ಗಂಡ, ಮಗಳ ಮುಂದೆಯೇ ಸೋದರಳಿಯನನ್ನು ಮದುವೆಯಾದ ಮಹಿಳೆ!

ಬಿಹಾರದ ಜಮುಯಿಯಲ್ಲಿರುವ ದೇವಸ್ಥಾನದಲ್ಲಿ ಅತ್ತೆಯೊಬ್ಬಳು ತನ್ನ ಗಂಡ ಮತ್ತು ಮಗಳ ಮುಂದೆ ತನ್ನ ಸೋದರಳಿಯನನ್ನು ಮದುವೆಯಾದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಬ್ಬರೂ ಮದುವೆಯಾದ ಘಟನೆ ಮತ್ತು ವಿಡಿಯೋ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಮಾವ ಮತ್ತು ಇತರ ಕುಟುಂಬ ಸದಸ್ಯರ ಮುಂದೆ ತನ್ನ ಅತ್ತೆಯನ್ನು ಮದುವೆಯಾಗುತ್ತಿರುವುದನ್ನು ತೋರಿಸಲಾಗಿದೆ.

ಗಂಡ, ಮಗಳ ಮುಂದೆಯೇ ಸೋದರಳಿಯನನ್ನು ಮದುವೆಯಾದ ಮಹಿಳೆ!
Bihar Crime

Updated on: Jun 21, 2025 | 10:47 PM

ಜಮುಯಿ, ಜೂನ್ 21: ಬಿಹಾರದ ಜಮುಯಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಗಂಡನ ಮುಂದೆಯೇ ತನ್ನ ಸೋದರಳಿಯನನ್ನು ಮದುವೆಯಾಗಿದ್ದಾಳೆ. ಅವರಿಬ್ಬರ ಮದುವೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆ ವ್ಯಕ್ತಿ ತನ್ನ ಮಾವ ಮತ್ತು ಇತರ ಕುಟುಂಬ ಸದಸ್ಯರ ಮುಂದೆ ತನ್ನ ಅತ್ತೆಯನ್ನು ದೇವಸ್ಥಾನದಲ್ಲಿ ಮದುವೆಯಾಗುತ್ತಿರುವುದನ್ನು ತೋರಿಸಲಾಗಿದೆ.

ಜಮುಯಿ ಜಿಲ್ಲೆಯ ಸಿಖೇರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ಮಹಿಳೆಯನ್ನು ಆಯುಷಿ ಕುಮಾರಿ ಎಂದು ಗುರುತಿಸಲಾಗಿದೆ. ಅವರು ತಮ್ಮ ಅಳಿಯನನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಗೆ ಆಕೆಯ ಮಗಳು ಮತ್ತು ಗಂಡ ಕೂಡ ಸಾಕ್ಷಿಯಾಗಿದ್ದಾರೆ. ಶುಕ್ರವಾರ (ಜೂನ್ 20) ಸಂಜೆ ಮದುವೆ ನಡೆದಿರುವುದಾಗಿ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಮಹಿಳೆಯ ಪ್ರಾಣ ತೆಗೆದ ಮೊಬೈಲ್: ಪತ್ನಿಯನ್ನೇ ಕೊಂದ ಪತಿ, ಮಕ್ಕಳು ಅನಾಥ

ಆಯುಷಿ 2021ರಲ್ಲಿ ಅದೇ ಗ್ರಾಮದ ವಿಶಾಲ್ ದುಬೆ ಅವರನ್ನು ವಿವಾಹವಾಗಿದ್ದರು. ಅವರಿಗೆ 3 ವರ್ಷದ ಮಗಳು ಕೂಡ ಇದ್ದಾಳೆ. ಆದರೆ, ಆಯುಷಿ ಅದೇ ಹಳ್ಳಿಯಲ್ಲಿರುವ ತನ್ನ ಸೋದರಳಿಯ ಸಚಿನ್ ದುಬೆ ಜೊತೆ ರಹಸ್ಯ ಸಂಬಂಧ ಹೊಂದಿದ್ದಳು. ಅವರು ಮೊದಲು ಸಾಮಾಜಿಕ ಮಾಧ್ಯಮದ ಮೂಲಕ ಚಾಟ್ ಮಾಡುತ್ತಿದ್ದರು. ನಂತರ ಪರಸ್ಪರ ಮಾತನಾಡಲು ಪ್ರಾರಂಭಿಸಿದರು, ಅದು ನಂತರ ಪ್ರಣಯ ಸಂಬಂಧಕ್ಕೆ ತಿರುಗಿತು. ಅವರು ಮನೆಯಲ್ಲೇ ಭೇಟಿಯಾಗುವುದನ್ನು ಮತ್ತು ಮಾತನಾಡುವುದನ್ನು ಮುಂದುವರೆಸಿದರು. ಹೀಗಿದ್ದರೂ ಆತ ಆಕೆಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವನಾಗಿದ್ದರಿಂದ ಆ ಕುಟುಂಬದಲ್ಲಿ ಯಾರಿಗೂ ಯಾವುದೇ ಅನುಮಾನವಿರಲಿಲ್ಲ.


ಇದನ್ನೂ ಓದಿ: ರಾಜಸ್ಥಾನದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸೀರೆಯುಟ್ಟು ಮಹಿಳೆಯ ವೇಷ ಧರಿಸಿದ ಆರೋಪಿ!

ಆದರೆ, ಎರಡೂ ಕುಟುಂಬಕ್ಕೆ ತಮ್ಮ ಅಕ್ರಮ ಸಂಬಂಧದ ವಿಷಯ ತಿಳಿಸಿ, ಅವರ ಒಪ್ಪಿಗೆ ಪಡೆದು ಶುಕ್ರವಾರ ಸಂಜೆ ಹಳ್ಳಿಯ ದೇವಸ್ಥಾನದಲ್ಲಿ ಸಚಿನ್ ಅವರನ್ನು ಆಯುಷಿ ವಿವಾಹವಾಗಿದ್ದಾರೆ. “ನಾವು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಈಗ ನಮ್ಮ ಸಂಬಂಧಕ್ಕೆ ಒಂದು ಹೆಸರಿದೆ. ನಾನು ಆಯುಷಿಯನ್ನು ಶಾಶ್ವತವಾಗಿ ಸಂತೋಷವಾಗಿರಿಸುತ್ತೇನೆ” ಎಂದು ಸಚಿನ್ ಹೇಳಿದ್ದಾರೆ.

ಆಕೆಯ ಮೊದಲಿನ ಗಂಡ ವಿಶಾಲ್, “ಈ ಮದುವೆಯಿಂದ ಅವಳು ಸಂತೋಷವಾಗಿರುವುದಾದರೆ ನಾನು ಅವಳನ್ನು ತಡೆಯುವುದಿಲ್ಲ. ಆದರೆ ಅವಳು ನನ್ನ ವಿರುದ್ಧ ಮಾಡಿದ ಆರೋಪಗಳು ಸುಳ್ಳು. ಅವಳು ನನ್ನ ತಾಯಿ ಮತ್ತು ಮಗಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಳು. ಇಂದಿನಿಂದ, ಅವಳು ಸಚಿನ್ ಜವಾಬ್ದಾರಿ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:29 pm, Sat, 21 June 25