ಪ್ಯಾಲೆಸ್ತೀನಿ ಆರಾಧಕರ ಮೇಲೆ ದಾಳಿ ನಡೆದಿದೆ ಎಂದ ಅಲ್ ಜಜೀರ: ಇಸ್ರೇಲ್ – ಹಮಾಸ್ ಕದನದ ಕಣ್ಣಲ್ಲಿ ಅಲ್ ಅಕ್ಸಾ ಮಸೀದಿ

ಅಲ್ ಅಕ್ಸಾ ಮಸೀದಿಯನ್ನು ಮುಸ್ಲಿಮರು ಅತ್ಯಂತ ಪವಿತ್ರ ಮಸೀದಿ ಎಂದೃ ಪರಿಗಣಿಸುತ್ತಾರೆ. ಈ ಮಸೀದಿಯನ್ನು ನೋಬಲ್ ಸ್ಯಾಂಕ್ಚುರಿ (ಹರಾಮ್ ಅಲ್ - ಶರೀಫ್) ಎಂದೂ, ಪಾಶ್ಚಾತ್ಯ ಜಗತ್ತಿನಲ್ಲಿ 'ಟೆಂಪಲ್ ಮೌಂಟ್' ಎಂದೂ ಕರೆಯಲಾಗುತ್ತದೆ. ಈ ಪವಿತ್ರ ಮಸೀದಿಯ ಪರಿಸರಲ್ಲಿ ಪ್ರವಾದಿ ಮುಹಮ್ಮದ್ ಅವರು ತನ್ನ ಪವಾಡಮಯ ರಾತ್ರಿ ಪ್ರಯಾಣದ (ಇಸ್ರಾ ಹಾಗೂ ಮಿರಾಜ್) ಮೂಲಕ ಸ್ವರ್ಗಕ್ಕೆ ತೆರಳಿದರು ಎನ್ನಲಾಗುತ್ತದೆ. ಆದ್ದರಿಂದ ಈ ಪ್ರದೇಶ ಮುಸ್ಲಿಮರಿಗೆ ಪವಿತ್ರ ಸ್ಥಳವಾಗಿದೆ.

ಪ್ಯಾಲೆಸ್ತೀನಿ ಆರಾಧಕರ ಮೇಲೆ ದಾಳಿ ನಡೆದಿದೆ ಎಂದ ಅಲ್ ಜಜೀರ: ಇಸ್ರೇಲ್ - ಹಮಾಸ್ ಕದನದ ಕಣ್ಣಲ್ಲಿ ಅಲ್ ಅಕ್ಸಾ ಮಸೀದಿ
ಅಲ್ - ಅಕ್ಸಾ ಮಸೀದಿ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 10, 2023 | 6:14 PM

