Andhra pradesh: ವೈಎಸ್‌ಆರ್‌ಸಿಪಿ ಶಾಸಕರಿಗೆ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ; ಬೆಂಗಾವಲು ವಾಹನ ಮೇಲೆ ಚಪ್ಪಲಿ ಎಸೆತ

|

Updated on: May 01, 2023 | 8:48 PM

ಕಳೆದ ಐದು ತಿಂಗಳಿಂದ ಪಡಿತರ ಸಿಗದಿರುವುದು ಹಾಗೂ ರಸ್ತೆ ಹಾಗೂ ಚರಂಡಿಗಳ ದುಸ್ಥಿತಿಯಿಂದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಹೊರವಲಯದಲ್ಲಿ ಮಾಜಿ ಸಚಿವರನ್ನು ತಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

Andhra pradesh: ವೈಎಸ್‌ಆರ್‌ಸಿಪಿ ಶಾಸಕರಿಗೆ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ; ಬೆಂಗಾವಲು ವಾಹನ ಮೇಲೆ ಚಪ್ಪಲಿ ಎಸೆತ
ಮಾಜಿ ಸಚಿವ ಶಂಕರ ನಾರಾಯಣ ಅವರನ್ನು ತಡೆದ ಗ್ರಾಮಸ್ಥರು
Follow us on

ವೈಎಸ್‌ಆರ್‌ಸಿಪಿ (YSRCP) ಶಾಸಕ ಮತ್ತು ಮಾಜಿ ಸಚಿವ ಶಂಕರ ನಾರಾಯಣ (Sankara Narayana) ಅವರಿಗೆ ಶ್ರೀ ಸತ್ಯಸಾಯಿ ಜಿಲ್ಲೆಯ ಅವರ ಕ್ಷೇತ್ರ ಪೆನುಕೊಂಡದಲ್ಲಿ (Penukonda) ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲಿನ ಗ್ರಾಮಸ್ಥರು ಮತ್ತು ಅವರದ್ದೇ ಪಕ್ಷದ ಕಾರ್ಯಕರ್ತರು ಶಂಕರ ನಾರಾಯಣ ಅವರಿಗೆ ಗ್ರಾಮಕ್ಕೆ ಪ್ರವೇಶಿಸದಂತೆ ತಡೆದು ಅವರ ಬೆಂಗಾವಲು ಪಡೆಗೆ ಚಪ್ಪಲಿ ಎಸೆದ ಘಟನೆ ನಡೆದಿದೆ.

ಕಳೆದ ಐದು ತಿಂಗಳಿಂದ ಪಡಿತರ ಸಿಗದಿರುವುದು ಹಾಗೂ ರಸ್ತೆ ಹಾಗೂ ಚರಂಡಿಗಳ ದುಸ್ಥಿತಿಯಿಂದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಹೊರವಲಯದಲ್ಲಿ ಮಾಜಿ ಸಚಿವರನ್ನು ತಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶಾಸಕರ ಬೆಂಗಾವಲು ವಾಹನವನ್ನು ತಡೆದ ಪಕ್ಷದ ಕಾರ್ಯಕರ್ತರಲ್ಲಿ ಒಬ್ಬರಾದ ನಾಗಭೂಷಣ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ:ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ₹ 830 ಕೋಟಿ ಖರ್ಚು ಮಾಡಲಾಗಿದೆ ಎಂದ ಆಪ್ ನಾಯಕನ ವಿರುದ್ದ ಪೊಲೀಸ್ ಕೇಸು

ವೈಎಸ್‌ಆರ್‌ಸಿಪಿ ರೆಡ್ಡಿ ಅವರನ್ನು ಸ್ಟೀರಿಂಗ್ ಕಮಿಟಿ ಸದಸ್ಯತ್ವದಿಂದ ಅಮಾನತುಗೊಳಿಸಿದ್ದು ಶಾಸಕ ನಾರಾಯಣ ಅವರನ್ನು ವಿರೋಧಿಸಬೇಡಿ ಎಂದು ಎಚ್ಚರಿಕೆ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Mon, 1 May 23