ಇಂಗ್ಲಿಷ್​ನಲ್ಲಿ ‘ಭಾರತ’ ಹುಟ್ಟಿದರೆ ಯಾರಿಗೆಲ್ಲ ಸಂಕಷ್ಟ?

ಇಂಗ್ಲಿಷ್​ನ ಇಂಡಿಯಾ ಬದಲು ಭಾರತ ಎಂಬುದನ್ನು ಅಧಿಕೃತವಾಗಿ ಸ್ವೀಕರಿಸುವ ಬೆಳವಣಿಗೆಯಾದರೆ, ಏನಾಗಬಹುದು? ಭಾರತ ಶಬ್ದ ಬಂದಿದ್ದು ಭರತನಿಂದ. ಭರತ ಬಂದಿದ್ದು ಅದೇ ಸನಾತನ ಫಿಲಾಸಫಿಯಿಂದ. ಅದನ್ನೇ ನಿರ್ನಾಮ ಮಾಡಲು ಹೊರಟಿರುವ ಸ್ವಾಲಿನ್​ ಜ್ಯೂನಿಯರ್ ಮತ್ತು I.N.D.I.A ನಾಯಕರುಗಳಿಗೆ ಮೋದಿ ಒಂದು ಸವಾಲು ನೀಡಿದಂತೆ ಆಗುತ್ತದೆ. ಅದಕ್ಕಿಂತ ಇನ್ನೊಂದು ಮಜಕೂರು ಇಲ್ಲಿದೆ. ಏನದು? ಮುಂದೆ ಓದಿ...

ಇಂಗ್ಲಿಷ್​ನಲ್ಲಿ ‘ಭಾರತ' ಹುಟ್ಟಿದರೆ ಯಾರಿಗೆಲ್ಲ ಸಂಕಷ್ಟ?
ಸಂಸತ್ ಭವನ (ಸಾಂದರ್ಭಿಕ ಚಿತ್ರ)
Follow us
| Updated By: Digi Tech Desk

Updated on:Nov 03, 2023 | 2:28 PM

ಲೇಖಕರು: ಜಗದೀಶ್​ ಪಿಬಿ

ಜಿ-20 ಗಣ್ಯಾತಿಗಣ್ಯರಿಗೆ ರಾಷ್ಟ್ರಪತಿ ನೀಡಿದ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಇಂಡಿಯಾ (India)’ ಬದಲಾಗಿ ಭಾರತ ಇದ್ದುದನ್ನು ಕಂಡಿದ್ದೇ, ಕಾಂಗ್ರೆಸ್​ ಮತ್ತು ಇಂಡಿಯಾ (I.N.D.I.A) ರಾಜಕೀಯ ಕೂಟದ ನಾಯಕರು ಹಾವನ್ನು ತುಳಿದಾಗ ಆಡುವಂತೆ ವರ್ತಿಸುತ್ತಿದ್ದಾರೆ. ಇನ್ನು ಮುಂದೆ ಪ್ರಾಯಶಃ ಇಂಗ್ಲಿಷಿನಲ್ಲಿ India ಅಂದರೆ ಇಂಡಿಯಾ ಅಂತ ಇದ್ದಿದ್ದು ಭಾರತ ಆಗಬಹುದು. ಈ ವಿಚಾರ ಅಂಗೀಕರಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗುತ್ತಿದೆ ಎಂಬ ಕಾಳ್ಗಿಚ್ಚು ಬೆಳಿಗ್ಗೆಯಿಂದ ಹಬ್ಬಿದೆ. ವಿರೋಧ ಪಕ್ಷದ ನಾಯಕರು ಅಂದುಕೊಂಡಿದ್ದೇ ಇರಬಹುದು. ಇಂದು ಬೆಳಿಗ್ಗೆಯಿಂದ ಮಮತಾ ಬ್ಯಾನರ್ಜಿ, ಜೈರಾಮ್​ ರಮೇಶ್​, ಅರವಿಂದ್​ ಕೇಜ್ರೀವಾಲ್​, ಸಿದ್ದರಾಮಯ್ಯ ಹೀಗೆ ಎಲ್ಲರೂ ಈ ‘ಭಾರತದ’ ಬೆಳವಣಿಗೆಗೆ ನೇತ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ನಿರೀಕ್ಷಿಸಿದಂತೆಯೇ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಅಂದುಕೊಂಡಿದ್ದಕ್ಕಿಂತ ಹೊಸದೆಲ್ಲ ನಡೆದಿವೆ. ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಪಡಿಸುವುದರಿಂದ ಹಿಡಿದು ಅನೇಕ ರಾಜಕೀಯ, ಸಾಂಸ್ಕೃತಿಕ ವಿಚಾರಗಳು ನಡೆಯುತ್ತಲಿವೆ.

