ಭಾರತೀಯ ಸೇನೆಯಲ್ಲಿ ಮಹಿಳಾ ಸಬಲೀಕರಣ: 2023ರಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆ ಒಂದೆರಡಲ್ಲ
2023ರಲ್ಲಿ ಸೇನೆಯಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆಗಳೇನು? ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಮೂರು ಸೇನೆಗಳಲ್ಲಿ ಒಟ್ಟು 11,414 ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು, ಇತರ ಶ್ರೇಣಿಗಳು, ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಸೇವೆಗಳನ್ನು ಒಳಗೊಂಡಿದೆ.
ಭಾರತೀಯ ಸೇನೆಯಲ್ಲಿ (Indian Army) ಮಹತ್ವದ ಅವಕಾಶಗಳನ್ನು ಮಹಿಳೆಯರಿಗೆ ನೀಡಿದೆ ಹಾಗೂ ನೀಡುತ್ತಿದೆ. ಸೇನೆಯಲ್ಲಿ ಮಹಿಳೆಯರನ್ನು ಸಮರ್ಥವಾಗಿ ಮೂರು ಸೇನಾ ದಳಗಳಲ್ಲಿ ಬಳಸಿಕೊಳ್ಳುತ್ತಿದೆ. ಮಹಿಳೆ ಸೇನಾ ಸಿಬ್ಬಂದಿಗಳು ಈ ಮೂರು ದಳದಲ್ಲೂ ಮಹತ್ವದ ಸಾಧನೆಯನ್ನು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೂ ಹೆಚ್ಚಿನ ಅವಕಾಶಗಳನ್ನು ಸೇನೆ ನೀಡುತ್ತಿದೆ. ಸೇನೆ ಹೊಸದಾಗಿ ರೂಪಿಸಿರುವ ಅಗ್ನಿವೀರ್ ಯೋಜನೆಯ ಮೂಲಕವು ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ನೀಡಿಲಾಗಿದೆ. ಇದರಲ್ಲೂ ಕೂಡ ಮಹಿಳಾ ಸೇನಾನಿಗಳು ಇದ್ದರೆ. ಪ್ರಸ್ತಕ ವರ್ಷದಲ್ಲಿ ಅಂದರೆ 2023ರಲ್ಲಿ ಸೇನೆಯಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆಗಳೇನು? ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಎಂಬುದನ್ನು ಇಲ್ಲಿ ನೋಡುವ
ಮೂರು ಸೇನೆಗಳಲ್ಲಿ ಒಟ್ಟು 11,414 ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು, ಇತರ ಶ್ರೇಣಿಗಳು, ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಸೇವೆಗಳನ್ನು ಒಳಗೊಂಡಿದೆ. ಇದನ್ನು ಹೊರತುಪಡಿಸಿ ಮೂರು ಸೇವೆಗಳಲ್ಲಿ ನೇಮಕಗೊಂಡಿರುವ ಮಹಿಳಾ ಸಿಬ್ಬಂದಿಗಳ ಸಂಖ್ಯೆ 4,948 ಆಗಿದೆ. ಇನ್ನು ಡಿಸೆಂಬರ್ 1 ರಂದು, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ತಿಳಿಸಿರುವ ಪ್ರಕಾರ ಸೇನೆಯ ಹೊಸ ಯೋಜನೆಯಾದ ಅಗ್ನಿವೀರ್ನಲ್ಲಿ 1,000 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದೆ.
ಲೆಫ್ಟಿನೆಂಟ್ ಮೆಹಕ್ ಸೈನಿ, ಲೆಫ್ಟಿನೆಂಟ್ ಸಾಕ್ಷಿ ದುಬೆ, ಲೆಫ್ಟಿನೆಂಟ್ ಅದಿತಿ ಯಾದವ್, ಲೆಫ್ಟಿನೆಂಟ್ ಪಯಸ್ ಮುಡ್ಗಿಲ್, ಮತ್ತು ಲೆಫ್ಟಿನೆಂಟ್ ಆಕಾಂಕ್ಷಾ ಈ ಐವರು ಸೇನೆಯಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಹಲವು ಆಪರೇಷನ್ಗಳಲ್ಲಿ ಭಾಗವಹಿಸಿ ಭಾರತಕ್ಕೆ ಜಯ ತಂದಿದ್ದಾರೆ. ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಸೇನೆಯ ಗಣ್ಯ ಫಿರಂಗಿ ಘಟಕಗಳಿಗೆ ಸೇರುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.
