ಕರ್ನಾಟಕ ಹೊರತುಪಡಿಸಿ 11 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎನ್ನುತ್ತಿದೆ ಈ ಸಮೀಕ್ಷೆ!

| Updated By: ಸಾಧು ಶ್ರೀನಾಥ್​

Updated on: Aug 19, 2022 | 10:11 PM

1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷ ಮಧ್ಯೆ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಸರಾಸರಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಎತ್ತಿ ತೋರಿಸಿದೆ.

ಕರ್ನಾಟಕ ಹೊರತುಪಡಿಸಿ 11 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎನ್ನುತ್ತಿದೆ ಈ ಸಮೀಕ್ಷೆ!
ಕರ್ನಾಟಕ ಹೊರತುಪಡಿಸಿ 11 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎನ್ನುತ್ತಿದೆ ಈ ಸಮೀಕ್ಷೆ!
Follow us on

ಹೊಸದಿಲ್ಲಿ: 1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷ ಮಧ್ಯೆ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಸರಾಸರಿ ಮಹಿಳೆಯರ ಲೈಂಗಿಕ ಪಾಲುದಾರರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಎತ್ತಿ ತೋರಿಸಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಾಸರಿಯಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಆದರೆ ತಮ್ಮ ಸಂಗಾತಿಯಾಗದ ಅಥವಾ ಜೊತೆಯಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗ ನಡೆಸಿದ ಪುರುಷರ ಸಂಖ್ಯೆ ಶೇಕಡಾ 4 ರಷ್ಟಿದೆ. ಅದೇ ಮಹಿಳೆಯರ ಪ್ರಮಾಣ ಕೇವಲ ಶೇ. 0.5 ಕಡಿಮೆ ಇದೆ ಎನ್ನುತ್ತದೆ National Family Health Survey -NFHS ಸಮೀಕ್ಷೆಯ ಡೇಟಾ.

ಕರ್ನಾಟಕ ಹೊರತುಪಡಿಸಿ 11 ರಾಜ್ಯಗಳಲ್ಲಿ…

ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಜಸ್ಥಾನ, ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು. ರಾಜಸ್ಥಾನವು ಅತಿ ಹೆಚ್ಚು ಮಹಿಳೆಯರನ್ನು ಹೊಂದಿದ್ದು, ಅವರು ತಲಾ ಸರಾಸರಿ 3.1 ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಅದೇ ಪುರುಷರು ಸರಾಸರಿ 1.8 ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ.

ಆದರೆ ಸಮೀಕ್ಷೆಯ ಹಿಂದಿನ 12 ತಿಂಗಳುಗಳಲ್ಲಿ ಯಾವುದೇ ಸಂಗಾತಿಯಾಗಲಿ ಅಥವಾ ಲಿವ್-ಇನ್ ಪಾಲುದಾರರಲ್ಲದವರೊಂದಿಗೆ ಲೈಂಗಿಕ ಸಂಭೋಗ ನಡೆಸಿದ ಪುರುಷರ ಪ್ರಮಾಣ ಶೇಕಡಾ 4 ರಷ್ಟಿತ್ತು. ಮಹಿಳೆಯರ ಪೈಕಿ ಈ ಸಂಖ್ಯೆಯು ಶೇಕಡಾ 0.5 ರಷ್ಟಿದೆ.

2019-21ರ ಅವಧಿಯಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಐದನ್ನು ದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಂದ 707 ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಿದೆ.

ರಾಷ್ಟ್ರೀಯ ವರದಿಯು ಸಾಮಾಜಿಕ-ಆರ್ಥಿಕ ಮತ್ತು ಇತರ ಹಿನ್ನೆಲೆ ಗುಣಲಕ್ಷಣಗಳ ಮೂಲಕ ಡೇಟಾವನ್ನು ಒದಗಿಸಿದೆ. ಇದು ನೀತಿ ನಿರೂಪಣೆ ಮತ್ತು ಪರಿಣಾಮಕಾರಿ ಕಾರ್ಯಕ್ರಮ ಅನುಷ್ಠಾನಕ್ಕೆ ಉಪಯುಕ್ತವಾಗಿದೆ.