ಕುಣಿಕೆಗೆ ಕೊರಳೊಡ್ಡಿದ್ದ ಮಹಿಳೆ, ಮೆಟಾ ಎಐನಿಂದ ಜೀವ ಉಳೀತು
ಮೆಟಾ ಎಐ ಸಾವಿನ ಅಂಚಿನಲ್ಲಿದ್ದ ಯುವತಿಯ ಪ್ರಾಣವನ್ನು ಉಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿ ಆಕೆಯನ್ನು ಕೈಬಿಟ್ಟಿದ್ದಕ್ಕಾಗಿ ಬೇಸರಗೊಂಡು ಈ ನಿರ್ಧಾರ ಮಾಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 21 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಳು. ಕುತ್ತಿಗೆಗೆ ಕುಣಿಕೆ ಹಾಕಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾಳೆ.
ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ಜೀವವನ್ನು ಮೆಟಾ ಎಐ ಉಳಿಸಿದೆ. ಪತಿ ಆಕೆಯನ್ನು ಕೈಬಿಟ್ಟಿದ್ದಕ್ಕಾಗಿ ಬೇಸರಗೊಂಡು ಈ ನಿರ್ಧಾರ ಮಾಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, 21 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಳು. ಕುತ್ತಿಗೆಗೆ ಕುಣಿಕೆ ಹಾಕಿಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾಳೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿಡಿಯೋ ವೈರಲ್ ಆಗುತ್ತಿರುವಾಗಲೇ ಪೊಲೀಸ್ ಮಹಾನಿರ್ದೇಶನಾಲಯದ ಕಚೇರಿಯ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಮೆಟಾದಿಂದ ಅಲರ್ಟ್ ಬಂದಿದ್ದು, ಪೊಲೀಸರು ಚುರುಕಾದರು. ಕೂಡಲೇ ಗ್ರಾಮವನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಆಗಮಿಸಿ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದಾರೆ.
ತಕ್ಷಣವೇ ಕಾರ್ಯಾಚರಣೆ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಮತ್ತಷ್ಟು ಓದಿ: ಉಪನ್ಯಾಸಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕ ವಶಕ್ಕೆ
ಮಹಿಳೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಆಕೆಯ ಕುಟುಂಬಸ್ಥರಿಗೆ ಆ ಸಮಯದಲ್ಲಿ ಏನೂ ತಿಳಿದಿರಲಿಲ್ಲ. ನಾಲ್ಕು ತಿಂಗಳ ಹಿಂದೆ ಆರ್ಯಸಮಾಜದ ದೇವಸ್ಥಾನದಲ್ಲಿ ವಿವಾಹವಾದ ಇಬ್ಬರೂ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.
ಈ ಮದುವೆಯು ಕಾನೂನುಬದ್ಧವಾಗಿ ಮಾನ್ಯವಾಗಿಲ್ಲದ ಕಾರಣ, ಪುರುಷ ಮಹಿಳೆಯನ್ನು ಬಿಟ್ಟು ತನ್ನ ಮನೆಗೆ ಹೋಗಿದ್ದಾನೆ, ಆತ ಅವಳನ್ನು ತೊರೆದ ನಂತರ ಮಹಿಳೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಳು ಮತ್ತು ಅವಳು ಆತ್ಮಹತ್ಯೆಗೆ ನಿರ್ಧರಿಸಿದ್ದಳು ಎಂದು ವರ್ಮಾ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