ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day) ನಿಮಿತ್ತ ಮಹಿಳೆಯರಿಗೆ ಶುಭಾಶಯ ಕೋರಿದ್ದಾರೆ. ಹಾಗೇ, ಬಹುಕಾಲದಿಂದ ಈಡೇರದೆ ಹಾಗೇ ಇರುವ ತಮ್ಮ ಆಶೋತ್ತರಗಳನ್ನು ನೆರವೇರಿಸಿಕೊಳ್ಳಬೇಕು ಎಂದೂ ಕರೆ ಕೊಟ್ಟಿದ್ದಾರೆ. ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮಹಿಳೆಯರು ತಮ್ಮ ಬುದ್ಧಿವಂತಿಕೆ, ನಿಷ್ಠೆ ಮತ್ತು ಶಕ್ತಿಯಿಂದ ಸಮಾಜವನ್ನೇ ಪರಿವರ್ತಿಸಬಲ್ಲರು. ದೀರ್ಘಕಾಲದಿಂದ ಬಾಕಿ ಇರುವ ಅವಶ್ಯಕತೆಗಳನ್ನೆಲ್ಲ ಅವರು ಪಡೆಯಬೇಕು. ಎಲ್ಲ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು ಎಂದು ಹೇಳಿದ್ದಾರೆ.
Women are capable of transforming a society by their wisdom, dedication and strength.
They must get their long pending due.
Women’s Day greetings to all. pic.twitter.com/Jk0MeB1R63
— Rahul Gandhi (@RahulGandhi) March 8, 2022
ಕಾಂಗ್ರೆಸ್ ಪಕ್ಷ ಕೂಡ ತನ್ನ ಟ್ವಿಟರ್ ಅಕೌಂಟ್ನಲ್ಲಿ ಮಹಿಳಾ ದಿನಾಚರಣೆ ಶುಭಾಶಯ ಕೋರಿದೆ. ದೇಶದ.. ಇಡೀ ಜಗತ್ತಿನ ಪ್ರತಿ ಮಹಿಳೆಯ ಪರಿಕಲ್ಪನೆಗಳು, ಶಕ್ತಿ, ಧೈರ್ಯ, ಸಹನೆ, ದಯೆಗೆ ನಾವು ತಲೆ ಬಾಗುತ್ತೇವೆ. ನೀವು ಪ್ರತಿಯೊಬ್ಬರೂ ಭರವಸೆ ಮತ್ತು ಸಂತೋಷವನ್ನು ಎತ್ತಿ ಹಿಡಿಯುತ್ತೀರಿ. ಮಹಿಳಾ ಶಕ್ತಿಯ ಕೈಯಲ್ಲಿ ಅಧಿಕಾರ ಬಂದಾಗ ಅಲ್ಲಿ ಸುಳ್ಳು, ಕಪಟತೆ, ತಾರತಮ್ಯ, ದಬ್ಬಾಳಿಕೆಗೆ ಆಸ್ಪದ ಸಿಗುವುದಿಲ್ಲ. ಅವರ ಶ್ರದ್ಧೆ, ಸಂಕಲ್ಪ ಮತ್ತು ಸತ್ಯ-ನ್ಯಾಯಕ್ಕಾಗಿ ಅವರು ಮಾಡುವ ತ್ಯಾಗ ಸದಾ ಮೇಲುಗೈ ಸಾಧಿಸುತ್ತದೆ. ಇಂಥ ನಾರಿಶಕ್ತಿಗೆ ನಮ್ಮ ಸೆಲ್ಯೂಟ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಕಾಂಗ್ರೆಸ್ನ ಹಲವು ಮುಖಂಡರೂ ಕೂಡ ಟ್ವೀಟ್ ಮೂಲಕ ಮಹಿಳಾ ದಿನಾಚರಣೆ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: Women‘s Day 2022: ಶೆಲ್ಫಿಗೇರುವ ಮುನ್ನ: ‘ಧೃತಿಗೆಡದ ಹೆಜ್ಜೆಗಳು’ ಧೃತಿ ಮಹಿಳಾ ಮಾರುಕಟ್ಟೆಯ ಯಶೋಗಾಥೆ