ತಂಗಿ ಜತೆ ಜಗಳವಾಡಿ ತನ್ನ 9 ತಿಂಗಳ ಮಗುವನ್ನು ತಾರಸಿಯಿಂದ ಎಸೆದ ಮಹಿಳೆ

ತಂಗಿ ಜತೆ ಜಗಳವಾಡಿದ ಮಹಿಳೆ ಕೋಪದಲ್ಲಿ ಮಗುವನ್ನು ತಾರಸಿಯಿಂದ ಕೆಳಗೆ ಎಸೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದೇ ರೀತಿ ತಂಗಿಯ ಜತೆ ಜಗಳವಾಡಿ ತನ್ನ 9 ತಿಂಗಳ ಮಗುವನ್ನು ತಾರಸಿಯಿಂದ ಕೆಳಗೆ ಎಸೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದ 27 ವರ್ಷದ ವಿವಾಹಿತ ಮಹಿಳೆ ಶನಿವಾರ ಬೆಳಿಗ್ಗೆ ತನ್ನ ಒಂಬತ್ತು ತಿಂಗಳ ಮಗುವನ್ನು ಛಾವಣಿಯಿಂದ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಅಧಿಕಾರಿಯೊಬ್ಬರ ಪ್ರಕಾರ, ಅಂಜು ದೇವಿ ತನ್ನ ಸಹೋದರಿಯೊಂದಿಗೆ ಜಗಳವಾಡಿದ್ದಾಳೆ ಬಳಿಕ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದಾಳೆ.

ತಂಗಿ ಜತೆ ಜಗಳವಾಡಿ ತನ್ನ 9 ತಿಂಗಳ ಮಗುವನ್ನು ತಾರಸಿಯಿಂದ ಎಸೆದ ಮಹಿಳೆ
ಪೊಲೀಸ್​Image Credit source: India Today
Follow us
ನಯನಾ ರಾಜೀವ್
|

Updated on: Jan 26, 2025 | 11:11 AM

ಯಾವುದೇ ವಿಚಾರವಾಗಿರಲಿ ತಾಳ್ಮೆಯಿಂದ ಆಲಿಸುವುದು, ಶಾಂತ ರೀತಿಯಿಂದ ವರ್ತಿಸುವುದು ಮುಖ್ಯ. ಕೆಲವರಿಗೆ ಕೋಪದಲ್ಲಿ ಕೈಗೆ ಸಿಕ್ಕಿದ್ದೆಲ್ಲವನ್ನು ಎದುರಾಳಿಯ ಮೇಲೆ ಎಸೆದು ಬಿಡುವ ಪ್ರವೃತ್ತಿ ಇರುತ್ತದೆ. ಇನ್ನೂ ಕೆಲವರು ಅದೇ ವಿಚಾರವನ್ನು ಸುಲಭವಾಗಿ ಬಗೆಹರಿಸಿಕೊಳ್ಳುತ್ತಾರೆ. ಕೋಪದ ಕೈಗೆ ಬುದ್ಧಿ ಕೊಡಬಾರದು ಎನ್ನುವ ಮಾತು ಎಲ್ಲರಿಗೂ ತಿಳಿದಿದ್ದರೂ ಆ ಸಮಯವನ್ನು ಹೇಗೆ ನಿಭಾಯಿಸಬೇಕು ಎನ್ನುವ ವಿಚಾರದಲ್ಲಿ ಕೆಲವರು ಸೋಲುತ್ತಾರೆ.

ಅದೇ ರೀತಿ ತಂಗಿಯ ಜತೆ ಜಗಳವಾಡಿ ತನ್ನ 9 ತಿಂಗಳ ಮಗುವನ್ನು ತಾರಸಿಯಿಂದ ಕೆಳಗೆ ಎಸೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದ 27 ವರ್ಷದ ವಿವಾಹಿತ ಮಹಿಳೆ ಶನಿವಾರ ಬೆಳಿಗ್ಗೆ ತನ್ನ ಒಂಬತ್ತು ತಿಂಗಳ ಮಗುವನ್ನು ಛಾವಣಿಯಿಂದ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಯೊಬ್ಬರ ಪ್ರಕಾರ, ಅಂಜು ದೇವಿ ತನ್ನ ಸಹೋದರಿಯೊಂದಿಗೆ ಜಗಳವಾಡಿದ್ದಾಳೆ, ಈ ಸಮಯದಲ್ಲಿ ಅವಳು ಕೃಷ್ಣನಗರ ಪ್ರದೇಶದ ತಮ್ಮ ಎರಡು ಅಂತಸ್ತಿನ ಮನೆಯ ಮೇಲಿಂದ ಮಗುವನ್ನು ಎಸೆದಿದ್ದಾಳೆ. ಕೂಡಲೇ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ಓಂವಿರ್ ಸಿಂಗ್ ತಿಳಿಸಿದ್ದಾರೆ.