ಅಲ್ ಜಜೀ಼ರಾ ವಾಹಿನಿ ಶನಿವಾರ, ಎಪ್ರಿಲ್ 8ರಂದು ಇಸ್ರೇಲ್ (Israel) ದಕ್ಷಿಣ ಲೆಬನಾನ್ ಮೇಲೆ ಪ್ಯಾಲೆಸ್ತೀನಿನ (Palestine) ಸಂಘಟನೆ ಹಮಾಸ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ವರದಿ ಮಾಡಿತು. ಇಸ್ರೇಲಿ ಸೇನೆ ಶುಕ್ರವಾರ ತಾನು ನಡೆಸಿದ ದಾಳಿ ಹಿಂದಿನ ಹಮಾಸ್ ಲೆಬನಾನ್‌ನಿಂದ ಇಸ್ರೇಲ್ ಮೇಲೆ ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿತ್ತು ಎಂದಿದೆ. ಇಸ್ರೇಲ್ ಹಮಾಸ್ ಅಧೀನದಲ್ಲಿರುವ ಗಾಜಾ಼ ಪಟ್ಟಿಯ ಮೇಲೂ ರಾತ್ರಿಯ ವೇಳೆ ದಾಳಿ ನಡೆಸಿತ್ತು. ಅಲ್ ಜಜೀ಼ರಾ ತನ್ನ ವರದಿಯಲ್ಲಿ ಇಸ್ರೇಲಿ ಪೊಲೀಸರು ಜೆರುಸಲೇಮ್ ಒಳಗಿರುವ ಅಲ್ – ಅಕ್ಸಾ ಮಸೀದಿಯಲ್ಲಿದ್ದ ಪ್ಯಾಲೆಸ್ತೀನಿ ಆರಾಧಕರ ಮೇಲೆ ಸತತವಾಗಿ ಎರಡನೇ ಬಾರಿ ದಾಳಿ ನಡೆಸಿದ ಬಳಿಕ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆದಿದೆ ಎಂದಿತು. ಅಲ್ – ಅಕ್ಸಾ ಮಸೀದಿ ಮೆಕ್ಕಾ ಹಾಗೂ ಮದೀನಾಗಳ ಬಳಿಕ ಮುಸ್ಲಿಮರ ಮೂರನೇ ಪವಿತ್ರ ಸ್ಥಳವಾಗಿದೆ.

ಅಲ್ – ಅಕ್ಸಾ ಮಸೀದಿ: ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲೊಂದು

ಅಲ್ ಅಕ್ಸಾ ಮಸೀದಿಯನ್ನು ಮುಸ್ಲಿಮರು ಅತ್ಯಂತ ಪವಿತ್ರ ಮಸೀದಿ ಎಂದೃ ಪರಿಗಣಿಸುತ್ತಾರೆ. ಈ ಮಸೀದಿಯನ್ನು ನೋಬಲ್ ಸ್ಯಾಂಕ್ಚುರಿ (ಹರಾಮ್ ಅಲ್ – ಶರೀಫ್) ಎಂದೂ, ಪಾಶ್ಚಾತ್ಯ ಜಗತ್ತಿನಲ್ಲಿ ‘ಟೆಂಪಲ್ ಮೌಂಟ್’ ಎಂದೂ ಕರೆಯಲಾಗುತ್ತದೆ. ಈ ಪವಿತ್ರ ಮಸೀದಿಯ ಪರಿಸರಲ್ಲಿ ಪ್ರವಾದಿ ಮುಹಮ್ಮದ್ ಅವರು ತನ್ನ ಪವಾಡಮಯ ರಾತ್ರಿ ಪ್ರಯಾಣದ (ಇಸ್ರಾ ಹಾಗೂ ಮಿರಾಜ್) ಮೂಲಕ ಸ್ವರ್ಗಕ್ಕೆ ತೆರಳಿದರು ಎನ್ನಲಾಗುತ್ತದೆ. ಆದ್ದರಿಂದ ಈ ಪ್ರದೇಶ ಮುಸ್ಲಿಮರಿಗೆ ಪವಿತ್ರ ಸ್ಥಳವಾಗಿದೆ.

ಇಸ್ಲಾಮಿಕ್ ಪರಂಪರೆಯ ಪ್ರಕಾರ, ಅಲ್ ಅಕ್ಸಾ ಮಸೀದಿ ಭೂಮಿಯ ಮೇಲಿನ ಮೊತ್ತ ಮೊದಲ ಆರಾಧನಾಲಯವಾಗಿದ್ದು, ಅದನ್ನು ಪ್ರವಾದಿ ಆದಂ ನಿರ್ಮಿಸಿದ್ದರು. ಅದನ್ನು ಬಳಿಕ ಪ್ರವಾದಿ ಇಬ್ರಾಹಿಂ ಮರುನಿರ್ಮಾಣಗೊಳಿಸಿದರು. ನಂತರ ಪ್ರವಾದಿ ಸುಲೈಮಾನ್ ಅವರು ಮರು ನಿರ್ಮಿಸಿದರು. ಅದು ಹಲವು ಬಾರಿ ಬೇರೆ ಬೇರೆ ಆಡಳಿತಗಾರರು, ರಾಜವಂಶಗಳಿಂದ ನಾಶಗೊಂಡಿತ್ತು, ಮರುನಿರ್ಮಾಣಗೊಂಡಿತ್ತು.

