AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AAP office: ಪಕ್ಷದ ಕಚೇರಿ ಖಾಲಿ ಮಾಡುವಂತೆ ಎಎಪಿಗೆ ಸುಪ್ರೀಂಕೋರ್ಟ್ ಸೂಚನೆ; ಜೂನ್ 15ರವರೆಗೂ ಗಡುವು

ದೆಹಲಿ ಹೈಕೋರ್ಟ್​ಗೆ ನೀಡಲಾಗಿರುವ ಜಾಗದಲ್ಲಿ ಎಎಪಿ ಕಚೇರಿ ಸ್ಥಳ ಇದ್ದು, ಅದನ್ನು ಜೂನ್ 15ರೊಳಗೆ ತೆರವುಗೊಳಿಸುವಂತೆ ಸುಪ್ರೀಕೋರ್ಟ್ ತಿಳಿಸಿದೆ. ದೆಹಲಿ ಹೈಕೋರ್ಟ್​ಗೆ ಅಲಾಟ್ ಆಗುವ ಬಹಳ ಮುಂಚೆಯೇ ತಮ್ಮ ಪಕ್ಷಕ್ಕೆ ಆ ಜಾಗ ಕೊಡಲಾಗಿದೆ ಎಂಬುದು ಎಎಪಿ ವಾದ. ಇದೀಗ ಪಕ್ಷದ ಕಚೇರಿಗೆ ಎಎಪಿ ಬೇರೆ ಸ್ಥಳ ಪಡೆಯಬೇಕಾಗುತ್ತದೆ. ದೆಹಲಿಯ ಸೆಂಟ್ರಲ್ ಭಾಗದಲ್ಲಿ ಸ್ಥಳ ಬೇಕು ಎಂದು ಮನವಿ ಮಾಡಿದೆ.

AAP office: ಪಕ್ಷದ ಕಚೇರಿ ಖಾಲಿ ಮಾಡುವಂತೆ ಎಎಪಿಗೆ ಸುಪ್ರೀಂಕೋರ್ಟ್ ಸೂಚನೆ; ಜೂನ್ 15ರವರೆಗೂ ಗಡುವು
ಆಮ್ ಆದ್ಮಿ ಪಕ್ಷ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 04, 2024 | 6:31 PM

Share

ನವದೆಹಲಿ, ಮಾರ್ಚ್ 4: ದೆಹಲಿ ಹೈಕೋರ್ಟ್​ಗೆ ನೀಡಲಾಗಿರುವ ಜಾಗದಲ್ಲಿ ಪಕ್ಷದ ಕಚೇರಿ ಮಾಡಿಕೊಂಡಿರುವ ಆಮ್ ಆದ್ಮಿ ಪಕ್ಷ (Aam Aadmi party) ಈಗ ಅದನ್ನು ತೆರವುಗೊಳಿಸಬೇಕಾಗಿದೆ. ರೌಸ್ ಅವೆನ್ಯೂ ಪ್ರದೇಶದಲ್ಲಿರುವ ಈ ಕಚೇರಿಯನ್ನು ಜೂನ್ 15ರೊಳಗೆ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದೆ. ಇಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರಿರುವ ಸರ್ವೋಚ್ಚ ನ್ಯಾಯಪೀಠ ಇಂದು ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿತು. ಎಎಪಿ ಪಕ್ಷದ ಕಚೇರಿ ಸ್ಥಳವನ್ನು ಯಾವಾಗ ತೆರವುಗೊಳಿಸುತ್ತೀರಿ ಎಂದು ಕೇಳಿದಾಗ ಪಕ್ಷದ ವತಿಯಿಂದ 2-3 ತಿಂಗಳ ಕಾಲಾವಕಾಶ ಬೇಕೆಂದು ಕೋರಲಾಯಿತು. ಅದರಂತೆ ನ್ಯಾಯಾಲಯ ಜೂನ್ 15ರವರೆಗೆ ಕಾಲಾವಕಾಶ ಕೊಟ್ಟಿದೆ.

