ಇನ್ನೂ ಜಾನುವಾರು ಮೂಳೆಯ ಬಳಕೆ ಸಕ್ಕರೆಯ ಬಣ್ಣ ತೆಗೆಯುವ ವಿಧಾನವೇ?

ಅತಿ ಹೆಚ್ಚಿನ ತಾಪಮಾನಗಳಲ್ಲಿ ಜಾನುವಾರು ಮೂಳೆಯನ್ನು ಸುಟ್ಟು ಮೂಳೆಕರಿಯನ್ನು ತಯಾರಿಸಲಾಗುತ್ತದೆ. ಪರಿಣಾಮವಾಗಿ ಉತ್ಪನ್ನವಾಗುವ ಪದಾರ್ಥವು ನಯವಾದ ಕರಿಯ ಪುಡಿಯಾಗಿದ್ದು ಸಕ್ಕರೆಯ ದ್ರಾವಣದಿಂದ ಕಲ್ಮಶಗಳನ್ನು ಹೀರಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಇನ್ನೂ ಜಾನುವಾರು ಮೂಳೆಯ ಬಳಕೆ ಸಕ್ಕರೆಯ ಬಣ್ಣ ತೆಗೆಯುವ ವಿಧಾನವೇ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 29, 2023 | 5:11 PM

ಇದು ಅನೇಕ ಶತಮಾನಗಳಿಂದ ಬಳಸಲಾಗುತ್ತಿರುವ ಸಾಂಪ್ರದಾಯಿಕ ವಿಧಾನವಾಗಿದೆ. ಅತಿ ಹೆಚ್ಚಿನ ತಾಪಮಾನಗಳಲ್ಲಿ ಜಾನುವಾರು ಮೂಳೆಯನ್ನು ಸುಟ್ಟು ಮೂಳೆಕರಿಯನ್ನು ತಯಾರಿಸಲಾಗುತ್ತದೆ. ಪರಿಣಾಮವಾಗಿ ಉತ್ಪನ್ನವಾಗುವ ಪದಾರ್ಥವು ನಯವಾದ ಕರಿಯ ಪುಡಿಯಾಗಿದ್ದು ಸಕ್ಕರೆಯ ದ್ರಾವಣದಿಂದ ಕಲ್ಮಶಗಳನ್ನು ಹೀರಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಸಕ್ಕರೆಯ ಬಣ್ಣ ತೆಗೆಯುವಲ್ಲಿ ಈ ಮೂಳೆಕರಿಯು ಒಂದು ಸುರಕ್ಷಿತ ಹಾಗೂ ಪರಿಣಾಮಕಾರಿ ವಸ್ತುವಾಗಿದೆ. ಜೊತೆಗೆ ಜಾನುವಾರು ಮೂಳೆಗಳು ಮಾಂಸ ಉದ್ಯಮದ ಉಪ-ಉತ್ಪನ್ನವಾದ್ದರಿಂದ ಇದು ನವೀಕರಿಸಬಹುದಾದ ಸಂಪನ್ಮೂಲವೂ ಆಗಿದೆ. ಆದರೆ ಅದು ಸಸ್ಯಾಹಾರಿ ಅಥವಾ ಪಶು ಉತ್ಪನ್ನ ರಹಿತ ಸಸ್ಯಾಹಾರ (ವೀಗನ್) ಆಯ್ಕೆಯಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ವೀಗನ್ ಹಾಗೂ ಸಸ್ಯಾಹಾರಿ ಸಕ್ಕರೆಗೆ ಹೆಚ್ಚಿನ ಬೇಡಿಕೆ ಇದೆ. ಇದು ಪರ್ಯಾಯ ಬಣ್ಣ ತೆಗೆಯುವ ವಿಧಾನಗಳ ಅಭಿವೃದ್ಧಿಗೆ ಕಾರಣವಾಗಿದೆ ಸಕ್ರಿಯ ಇಂಗಾಲ ಮತ್ತು ಸಕ್ರಿಯ ಅಲ್ಯುಮಿನಗಳಂತ ವಿಧಾನಗಳು ಸಕ್ಕರೆ ದ್ರಾವಣಗಳಿಂದ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದ್ದರೂ ಮೂಳೆಕರಿಯಂತೆ ಸಾಂಪ್ರದಾಯಿಕವಾಗಿಲ್ಲ.