ಇದರ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ, ಅಲ್ ಅಕ್ಸಾ ಮಸೀದಿ ಪ್ಯಾಲೆಸ್ತೀನಿಯನ್ನರಿಗೆ ರಾಜಕೀಯ ಹಾಗೂ ಐತಿಹಾಸಿಕ ಮಹತ್ವವನ್ನೂ ಹೊಂದಿದೆ. ಈ ಮಸೀದಿಯು ಜೆರುಸಲೇಮ್ ನಗರದ ಪೂರ್ವದಲ್ಲಿದ್ದು, ಅಂತಾರಾಷ್ಟ್ರೀಯ ಸಮುದಾಯ ಆಕ್ರಮಿತ ಪ್ಯಾಲೆಸ್ತೀನಿ ಪ್ರದೇಶ ಎಂದು ಗುರುತಿಸುತ್ತದೆ. ಆದ್ದರಿಂದ ಈ ಮಸೀದಿ ಪ್ಯಾಲೆಸ್ತೀನಿ ಗುರುತಾಗಿದ್ದು, ಇಸ್ರೇಲಿ ಅತಿಕ್ರಮಣ ವಿರೋಧಿ ಸ್ಥಳವಾಗಿದೆ.

ಇದೊಂದು ಒಗ್ಗಟ್ಟಿನ ಪ್ರದೇಶವೂ ಆಗಿರುವ ಕಾರಣದಿಂದ, ಮುಸ್ಲಿಮರಿಗೂ ಅಲ್ ಅಕ್ಸಾ ಪವಿತ್ರ ಪ್ರದೇಶವಾಗಿದೆ. ಜಗತ್ತಿನ ಎಲ್ಲ ಭಾಗಗಳಿಂದಲೂ ಮುಸಲ್ಮಾನರು ಇಲ್ಲಿಗೆ ಆಗಮಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಮುಸ್ಲಿಂ ಸಮುದಾಯದ ನಂಬಿಕೆ, ಶಕ್ತಿಯ ಪ್ರತೀಕವಾಗಿದ್ದು, ಜಾಗತಿಕವಾಗಿ ಮುಸ್ಲಿಮರ ಒಟ್ಟು ಚರಿತ್ರೆಯನ್ನು ಪ್ರತಿನಿಧಿಸುತ್ತದೆ.