ಈಗ ಆಮ್ ಆದ್ಮಿ ಪಕ್ಷ ಬೇರೆ ಕಡೆ ಪಕ್ಷದ ಕಚೇರಿಗೆ ಸ್ಥಳ ಹುಡುಕಬೇಕಿದೆ. ಕೇಂದ್ರ ಸರ್ಕಾರಕ್ಕೆ ಸೇರಿದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಎಲ್​ಡಿಒ) ಬಳಿ ಎಎಪಿ ಹೊಸ ಕಚೇರಿ ಸ್ಥಳಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

‘ನಾಲ್ಕು ವಾರದೊಳಗೆ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಲ್ಯಾಂಡ್ ಅಂಡ್ ಡೆವಲಪ್ಮೆಂಟ್ ಆಫೀಸ್​ಗೆ ನಾವು ಮನವಿ ಮಾಡುತ್ತೇವೆ,’ ಎಂದು ಸುಪ್ರೀಂಕೋರ್ಟ್ ಇದೇ ವೇಳೆ ಹೇಳಿದೆ.

ಇದನ್ನೂ ಓದಿ: ಮಹಿಳೆಗೆ ಮಾಸಿಕ 1,000 ರೂ ಧನಸಹಾಯ; ಶಿಕ್ಷಣ ಕ್ಷೇತ್ರಕ್ಕೆ ಶೇ. 21ಕ್ಕಿಂತ ಹೆಚ್ಚು ಹಣ; ದೆಹಲಿ ಸರ್ಕಾರದ ಬಜೆಟ್ ಧಮಾಕ

ಇಲ್ಲಿ ಅಕ್ರಮವಾಗಿ ಬಂದು ಕೂತಿಲ್ಲ ಎಂದು ವಾದಿಸಿದ ಎಎಪಿ

ರೋಸ್ ಅವೆನ್ಯೂ ಪ್ರದೇಶದಲ್ಲಿರುವ ದೆಹಲಿ ಹೈಕೋರ್ಟ್​ನ ಅಂಗಳದ ಬಳಿಯೇ ಎಎಪಿ ಪಕ್ಷದ ಕಚೇರಿ ಇದೆ. ಈ ಸ್ಥಳವನ್ನು ಹೈಕೋರ್ಟ್​ಗೆ ಅಲಾಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೋರ್ಟ್ ವಿಚಾರಣೆ ವೇಳೆ, ಎಎಪಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಈ ಜಾಗವನ್ನು ಎಎಪಿ ಅತಿಕ್ರಮಿಸಿಕೊಂಡು ಕೂತಿಲ್ಲ ಎಂದು ವಾದಿಸಿದ್ದಾರೆ.

ಹೈಕೋರ್ಟ್​ನ ವಿಸ್ತರಣೆಗೆ ಅಲಾಟ್ ಮಾಡುವ ಬಹಳ ಹಿಂದೆಯೇ ಎಎಪಿಗೆ ಈ ಸ್ಥಳ ಅಲಾಟ್ ಅಗಿದೆ ಎಂದು ಅಭಿಷೇಕ್ ಹೇಳಿದ್ದಾರೆ.

ಇದನ್ನೂ ಓದಿ: ಸತ್ತ ಪಾತಕಿಯ ಮಗಳ ಮದುವೆ ಮಾಡಿದ ಯುಪಿ ಪೊಲೀಸ್; ಎನ್​ಕೌಂಟರ್ ಮಾಡಿದ್ದ ತಂಡದ ಸದಸ್ಯರಿಂದಲೇ ಮದುವೆ ಕಾರ್ಯ

ಬಿಜೆಪಿಗೆ ಇದೇ ಪ್ರದೇಶದಲ್ಲಿ ಕಚೇರಿ ಇದೆ. ಎಎಪಿಯೂ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಆದರೆ, ಬದರ್​ಪುರ್ ಪ್ರದೇಶದಲ್ಲಿ ಕಚೇರಿ ಸ್ಥಾಪಿಸುವಂತೆ ತಮಗೆ ಹೇಳಲಾಗಿದೆ. ತಮಗೂ ದೆಹಲಿ ಮಧ್ಯ ಭಾಗದಲ್ಲಿ ಜಾಗ ಕೊಡಿಸಬೇಕು. ರೋಸ್ ಅವೆನ್ಯೂ ಪ್ರದೇಶದಲ್ಲೇ ಲ್ಯಾಂಡ್ ಅಂಡ್ ಡೆವಲಪ್ಮೆಂಟ್ ಆಫೀಸ್ ಎರಡು ಪ್ಲಾಟ್ ಹೊಂದಿದೆ. ಅದನ್ನು ಎಎಪಿಗೆ ನೀಡಬಹುದು ಎಂದು ಎಎಪಿ ಪರ ವಕೀಲರು ಕೇಳಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Mon, 4 March 24

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