ಬಣ್ಣ ತೆಗೆಯುವ ವಿಧಾನದ ಆಯ್ಕೆಯು ಅಪೇಕ್ಷಿತ ಸಕ್ಕರೆಯ ಪರಿಶುದ್ಧತೆಯ ಮಟ್ಟ, ಡಿಕಲರೈಸರ್ ನ ಬೆಲೆ ಹಾಗೂ ಅದರ ಲಭ್ಯತೆ ಸೇರಿದಂತೆ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಸಾಂಪ್ರದಾಯಿಕ ಸುರಕ್ಷಿತ ಹಾಗೂ ಪರಿಣಾಮಕಾರಿ ಆಯ್ಕೆಯನ್ನು ಬಯಸುವವರಿಗೆ ಮೂಳೆಕರಿ ಒಂದು ಉತ್ತಮ ಆಯ್ಕೆಯಾಗಿದೆ.

ಸಕ್ಕರೆಯ ಬಣ್ಣ ತೆಗೆಯಲು ಮೂಳೆಕರಿಯ ಬಳಕೆಯ ಸಾಧಕ ಭಾದಕಗಳು ಹೀಗಿವೆ:

ಸಾಧಕಗಳು

 ಸಕ್ಕರೆಯ ದ್ರಾವಣದಿಂದ ಕಲ್ಮಶಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ.

 ಸುರಕ್ಷಿತ ಹಾಗೂ ನವೀಕರಿಸಬಹುದಾದ ಸಂಪನ್ಮೂಲ

 ತುಲನಾತ್ಮಕವಾಗಿ ಅಗ್ಗವಾದ ವಿಧಾನ ವಸ್ತು

ಬಾಧಕಗಳು

 ವೀಗನ್ ಅಥವಾ ಸಸ್ಯಹಾರಿ ಅಲ್ಲ

 ಸಕ್ಕರೆಗೆ ಸ್ವಲ್ಪ ಮಟ್ಟಿಗೆ ಹೊಗೆಯ ವಾಸನೆಯನ್ನು ನೀಡಬಹುದು

 ಇನ್ನಿತರ ಬಣ್ಣ ತೆಗೆಯುವ ವಿಧಾನಗಳಷ್ಟು ಪರಿಣಾಮಕಾರಿ ಅಲ್ಲ

ಆದರೆ ಅಂತಿಮವಾಗಿ, ಸಕ್ಕರೆಯ ಬಣ್ಣ ತೆಗೆಯಲು ಜಾನುವಾರು ಮೂಳೆಯನ್ನು ಬಳಸುವುದೋ ಅಥವಾ ಬೇಡವೋ ಎನ್ನುವುದು ವೈಯಕ್ತಿಕ ನಿರ್ಧಾರವಾಗಿದೆ. ನಿಮ್ಮ ಆಹಾರ ನಿರ್ಬಂಧಗಳು, ನಿಮ್ಮ ವ್ಯಯಮಿತಿ (ಬಜೆಟ್) ಮತ್ತು ಸಕ್ಕರೆಯ ಅಪೇಕ್ಷಿತ ಪರಿಶುದ್ಧತೆ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಸಕ್ರಿಯ ಇಂಗಾಲ ಅಥವಾ ಸಕ್ರಿಯ ಅಲ್ಯುಮಿನಗಳು ಪರಿಣಾಮಕಾರಿಯಾಗಿದ್ದರೂ ಮೂಳೆಕರಿಯಷ್ಟು ಸಾಂಪ್ರದಾಯಿಕವಾಗಿಲ್ಲ. ವಿದ್ಯುದಾಣು ವಿನಿಮಯ (ಅಯಾನ್ ಎಕ್ಸ್ಚೇಂಜ್), ಅತಿರಿಕ್ತ ಶೋಧಿಸುವಿಕೆ (ಅಲ್ಟ್ರಾ ಫಿಲ್ಟರೇಷನ್) ವಿಧಾನಗಳು ಹೆಚ್ಚು ಜನಪ್ರಿಯವಾಗುತ್ತಿರುವ ಹೆಚ್ಚು ಪರಿಣಾಮಕಾರಿಯಾದ ಹೊಸ ವಿಧಾನಗಳಾಗಿದ್ದು ಉತ್ತಮ ಗುಣಮಟ್ಟದ ಸಕ್ಕರೆಯನ್ನು ಉತ್ಪಾದಿಸುವುದರಿಂದ ಹೆಚ್ಚು ಜನಪ್ರಿಯವಾಗುತ್ತಿವೆ.