ಕಮಾಂಡರ್ ಪ್ರೇರಣಾ ದೇವಸ್ಥಲೀ
ಕಮಾಂಡರ್ ಪ್ರೇರಣಾ ದಿಯೋಸ್ಥಲೀ ಅವರು ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಅಧಿಕಾರಿಯಾಗಿ ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಆಯ್ಕೆಯಾಗಿದ್ದರು. ಭಾರತೀಯ ನೌಕಾಪಡೆಯಲ್ಲಿ ಪಶ್ಚಿಮ ನೌಕಾಪಡೆಯ ಕಮಾಂಡ್ ಆಗಿ ಅಧಿಕಾರಿ ವಹಿಸಿಕೊಳ್ಳುವ ಮೂಲಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಸ್ತುತ INS ಚೆನ್ನೈ ಯುದ್ಧನೌಕೆಯಲ್ಲಿ ಮೊದಲ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಕಮಾಂಡರ್ ಪ್ರೇರಣಾ ದಿಯೋಸ್ಥಲೀ ಈ ಇಲಾಖೆಯಲ್ಲಿ ಮಹತ್ವದ ಸಾಧನೆಗಳನ್ನು ಮಾಡಲಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಅವನಿ ಚತುರ್ವೇದಿ
ಜನವರಿ ತಿಂಗಳಲ್ಲಿ, ಅವನಿ ಚತುರ್ವೇದಿ ಅವರು ವಿದೇಶದಲ್ಲಿ ವೈಮಾನಿಕ ಯುದ್ಧದಲ್ಲಿ ಭಾಗವಹಿಸಿದ ಭಾರತೀಯ ವಾಯುಪಡೆಯ (IAF) ಮೊದಲ ಮಹಿಳಾ ಫೈಟರ್ ಪೈಲಟ್. ಶ್ರೀಮತಿ ಚತುರ್ವೇದಿ, Su-30MKI ಪೈಲಟ್ನ್ನು ನಿರ್ವಹಿಸುತ್ತಿದ್ದರು. ಜನವರಿ 12 ರಿಂದ 26 ರವರೆಗೆ ಜಪಾನಿನ ವಾಯುನೆಲೆಯಾದ ಹ್ಯಕುರಿಯಲ್ಲಿ ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JASDF) ನೊಂದಿಗೆ 16 ದಿನಗಳ ಮೆಗಾ ಏರ್ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಶತ್ರು ರಾಷ್ಟ್ರಗಳ ಡ್ರೋನ್ ಹೊಡೆದುರುಳಿಸಲು ‘ಅರ್ಜುನ್’ಗೆ ತರಬೇತಿ
ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ
2023ರಲ್ಲಿ, ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಯುದ್ಧ ಘಟಕದ ಕಮಾಂಡ್ ಆಗಿ ಅಧಿಕಾರಿ ವಹಿಸಿಕೊಂಡ ಮೊದಲ ಮಹಿಳಾ ವಾಯುಪಡೆಯ ಅಧಿಕಾರಿ. ಅವರು ಪಶ್ಚಿಮ ವಲಯದಲ್ಲಿ ಕ್ಷಿಪಣಿ ಸ್ಕ್ವಾಡ್ರನ್ನ್ನು ಮುನ್ನಡೆಸುತ್ತಿದ್ದಾರೆ. 2019ರಲ್ಲಿ, ಶಾಲಿಜಾ ಧಾಮಿ ಅವರು ಫ್ಲೈಯಿಂಗ್ ಯುನಿಟ್‌ನಲ್ಲಿ ಫ್ಲೈಟ್ ಕಮಾಂಡರ್ ಸ್ಥಾನಕ್ಕೆ ಬಡ್ತಿ ಪಡೆಯುವ ಮೂಲಕ ವಾಯುಪಡೆಯ ಹೊಸ ಮತ್ತು ಮೊದಲ ಮಹಿಳಾ ಅಧಿಕಾರಿಯಾದರು.
ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ
ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ ಅವರು ಭಾರತೀಯ ವಾಯುಪಡೆಯಲ್ಲಿ ಶೌರ್ಯ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಅಧಿಕಾರಿ. ಮೂಲತ ರಾಜಸ್ಥಾನದವರಾಗಿರುವ ಇವರು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯ ಸಂದರ್ಭದಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಈ ಸಾಹಸಕ್ಕಾಗಿ ಅವರಿಗೆ ಕಾರ್ಯಕ್ಕಾಗಿ ವಾಯುಸೇನಾ ಪದಕವನ್ನು (ಶೌರ್ಯ) ನೀಡಲಾಯಿತು.
ಕ್ಯಾಪ್ಟನ್ ಶಿವ ಚೌಹಾಣ್
ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್ ಹಿಮನದಿಯಲ್ಲಿರುವ ಕುಮಾರ್ ಪೋಸ್ಟ್‌ನ ಅತ್ಯುನ್ನತ ಯುದ್ಧಭೂಮಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Thu, 21 December 23