  • ಜೆರುಸಲೇಮಿನ ಅಲ್ ಅಕ್ಸಾ ಮಸೀದಿಯ ಮೇಲೆ ಇಸ್ರೇಲಿ ಪೊಲೀಸರು ದಾಳಿ ನಡೆಸಿದ ಬಳಿಕ ಘರ್ಷಣೆ ಮಿತಿ ಮೀರಿದೆ.
  • ಇಸ್ರೇಲ್ ಭಾನುವಾರ (ಎಪ್ರಿಲ್ 9, 2023) ಸಿರಿಯಾದಲ್ಲಿನ ಮಿಲಿಟರಿ ಗುರಿಗಳ ಮೇಲೆ ಪ್ರತಿದಾಳಿ ನಡೆಸಿತು.
  • ಇಸ್ರೇಲ್ ಹಮಾಸ್ ಕೈಯಲ್ಲಿರುವ ಗಾಜಾ಼ ಪಟ್ಟಿಯ ಮೇಲೆ ಸತತ ವಾಯುದಾಳಿ ನಡೆಸಿತು.
  • ಈ ಮೊದಲು ಒಂದು ಉಗ್ರಗಾಮಿ ತಂಡ ಸಿರಿಯಾದಿಂದ ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್ ಮೇಲೆ ಆರು ರಾಕೆಟ್ ದಾಳಿ ನಡೆಸಿತು.
  • ಅವುಗಳಲ್ಲಿ ಮೂರು ಕ್ಷಿಪಣಿಗಳು ಗಡಿ ದಾಟಿ, ಇಸ್ರೇಲ್ ಪ್ರಾಂತ್ಯದಲ್ಲಿ ಬಿದ್ದಿದ್ದವು ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹೇಳಿದವು.
  • ಈ ದಾಳಿಯ ಕುರಿತು ಯಾವುದೇ ಉಗ್ರಗಾಮಿ ಸಂಘಟನೆ ಜವಾಬ್ದಾರಿ ವಹಿಸಿಕೊಳ್ಳದಿದ್ದರೂ, ಇಸ್ರೇಲ್ ಆ ರಾಕೆಟ್ ದಾಳಿ ಹಮಾಸ್ ಕೃತ್ಯ ಎಂದು ಆರೋಪಿಸಿತು.
  • ಗುರುವಾರ ಟ್ವೀಟ್ ಮಾಡಿದ ಇಸ್ರೇಲಿ ಮಿಲಿಟರಿ, ಲೆಬಾನೀಸ್ ಗಡಿಯೊಳಗಿಂದ 34 ರಾಕೆಟ್‌ಗಳು ಉಡಾವಣೆಗೊಂಡಿದ್ದವು ಎಂದಿತು.
  • ಇದು ಕಳೆದ ಎಪ್ರಿಲ್ ಬಳಿಕ ಲೆಬನಾನ್‌ನಿಂದ ಇಸ್ರೇಲ್ ಮೇಲೆ ನಡೆದ ಮೊದಲ ರಾಕೆಟ್ ದಾಳಿಯಾಗಿದೆ. ಅದರಲ್ಲೂ 2006ರಲ್ಲಿ ಲೆಬನಾನಿನ ಶಕ್ತಿಶಾಲಿ ಶಿಯಾ ಸಂಘಟನೆ ಹೆಜ಼್ಬೊಲ್ಲಾ ನಡುವೆ ನಡೆದ ಯುದ್ಧದ ಬಳಿಕದ ಅತಿದೊಡ್ಡ ದಾಳಿಯಾಗಿದೆ.

ರಾಜಕಾರಣದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ ಅಲ್ ಅಕ್ಸಾ ಮಸೀದಿ

ಅಲ್ – ಅಕ್ಸಾ ಮಸೀದಿ

ಅಲ್ ಅಕ್ಸಾ ಮಸೀದಿಯನ್ನು ಏಳನೇ ಶತಮಾನದಲ್ಲಿ ನಿರ್ಮಾಣಗೊಳಿಸಿದ್ದು, ಜಗತ್ತಿನ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದು ಎನ್ನಲಾಗುತ್ತದೆ. ಈ ಮಸೀದಿ ಹಲವಾರು ಐತಿಹಾಸಿಕ, ಧಾರ್ಮಿಕ ಸಂಗತಿಗಳಿಗೆ ಸಾಕ್ಷಿಯಾಗಿದ್ದು, ಇಸ್ಲಾಮಿಕ್ ಜಗತ್ತಿಗೆ ಒಂದು ಹೆಗ್ಗುರುತಾಗಿದೆ. ಈ ಮಸೀದಿಯನ್ನು ಹಲವು ಬಾರಿ ಅಭಿವೃದ್ಧಿ, ಪುನರ್ ನಿರ್ಮಾಣ ನಡೆಸಲಾಗಿದ್ದು, ಅದು ಈ ಪ್ರದೇಶದ ಬದಲಾದ ರಾಜಕೀಯ ಹಾಗೂ ಧಾರ್ಮಿಕ ಹವಾಗುಣವನ್ನು ಪ್ರತಿನಿಧಿಸಿದೆ. ಪ್ರಸ್ತುತ ನಿರ್ಮಾಣಗೊಂಡಿರುವ ಮಸೀದಿ 11ನೇ ಶತಮಾನದ್ದಾಗಿದ್ದು, ಫಾತಿಮಿದ್ ರಾಜವಂಶ ನಿರ್ಮಾಣಗೊಳಿಸಿತ್ತು. ಈ ಮಸೀದಿ ಅದರ ಬೆಳ್ಳಿಯ ಗುಮ್ಮಟದಿಂದ ಗುರುತಿಸಲ್ಪಡುವುದಾಗಿದ್ದು, ಇದನ್ನು 19ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ಗುಮ್ಮಟ ಸಾಕಷ್ಟು ದೂರದಿಂದಲೇ ಕಾಣಿಸುವುದರಿಂದ, ಮಸೀದಿ ಹಾಗೂ ಜೆರುಸಲೇಮ್ ನಗರದ ಸಾಂಪ್ರದಾಯಿಕ ಗುರುತು ಎನಿಸಿಕೊಂಡಿದೆ.

ಧಾರ್ಮಿಕ ಹೆಗ್ಗುರುತು ಎಂಬ ಮಹತ್ವದೊಡನೆ, ಈ ಮಸೀದಿ ಹಲವು ರಾಜಕೀಯ ವಿಚಾರಗಳಿಗೂ ಮಹತ್ವ ಪಡೆದಿದೆ. 2000ನೇ ಇಸವಿಯಲ್ಲಿ ಅರಬ್ – ಇಸ್ರೇಲಿ ಕದನದ ಸಂದರ್ಭದಲ್ಲಿ ಈ ಮಸೀದಿ ಇಸ್ರೇಲಿ ಸುರಕ್ಷಾ ಪಡೆಗಳು ಮತ್ತು ಪ್ಯಾಲೆಸ್ತೀನಿ ಆರಾಧಕರ ಮಧ್ಯೆ ನಡೆದ ಕಲಹದ ವೇಳೆ ಈ ಮಸೀದಿ ಹಿಂಸಾತ್ಮಕ ಕದನಕ್ಕೂ ಸಾಕ್ಷಿಯಾಗಿತ್ತು.

ಇದನ್ನೂ ಓದಿ: Space Sector: ಐದು ಪಟ್ಟು ಬೆಳವಣಿಗೆ ಹೊಂದುವ ದೂರಗಾಮಿ ಯೋಜನೆ ಹಾಕಿಕೊಂಡಿದೆ ಭಾರತೀಯ ಬಾಹ್ಯಾಕಾಶ ವಲಯ

1967ನೇ ಯುದ್ಧದ ಬಳಿಕ ಇಸ್ರೇಲ್ ಜೆರುಸಲೇಮ್ ನಗರವನ್ನು ವಶಪಡಿಸಿಕೊಂಡ ಬಳಿಕ ಇಸ್ರೇಲಿ ಸರ್ಕಾರ ಮಸೀದಿ ಹಾಗೂ ಈ ಪ್ರದೇಶದ ಮೇಲೆ ಅತ್ಯಂತ ಶಿಸ್ತುಬದ್ಧ ನಿಯಂತ್ರಣ ಹೇರಿತು. ಈ ನಿಯಂತ್ರಣದ ಭಾಗವಾಗಿ, ಇಸ್ರೇಲಿ ಅಧಿಕಾರಿಗಳು ಮಸೀದಿಯ ಪ್ರವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಮಸೀದಿಯೊಳಗೆ ಏಕಕಾಲದಲ್ಲಿ ಪ್ರವೇಶಿಸುವ ಮುಸಲ್ಮಾನ ಆರಾಧಕರ ಸಂಖ್ಯೆಯನ್ನು ನಿಯಂತ್ರಿಸಿದರು.

