದಿದೆ. ಹನುಮಕೊಂಡ ಲಷ್ಕರ್‌ಬಜಾರ್‌ನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಮೇಡಾರಂ ಸಮ್ಮಕ್ಕ ಹಾಗೂ ಸರಳಮ್ಮ ಜಾತ್ರೆಯ ಹುಂಡಿಗಳ ಎಣಿಕೆ ನಡೆಯುತ್ತಿತ್ತು. ಮೂರನೇ ದಿನ ಮೇಡಾರಂ ಹುಂಡಿ ಎಣಿಕೆಯಲ್ಲಿ 3.46 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 317 ಹುಂಡಿಗಳ ಲೆಕ್ಕಾಚಾರದಲ್ಲಿ 9.60 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಡಳಿತ ಮಂಡಳಿ ಇಒ ರಾಜೇಂದ್ರಮ್ಮ ತಿಳಿಸಿದರು.

ಎರಡನೇ ದಿನವಾದ ಶುಕ್ರವಾರ 2 ಕೋಟಿ 98 ಲಕ್ಷ 35 ಸಾವಿರ ಆದಾಯ ಬಂದಿದೆ. 71 ಕಬ್ಬಿಣದ ಹುಂಡಿಗಳಲ್ಲಿದ್ದ ಕರೆನ್ಸಿ, ಸಣ್ಣ ನಾಣ್ಯಗಳು, ಬೆಳ್ಳಿ ಮತ್ತು ಚಿನ್ನವನ್ನು ಬೇರ್ಪಡಿಸಲಾಯಿತು. ಮೊದಲ ದಿನವೇ 3 ಕೋಟಿ 15 ಲಕ್ಷ 40 ಸಾವಿರ ಆದಾಯ ಬಂದಿದೆ. ಮೂರು ದಿನದಲ್ಲಿ ಒಟ್ಟು 9.60 ಕೋಟಿ ರೂಪಾಯಿ ಆದಾಯ ಬಂದಿದೆ.. ಈ ಹಣ ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿದೆ ಎಂದು ಇ ಒ ವಿವರಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