ಭಾರತದಲ್ಲಿ ಇನ್ನೂ ಬಳಕೆಯಲ್ಲಿರುವ ಸಕ್ಕರೆಯ ಬಣ್ಣ ತೆಗೆಯುವ ಕೆಲವು ವಿಧಾನಗಳು

 ಮೂಳೆಕರಿ: ಇದು ಅನೇಕ ಶತಮಾನಗಳಿಂದ ಬಳಸಲಾಗುತ್ತಿರುವ ಸಾಂಪ್ರದಾಯಿಕ ಬಣ್ಣ ತೆಗೆಯುವ ವಿಧಾನವಾಗಿದೆ. ಅತಿ ಹೆಚ್ಚಿನ ತಾಪಮಾನಗಳಲ್ಲಿ ಜಾನುವಾರು ಮೂಳೆಯನ್ನು ಸುಟ್ಟು ಮೂಳೆಕರಿಯನ್ನು ತಯಾರಿಸಲಾಗುತ್ತದೆ. ಪರಿಣಾಮವಾಗಿ ಉತ್ಪನ್ನವಾಗುವ ಪದಾರ್ಥವು ನಯವಾದ ಕರಿಯ ಪುಡಿಯಾಗಿದ್ದು ಸಕ್ಕರೆಯ ದ್ರಾವಣದಿಂದ ಕಲ್ಮಶಗಳನ್ನು ಹೀರಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

 ಸಕ್ರಿಯ ಇಂಗಾಲ: ಇಂಗಾಲ ವನ್ನು ಉಷ್ಣತೆ ಅಥವಾ ರಾಸಾಯನಿಕಗಳಿಂದ ಸಕ್ರಿಯಗೊಳಿಸಲಾದ ಮಾನವ ನಿರ್ಮಿತ ಬಣ್ಣ ತೆಗೆಯುವ ಪದಾರ್ಥ (ಡಿಕಲರೈಸರ್). ಇದು ಸಕ್ಕರೆಯ ಕಲ್ಮಶಗಳನ್ನು ಹೀರಿಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿಯಾದ್ದರಿಂದ ಮೂಳೆಕರಿಯ ಜೊತೆಗೆ ಇದನ್ನು ಬಳಸಲಾಗುವುದು.

 ಸಕ್ರಿಯ ಅಲ್ಯುಮಿನ: ಅಲ್ಯುಮಿನವನ್ನು ಉಷ್ಣತೆ ಅಥವಾ ರಾಸಾಯನಿಕಗಳಿಂದ ಸಕ್ರಿಯಗೊಳಿಸಲಾದ ಮಾನವ ನಿರ್ಮಿತ ಬಣ್ಣ ತೆಗೆಯುವ ಪದಾರ್ಥ (ಡಿಕಲರೈಸರ್) ಇದು ಸಕ್ರಿಯ ಇಂಗಾಲಕ್ಕಿಂತ ಕಡಿಮೆ ಪರಿಣಾಮಕಾರಿಯಾಗಿದ್ದರೂ ಅದಕ್ಕಿಂತ ಅಗ್ಗವಾಗಿದೆ.