ಈಗ್ಗೆ ಒಂದು ವಾರದಿಂದ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ಕುರಿತು ವಿರೋಧ ಪಕ್ಷಗಳು ತೀವ್ರವಾಗಿ ಪ್ರತಿಕ್ರಿಯೆ ಮೇಲೆ ಪ್ರತಿಕ್ರಿಯೆ ನೀಡುತ್ತಲಿದ್ದಾರೆ. ಅದು ಮುಗಿಯುವ ಮುನ್ನವೇ ಇಂಡಿಯಾಕ್ಕೆ ‘ಭಾರತ’ ಎಂದು ಹೆಸರಿಡುವ ಬೆಳವಣಿಗೆ ಆಗುತ್ತದೆ ಎಂಬುದು ಅವರಿಗೆ ಬರಸಿಡಿಲು ಬಡಿದಂತಾಗಿದೆ. ಇಂಡಿಯಾ (I.N.D.I.A) ಗುಂಪು ಹುಟ್ಟಿದಾಗಿನಿಂದ ಪ್ರಧಾನಿ ಮೋದಿ ಅವರಿಗೆ ತುಂಬಾ ಕೆಲಸ ಕೊಡುತ್ತಿದ್ದಾರೆ. ಇಸ್ರೋ ಹಾರಿಸಿದ ವಿಜ್ಞಾನಿಗಳಿಗೆ ಅಭಿನಂದಿಸುವುದರಿಂದ ಹಿಡಿದು ಎಲ್ಲದಕ್ಕೂ ಅವರನ್ನು ಪ್ರತಿಕ್ರಿಯೆ ನೀಡಲು ಹಚ್ಚಿದ್ದು ಕಾಣುತ್ತಿದೆ. ಇದು ಬಹಳ ಮುಖ್ಯ. ಒಂದು ರಾಜಕೀಯ ಒಕ್ಕೂಟವಾಗಿ ಅವರಿಂದ ಒಂದು ರಾಜಕೀಯ ಸಂಕಥನ (Political Narrative) ನೀಡಲು ವಿಫಲವಾಗಿ ಅವರು ಬರೀ ಪ್ರತಿಕ್ರಿಯೆ ನೀಡುವುದಕ್ಕೆ ನಿಂತ ಒಂದು ಗುಂಪಾಗಿ ಕಾಣುತ್ತಿದೆ. ಹಾಗೆ ನಿಂತರೆ ಅವರ ಉದ್ದೇಶ ಸಫಲವಾಗುವುದು ಕಷ್ಟ ಆಗಬಹುದು. ಇನ್ನೊಂದು ವಿಚಾರ ಹೇಳಬೇಕು. ಎನ್​ಸಿಪಿ ಬೆಳವಣಿಗೆ, ಇಸ್ರೋ ಚಂದ್ರಯಾನ ಅಥವಾ ಮೊನ್ನೆ ಮೊನ್ನೆ ತಮಿಳುನಾಡಿನ ಉದಯನಿಧಿ ಸ್ಟಾಲಿನ್ ಹೇಳಿಕೆ – ಹೀಗೆ ಒಂದಕ್ಕೆ ಅತಿಯಾಗಿ, ಇನ್ನು ಕೆಲವಕ್ಕೆ ಒಂದು ಹೆಜ್ಜೆ ