Ramdev ವೈದ್ಯರು ಭೂಮಿಯ ಮೇಲಿನ ದೇವದೂತರು, ಕೊವಿಡ್ ಲಸಿಕೆ ತೆಗೆದುಕೊಳ್ಳುವೆ: ಬಾಬಾ ರಾಮ್‌ದೇವ್

Yoga guru Ramdev: ಯಾವಾಗ ಲಸಿಕೆ ಪಡೆಯುತ್ತೀರಿ ಎಂದು ಕೇಳಿದಾಗ, "ಶೀಘ್ರದಲ್ಲೇ" ಎಂದು ಹೇಳಿದ ರಾಮ್‌ದೇವ್ ಉತ್ತಮ ಅಲೋಪತಿ ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅವರನ್ನು "ಭೂಮಿಯ ಮೇಲಿನ ದೇವದೂತರು" ಎಂದು ಬಣ್ಣಿಸಿದರು.

Ramdev ವೈದ್ಯರು ಭೂಮಿಯ ಮೇಲಿನ ದೇವದೂತರು, ಕೊವಿಡ್ ಲಸಿಕೆ ತೆಗೆದುಕೊಳ್ಳುವೆ: ಬಾಬಾ ರಾಮ್‌ದೇವ್
ಬಾಬ ರಾಮ್ ದೇವ್
Edited By: ರಶ್ಮಿ ಕಲ್ಲಕಟ್ಟ

Updated on: Jun 11, 2021 | 10:57 AM

ಡೆಹ್ರಾಡೂನ್: ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ತನಗೆ ಕೊವಿಡ್ ಲಸಿಕೆ ಅಗತ್ಯವಿಲ್ಲ ಎಂದು ಹೇಳಿದ್ದ ಯೋಗ ಗುರು ರಾಮ್‌ದೇವ್ ಈಗ ಯೂಟರ್ನ್ ಹೊಡೆದಿದ್ದಾರೆ. ಶೀಘ್ರದಲ್ಲೇ ಲಸಿಕೆ ಪಡೆಯುವುದಾಗಿ ಹೇಳಿದ ಬಾಬಾ ರಾಮ್‌ದೇವ್ ವೈದ್ಯರನ್ನು “ಭೂಮಿಯ ಮೇಲಿನ ದೇವರ ದೂತರು” ಎಂದು ಬಣ್ಣಿಸಿದರು.  ಕೊವಿಡ್ ವಿರುದ್ಧ ಅಲೋಪಥಿ ಔಷಧಿಗಳ ಪರಿಣಾಮಕಾರಿತ್ವದ ಕುರಿತು ಹೇಳಿಕೆ ನೀಡಿ ರಾಮ್‌ದೇವ್ ವಿವಾದವನ್ನು ಹುಟ್ಟುಹಾಕಿದ್ದರು .ಇದನ್ನು ವೈದ್ಯರ ಸಂಘಟನೆ ತೀವ್ರವಾಗಿ ಖಂಡಿಸಿತ್ತು.

ಈಗ, ಜೂನ್ 21 ರಿಂದ ಎಲ್ಲರಿಗೂ ಉಚಿತ ಲಸಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಸ್ವಾಗತಿಸಿದ ಮ್‌ದೇವ್ ಇದನ್ನು “ಐತಿಹಾಸಿಕ” ಹೆಜ್ಜೆ ಎಂದು ಬಣ್ಣಿಸಿದರು ಮತ್ತು ಲಸಿಕೆ ಪಡೆಯುವಂತೆ ಎಲ್ಲರಿಗೂ ಮನವಿ ಮಾಡಿದರು.