2017ರಲ್ಲಿ, ಇಸ್ರೇಲಿ ಸರ್ಕಾರ ಮಸೀದಿಯ ಪ್ರವೇಶ ದ್ವಾರದ ಬಳಿ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಿತು. ಇದನ್ನು ಪ್ಯಾಲೆಸ್ತೀನಿಯನ್ನರು ಉಗ್ರವಾಗಿ ಪ್ರತಿಭಟಿಸಿ, ಇಸ್ರೇಲ್ ಇಡೀ ಪ್ರದೇಶದ ಮೇಲೆ ತನ್ನ ನಿಯಂತ್ರಣ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಈ ಎಲ್ಲ ಸವಾಲುಗಳ ಹೊರತಾಗಿಯೂ, ಅಲ್ ಅಕ್ಸಾ ಮಸೀದಿ ಇಂದಿಗೂ ಅತ್ಯಂತ ದೀರ್ಘವಾದ, ಸಂಕೀರ್ಣ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಜೆರುಸಲೇಮ್ ನಗರದ ಸುತ್ತ ನಡೆಯುತ್ತಿರುವ ರಾಜಕೀಯ ಸಮಸ್ಯೆಗಳಿಗೆ ಬೆಳಕು ಚೆಲ್ಲುತ್ತಿದೆ.

ಜೆರುಸಲೇಮ್ ನಗರದ ಸ್ಥಾನ: ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣ ವಿಚಾರ

ಐತಿಹಾಸಿಕ ಹಾಗೂ ರಾಜಕೀಯ ಕಾರಣಗಳಿಂದ ಜೆರುಸಲೇಮ್ ನಗರದ ಸ್ಥಾನ ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಎರಡೂ ಈ ನಗರವನ್ನು ತನ್ನ ರಾಜಧಾನಿ ಎಂದು ಕರೆಯುತ್ತವೆ. ಜೆರುಸಲೇಮ್ ನಗರದ ಮಾಲೀಕತ್ವದ ಕುರಿತು ಯಾವುದೇ ಅಂತಾರಾಷ್ಟ್ರೀಯ ಒಮ್ಮತಕ್ಕೆ ಬರಲಾಗಿಲ್ಲದ ಕಾರಣ, ಅದು ಇಂದಿಗೂ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ಗಳ ನಡುವಿನ ವಿವಾದಕ್ಕೆ ಸಾಕ್ಷಿಯಾಗಿದೆ. 1980ರಲ್ಲಿ ಇಸ್ರೇಲ್ ಜೆರುಸಲೇಮ್ ಅನ್ನು ತನ್ನ ಶಾಶ್ವತ ಮತ್ತು ಅವಿಭಜಿತ ರಾಜಧಾನಿ ಎಂದು ಘೋಷಿಸಿತು. ವಿಶ್ವಸಂಸ್ಥೆ ಓಲ್ಡ್ ಸಿಟಿ ಹಾಗೂ ಧಾರ್ಮಿಕ ಪ್ರದೇಶಗಳನ್ನು ಸೇರಿದಂತೆ ಪೂರ್ವ ಜೆರುಸಲೇಮ್ ಅನ್ನು ಆಕ್ರಮಿತ ಪ್ಯಾಲೆಸ್ತೀನಿನ ಪ್ರದೇಶ ಎಂದು ಗುರುತಿಸುತ್ತದೆ. ಈ ವಿವಾದ ಇಂದಿಗೂ ಮುಂದುವರೆದಿದ್ದು, ಇನ್ನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಗಳು ಎರಡು ಪಕ್ಷಗಳಿಗೂ ಸಮಾಧಾನವಾಗುವ ರೀತಿಯಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿವೆ.

Girish Linganna

ಗಿರೀಶ್ ಲಿಂಗಣ್ಣ

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

Published On - 6:11 pm, Mon, 10 April 23