ಮಹಿಳೆ ನಾಪತ್ತೆಯಾಗಿ 15 ವರ್ಷಗಳ ಬಳಿಕ ಮನೆಯಲ್ಲಿ ಅವಶೇಷಗಳು ಪತ್ತೆ

|

Updated on: Jul 04, 2024 | 8:09 AM

ಹದಿನೈದು ವರ್ಷಗಳ ಹಿಂದೆ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮನೆಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ.

ಮಹಿಳೆ ನಾಪತ್ತೆಯಾಗಿ 15 ವರ್ಷಗಳ ಬಳಿಕ ಮನೆಯಲ್ಲಿ ಅವಶೇಷಗಳು ಪತ್ತೆ
ಮಹಿಳೆಯ ಅವಶೇಷಗಳು
Image Credit source: India Today
Follow us on

ಮಹಿಳೆ ನಾಪತ್ತೆಯಾಗಿ 15 ವರ್ಷಗಳ ಬಳಿಕ ಆಕೆಯ ಮನೆಯಲ್ಲಿ ಅವಶೇಷಗಳು ಪತ್ತೆಯಾಗಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಮನ್ನಾರ್​ನಲ್ಲಿ ನಡೆದಿದೆ. ನಾಪತ್ತೆಯಾಗಿದ್ದ ಮಹಿಳೆಯ ಅವಶೇಷಗಳು ಮನೆಯಲ್ಲಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹತ್ಯೆ ಆರೋಪದ ಮೇಲೆ ಐವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಯಾವುದೋ ಸುಳಿವಿನ ಮೇರೆಗೆ ಆಕೆಯ ಗಂಡನ ಮನೆಯಲ್ಲಿದ್ದ ಸೆಪ್ಟಿಕ್​ ಟ್ಯಾಂಕ್ ಪರಿಶೀಲಿಸಿದ್ದಾರೆ, ಆಗ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ. ಕಲಾ ಎಂದು ಗುರುತಿಸಲಾದ ಮಹಿಳೆ 2008-2009ರಲ್ಲಿ 27 ವರ್ಷದವಳಿದ್ದಾಗ ಮನ್ನಾರ್​ನಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಯಾರೂ ಕೂಡ ದೂರು ಕೊಟ್ಟಿರಲಿಲ್ಲ, ಆಕೆ ನಾಪತ್ತೆಯಾಗಿರುವ ಬಗ್ಗೆ ಅಂಬಲಪ್ಪುಳ ಪೊಲೀಸ್ ಠಾಣೆಯಲ್ಲಿ ಮಾಹಿತಿ ಪಡೆದ ಪೊಲೀಸರು ಕೆಲ ತಿಂಗಳ ಹಿಂದೆ ತನಿಖೆ ಆರಂಭಿಸಿದ್ದರು. ಪ್ರಕರಣದ ಪ್ರಮುಖ ಶಂಕಿತ ಆರೋಪಿ ಎಂದು ಕಲಾ ಅವರ ಪತಿ ಅನಿಲ್ ಕುಮಾರ್ ಗುರುತಿಸಲಾಗಿದೆ.

ಅನಿಲ್ ಪ್ರಸ್ತುತ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಕೇರಳಕ್ಕೆ ಕರೆತರಲು ಕ್ರಮಕೈಗೊಳ್ಳಲಾಗಿದೆ ಎಂದು ಅಲಪ್ಪುಳ ಎಸ್‌ಪಿ ಚೈತ್ರಾ ಥೆರೇಸಾ ಜಾನ್ ಹೇಳಿದ್ದಾರೆ. ವೈಯಕ್ತಿಕ ಸಮಸ್ಯೆಗಳೇ ಕೊಲೆಯ ಹಿಂದಿನ ಉದ್ದೇಶ ಎಂದು ಜಾನ್ ತಿಳಿಸಿದ್ದಾರೆ. ಸದ್ಯ ಐವರು ಬಂಧನದಲ್ಲಿದ್ದಾರೆ.

ಮತ್ತಷ್ಟು ಓದಿ: ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ

ಕಲಾ ತನ್ನ ಆಭರಣಗಳನ್ನು ತೆಗೆದುಕೊಂಡು ಬೇರೊಬ್ಬರೊಂದಿಗೆ ಓಡಿಹೋಗಿದ್ದಾಳೆ ಎಂಬ ವದಂತಿ ಹರಡಿತ್ತು. ಬೇರೆ ಬೇರೆ ಸಮುದಾಯದವರಾದ ಕಲಾ ಮತ್ತು ಅನಿಲ್ ಕುಮಾರ್ ಕುಟುಂಬದ ವಿರೋಧದ ನಡುವೆಯೂ ವಿವಾಹವಾಗಿದ್ದರು, ಮಗ ಕೂಡ ಇದ್ದಾನೆ. ನಂತರ ಅನಿಲ್ ಮರುಮದುವೆಯಾಗಿ ಇಸ್ರೇಲ್ ನಲ್ಲಿ ನೆಲೆಸಿದ್ದಾರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