ಜಲಾವೃತವಾದ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ಮಹಿಳೆಗೆ ಕಿರುಕುಳ ಕೊಟ್ಟ ಪುಂಡರು
ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ. ಬೈಕ್ನಲ್ಲಿ ಬರುತ್ತಿದ್ದ ಮಹಿಳೆಗೆ ಕೆಲವು ಯುವಕರು ಕಿರುಕುಳ ನೀಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶ, ದೆಹಲಿ, ಉತ್ತರಾಖಂಡ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ. ರಸ್ತೆಗಳೆಲ್ಲವೂ ಜಲಾವೃತವಾಗಿವೆ, ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುವ ಜನರ ಬಗ್ಗೆ ಅನುಕಂಪ ತೋರುವ ಬದಲು ಕೆಲವು ಪುಂಡರು ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಲಕ್ನೋನಲ್ಲಿ ನಡೆದಿದೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಬಳಿ ಇರುವ ತಾಜ್ ಹೋಟೆಲ್ ಸೇತುವೆಯ ಕೆಳಗೆ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. ಮಹಿಳೆಯೊಬ್ಬರು ವ್ಯಕ್ತಿಯೊಂದಿಗೆ ಜಲಾವೃತವಾದ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದರು.
ಕೆಲವು ಯುವಕರು ಅದೇ ನೀರಿನಲ್ಲಿ ಆಟವಾಡುತ್ತಿದ್ದರು, ಈ ಬೈಕ್ ಆ ದಾರಿಯಲ್ಲಿ ಹೋಗುತ್ತಿದ್ದಂತೆ ನೀರನ್ನು ಬೈಕ್ ಮೇಲೆ ಎರಚಲು ಶುರು ಮಾಡಿದ್ದರು. ಬಳಿಕ ಬೈಕ್ ಮುಂದೆ ಹೋಗದಂತೆ ತಡೆದ ಬಳಿಕ ಬೈಕ್ನಲ್ಲಿದ್ದ ಮಹಿಳೆ ಸೇರಿ ಇಬ್ಬರು ಸವಾರರು ಕೆಳಗೆ ನೀರಿನಲ್ಲಿ ಬಿದ್ದಿದ್ದಾರೆ.
Lucknow: A viral video shows people mistreating a woman during rain and causing a ruckus under the Taj Hotel bridge. Police intervened, dispersed the crowd, and are identifying those involved pic.twitter.com/7TJxUYKmIv
— IANS (@ians_india) July 31, 2024
ಆದರೂ ಅವರು ನೀರನ್ನು ಎರಚುವುದನ್ನು ಬಿಟ್ಟಿರಲಿಲ್ಲ. ಮಹಿಳೆಯನ್ನು ಕೂಡಲೇ ಅಲ್ಲಿದ್ದವರ್ಯಾರೋ ಕೆಳಗಿನಿಂದ ಮೇಲಕ್ಕೆ ಎತ್ತಿದ್ದಾರೆ. ವಿಡಿಯೋದಲ್ಲಿ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುವುದನ್ನು ಕೂಡ ಕಾಣಬಹುದಾಗಿದೆ.
ಮತ್ತಷ್ಟು ಓದಿ: ಶಿಮ್ಲಾದಲ್ಲಿ ಮೇಘಸ್ಫೋಟ: ಪ್ರವಾಹ ಸ್ಥಿತಿ ನಿರ್ಮಾಣ, 20 ಮಂದಿ ನಾಪತ್ತೆ
ವರದಿಗಳ ಪ್ರಕಾರ, ಪೊಲೀಸರು ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಕಿರುಕುಳ ನೀಡಿದವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.