 ವಿದ್ಯುದಾಣು ವಿನಿಮಯ (ಅಯಾನ್ ಎಕ್ಸ್ಚೇಂಜ್): ಈ ವಿಧಾನದಲ್ಲಿ ಸಕ್ಕರೆಯ ದ್ರಾವಣದಿಂದ ಕಲ್ಮಶಗಳನ್ನು ತೆಗೆದುಹಾಕ ಲು ರಾಸಾಯನಿಕ ರಾಳ(ರೆಸಿನ್)ವನ್ನು ಬಳಸಲಾಗುತ್ತದೆ. ಸಕ್ಕರೆಯ ದ್ರಾವಣಗಳಲ್ಲಿರುವ ಕಲ್ಮಶಗಳಿಂದ ಆಕರ್ಷಿತ ವಾಗುವಂತಹ ವಿದ್ಯುದಾಣುಗಳನ್ನು ರಾಸಾಯನಿಕ ರಾಳ(ರೆಸಿನ್)ಗಳಿಗೆ ಸೇರಿಸಲಾಗಿರುತ್ತದೆ. ನಂತರ ಸಕ್ಕರೆಯ ದ್ರಾವಣದಲ್ಲಿರುವ ಕಲ್ಮಶಗಳು ರೆಸಿನ್ ನ ಮೇಲಿರುವ ವಿದ್ಯುದಾಣಗಳೊಂದಿಗೆ ಬರೆದು ಬೆರೆತು ವಿನಿಮಯವಾಗುತ್ತವೆ.

 ಅತಿರಿಕ್ತ ಶೋಧಿಸುವಿಕೆ (ಅಲ್ಟ್ರಾ ಫಿಲ್ಟರೇಷನ್): ಸಕ್ಕರೆಯ ದ್ರಾವಣದಿಂದ ಕಲ್ಮಶಗಳನ್ನು ತೆಗೆದುಹಾಕಲು ಪೊರೆಗಳನ್ನು ಬಳಸುವ ವಿಧಾನವಾಗಿದೆ. ಕಲ್ಮಶಗಳಂತಹ ದೊಡ್ಡ ಪರಮಾಣು(ಮಾಲಿಕ್ಯುಲ್)ಗಳನ್ನು ತಡೆದು ಸುಕ್ರೋಸ್ ನಂತಹ ಸಣ್ಣ ಪರಮಾಣುಗಳನ್ನು ಹಾದುಹೋಗಲು ಬಿಡುವಂತೆ ಪೊರೆಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಭಾರತದಲ್ಲಿ ಇಂದಿಗೂ ಮೂಳೆ ಕರಿಯು ಸಕ್ಕರೆಯ ಬಣ್ಣ ತೆಗೆಯುವ ಅತಿ ಸಾಮಾನ್ಯ ವಿಧಾನವಾಗಿದೆ ಏಕೆಂದರೆ ಇದು ಸಾಂಪ್ರದಾಯಿಕವಾದ ಬಹುವಾಗಿ ಸ್ವೀಕೃತವಾದ ಹಾಗೂ ಪರಿಣಾಮಕಾರಿ ವಿಧಾನ ಎಂದು ಸಾಬೀತಾಗಿದೆ.

ಇದನ್ನೂ ಓದಿ:Opinion: ಪೆಟ್ರೋಲ್ ವಿತರಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಅವಶ್ಯ: ಡಾ ರವಿಕಿರಣ