ಲಸಿಕೆಯ ಎರಡೂ ಡೋಸ್, ಯೋಗ ಮತ್ತು ಆಯುರ್ವೇದದ ರಕ್ಷಣೆ ಪಡೆಯಿರಿ. ಕೊವಿಡ್‌ನಿಂದ ಒಬ್ಬ ವ್ಯಕ್ತಿಯೂ ಸಾಯಬಾರದು ಎಂದು ಅವರು ನಿಮಗೆ ಅಂತಹ ರಕ್ಷಣೆಯ ಗುರಾಣಿಯನ್ನು ನೀಡುತ್ತಾರೆ” ಎಂದು ಅವರು ಹರಿದ್ವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಮ್‌ದೇವ್ ಹೇಳಿದ್ದಾರೆ.

ಯಾವಾಗ ಲಸಿಕೆ ಪಡೆಯುತ್ತೀರಿ ಎಂದು ಕೇಳಿದಾಗ, “ಶೀಘ್ರದಲ್ಲೇ” ಎಂದು ಹೇಳಿದ ರಾಮ್‌ದೇವ್ ಉತ್ತಮ ಅಲೋಪತಿ ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅವರನ್ನು “ಭೂಮಿಯ ಮೇಲಿನ ದೇವದೂತರು” ಎಂದು ಬಣ್ಣಿಸಿದರು.

ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಯೊಂದಿಗೆ ನಡೆಯುತ್ತಿರುವ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ ಯಾವುದೇ ಸಂಘಟನೆಯೊಂದಿಗೆ ಯಾವುದೇ ದ್ವೇಷ ಇಲ್ಲ ಎಂದು ಹೇಳಿದರು. ಔಷಧಿಗಳ ಹೆಸರಿನಲ್ಲಿ ಜನರ ಶೋಷಣೆಗೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ ಯೋಗಗುರು.

ಅನೇಕ ವೈದ್ಯರು ಜೆನೆರಿಕ್ ಔಷಧಿಗಳ ಬದಲಿಗೆ ದುಬಾರಿ ಔಷಧಿಗಳನ್ನು ಶಿಫಾರಸು ಮಾಡುವ ಪ್ರವೃತ್ತಿಯಿಂದಾಗಿ ಪ್ರಧಾನ್ ಮಂತ್ರಿ ಔಷಧಿ ಕೇಂದ್ರಗಳನ್ನು ತೆರೆಯಬೇಕಾಗಿ ಬಂತು . ಈ ಔಷಧಿಗಳು ಹೆಚ್ಚು ಅಗ್ಗವಾಗಿದೆ ಎಂದು ಬಾಬಾ ರಾಮ್‌ದೇವ್ ಹೇಳಿದರು.

“ನಾನು ಯಾವುದೇ ಸಂಸ್ಥೆಯ ವಿರೋಧಿಯಲ್ಲ. ಒಳ್ಳೆಯ ವೈದ್ಯರು ನಿಜವಾದ ವರದಾನ. ಅವರು ಭೂಮಿಯ ಮೇಲಿನ ದೇವದೂತರು. ಆದರೆ ಕೆಲವು ವೈದ್ಯರು ತಪ್ಪು ಕೆಲಸಗಳನ್ನು ಮಾಡುತ್ತಾರೆ.  “ತುರ್ತು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ವಿಷಯಕ್ಕೆ ಬಂದಾಗ ಅಲೋಪತಿ ಉತ್ತಮವಾಗಿದೆ. ಇದರ ಬೇರೆ ಮಾತಿಲ್ಲ ಎಂದಿದ್ದಾರೆ ಯೋಗ ಗುರು ಬಾಬಾ ರಾಮ್‌ದೇವ್ .

ಇದನ್ನೂ ಓದಿ: Ramdev: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​

ಇದನ್ನೂ ಓದಿ: ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಅಗೌರವ ತೋರಿದ ಆರೋಪ; ಬಾಬಾ ರಾಮ್​ದೇವ್​ ವಿರುದ್ಧ ಎಫ್​ಐಆರ್​

Published On - 10:55 am, Fri, 11 June 21

Web contact

TV9 Kannada

Read More
Follow Us