ಪೊಲೀಸರು ಅಂಜುದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಅಜ್ಜಿ ಶೋಭಾದೇವಿ ಅವರ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಅಂಜುದೇವಿ ಪ್ರೇಮ ವಿವಾಹವಾಗಿದ್ದು, ಕಳೆದ ಎರಡು ವರ್ಷಗಳಿಂದ ತನ್ನ ತಾಯಿಯೊಂದಿಗೆ ತನ್ನ ಮನೆಯಲ್ಲಿ ನೆಲೆಸಿದ್ದಳು. ಅಂಜು ಅವರ ತಂಗಿ ಮನಿಷಾ ಕೂಡ ಕಳೆದ ಎರಡು ತಿಂಗಳಿನಿಂದ ಇದೇ ಮನೆಯಲ್ಲಿ ವಾಸವಾಗಿದ್ದರು.

ಮತ್ತಷ್ಟು ಓದಿ: ತಾರಸಿಯಲ್ಲಿ ಓದುತ್ತಾ ಕುಳಿತಿದ್ದ ವಿದ್ಯಾರ್ಥಿನಿಯನ್ನು ತಳ್ಳಿ ಹತ್ಯೆ ಮಾಡಿದ ಮಂಗಗಳು

ಬಾಲಕಿಯನ್ನು ತಾರಸಿಯಿಂದ ತಳ್ಳಿದ ಮಂಗಗಳು

ತಾರಸಿಯಲ್ಲಿ ಓದುತ್ತಾ ಕುಳಿತಿದ್ದ ವಿದ್ಯಾರ್ಥಿನಿಯನ್ನು ಮಂಗಗಳು ತಳ್ಳಿ ಬೀಳಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವಿದ್ಯಾರ್ಥಿನಿ 10ನೇ ತರಗತಿ ಓದುತ್ತಿದ್ದಳು, ಪರೀಕ್ಷೆ ಹತ್ತಿರದಲ್ಲಿರುವುದರಿಂದ ತಾರಸಿಯಲ್ಲಿ ಓದುತ್ತಾ ಕುಳಿತಿರುವಾಗ ಮಂಗಗಳ ಗುಂಪೊಂದು ಆಕೆಯನ್ನು ತಳ್ಳಿ ಬೀಳಿಸಿ ಹತ್ಯೆ ಮಾಡಿರುವ ಘಟನೆ ಇದಾಗಿದೆ. ಮೃತಳ ಹೆಸರು ಪ್ರಿಯಾ ಕುಮಾರ್. ಕೋತಿಗಳ ಗುಂಪು ತಾರಸಿಯಲ್ಲಿ ವಿದ್ಯಾರ್ಥಿನಿಗೆ ಕಾಟ ಕೊಡಲು ಶುರು ಮಾಡಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಿಯಾ ತುಂಬಾ ಗಾಬರಿಯಾದಳು, ಅವಳು ಓಡಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯವರು ಆಕೆಯನ್ನು ನೋಡಿದ ತಕ್ಷಣ ಕೂಗಲು ಶುರು ಮಾಡಿದರು. ಆಕೆ ಮೆಟ್ಟಿಲುಗಳ ಕಡೆಗೆ ಓಡಿದ್ದಳು. ಆದರೆ ಕೋತಿಗಳು ಆಕೆಯ ಮೇಲೆ ಆಕ್ರಮಣ ಮಾಡಿ ಆಕೆಯನ್ನು ಮೇಲಿಂದ ಕೆಳಗೆ ತಳ್ಳಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