ಭಾರತದಲ್ಲಿ ಇಂದಿಗೂ ಮೂಳೆ ಕರಿಯು ಸಕ್ಕರೆಯ ಬಣ್ಣ ತೆಗೆಯುವ ಅತಿ ಸಾಮಾನ್ಯ ವಿಧಾನವಾಗಿದೆ ಏಕೆಂದರೆ ಇದು ಬಹುವಾಗಿ ಸ್ವೀಕೃತವಾದ ಸಾಂಪ್ರದಾಯಿಕ ಹಾಗೂ ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದಾಗ್ಯೂ ವೀಗನ್ ಹಾಗೂ ಸಸ್ಯಾಹಾರಿ ಸಕ್ಕರೆಗೆ ಇರುವ ಹೆಚ್ಚಿನ ಬೇಡಿಕೆ ಸಕ್ರಿಯ ಇಂಗಾಲ ಮತ್ತು ಸಕ್ರಿಯ ಅಲ್ಯುಮಿನಗಳಂತ ಪರ್ಯಾಯ ಬಣ್ಣ ತೆಗೆಯುವ ವಿಧಾನಗಳ ಅಭಿವೃದ್ಧಿಗೆ ಕಾರಣವಾಗಿದೆ

ಸಂಸ್ಕರಿಸದ ಸಕ್ಕರೆಯ ಪರ್ಯಾಯಗಳು

ಸಕ್ಕರೆಗೆ ಮೂಳೆಕರಿಯನ್ನು ಸಂಯೋಜಕವಾಗಿ ಬಳಸುವುದನ್ನು ತಪ್ಪಿಸಲು ಸಂಸ್ಕರಿಸಿದ ಪರ್ಯಾಯಗಳು ಉತ್ತಮ ಉಪಾಯ. ಖರ್ಜೂರ ಸಕ್ಕರೆ, ಹಣ್ಣಿನ ಸಕ್ಕರೆ, ತೆಂಗಿನ ಸಕ್ಕರೆ, ಮುಸ್ಕೋ ವಾಡೋ ಸಕ್ಕರೆ ಡೆಮರೇರ ಸಕ್ಕರೆ ಅವುಗಳಲ್ಲಿ ಕೆಲವು. ನೈಸರ್ಗಿಕವಾಗಿ ದೊರೆಯುವಂತಹ ಖರ್ಜೂರದ ಸಿರಪ್, ಕಚ್ಚಾ ಅಥವಾ ಸಾವಯವ ಜೇನುತುಪ್ಪ, ಗಂಧಕರಹಿತ ಕಾಕಂಬಿ, ಭೂತಾಳೆ ಮಕರಂದ ಹಾಗೂ ಮೇಪಲ್ ಸಿರಪ್ ನಂತಹ ಸಕ್ಕರೆಯ ಪರ್ಯಾಯಗಳನ್ನು ಬಳಸಬಹುದು.

ಪ್ರಾಣಿ ಹಕ್ಕು ಸಂಸ್ಥೆಯಾದ ‘ಬ್ಯೂಟಿ ವಿಥೌಟ್ ಕ್ರುಯೆಲ್ಟಿ’ಯ ಅನುಸಾರ ಭಾರತದ ಬಹುತೇಕ ಸಂಸ್ಕರಣಾಗಾರ(ರಿಫೈನರಿ)ಗಳಲ್ಲಿ ಕಬ್ಬಿನಿಂದ ತಯಾರು ಮಾಡುವ ಸಕ್ಕರೆ ನಿಜವಾದ ಅರ್ಥದಲ್ಲಿ ವೀಗನ್ ಆಗಿದೆ. ಕಬ್ಬಿನ ಸಕ್ಕರೆಯ ಶೋಧಿಸುವಿಕೆ ಹಾಗೂ ಸಕ್ಕರೆಯ ಬಣ್ಣ ತೆಗೆಯುವ ತಂತ್ರಗಳನ್ನು ಬಳಸುವ ತಯಾರಕರು ಅಯಾನ್ ಎಕ್ಸ್ಚೇಂಜ್ ರೆಸಿನ್ ಗಳನ್ನು ಅಥವಾ ಗಂಧಕದ ಡೈಯಾಕ್ಸೈಡ್ ಅನ್ನು ಬಳಸುತ್ತಾರೆ.

Girish Linganna

Girish Linganna

– ಗಿರೀಶ್ ಲಿಂಗಣ್ಣ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್