ಗುಜರಾತ್ನ ಕಚ್ನಲ್ಲಿರುವ ಮುಂದ್ರಾ ಬಂದರಿನಲ್ಲಿ ಸುಮಾರು 9000 ಕೋಟಿ ರೂಪಾಯಿ ಮೌಲ್ಯದ ಹೆರೋಯಿನ್ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ನಿಷೇಧಿತ ಹೆರೋಯಿನ್ನ್ನು ಅಫ್ಘಾನಿಸ್ತಾನದಿಂದ ತರಲಾಗಿದೆ. ಇದು ಕಳ್ಳವ್ಯಾಪಾರ ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಮಾದಕದ್ರವ್ಯವನ್ನು ಟಾಲ್ಕಂ ಪೌಡರ್ ಎಂಬಂತೆ ಬಿಂಬಿಸಿ ಬಂದರಿಗೆ ತರಲಾಗುತ್ತಿದೆ ಎಂದೂ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಶುರುವಾಗಿದೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಅಶಿ ಟ್ರೇಡಿಂಗ್ ಸಂಸ್ಥೆ ಅಫ್ಘಾನಿಸ್ತಾನದಿಂದ ಕಂಟೇನರ್ಗಳು ಮೂಲಕ ಇಷ್ಟು ದೊಡ್ಡ ಪ್ರಮಾಣದ ಹೆರೋಯಿನ್ ಆಮದು ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಕಳೆದ ಎರಡು ದಿನಗಳ ಹಿಂದೆ ಇದೇ ಬಂದರಿನಲ್ಲಿ ಸುಮಾರು 2000 ಕೋಟಿ ರೂಪಾಯಿ ಮೌಲ್ಯದ ಹೆರೋಯಿನ್ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅದೂ ಕೂಡ ಟಾಲ್ಕಂ ಪೌಡರ್ ಜತೆಗೇ ಬಂದಿತ್ತು. ಪ್ರತಿಬಾರಿಯೂ ಹೀಗೆ ಟಾಲ್ಕಂ ಪೌಡರ್ ಜತೆಗೇ ಬರುವ ಹೆರೋಯಿನ್ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹೆರೋಯಿನ್ ಹೊತ್ತ ಶಿಪಿಂಗ್ ಕಂಟೇನರ್ಗಳು ಬಂದರಿಗೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಿಂಗ್ಪಿನ್ ಯಾರೆಂದು ಪತ್ತೆ ಹಚ್ಚಲು ಗುಪ್ತಚರ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ಯಾವ ಹಂತದಲ್ಲಿದೆ? ಇಲ್ಲಿದೆ ಕುತೂಹಲಕರ ಮಾಹಿತಿ
ಉತ್ತರಾಖಂಡ್ ಜನರಿಗೆ ಭರ್ಜರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್; 6 ತಿಂಗಳಲ್ಲಿ ಲಕ್ಷ ಉದ್ಯೋಗ ಸೃಷ್ಟಿ
Published On - 5:34 pm, Sun, 19 September 21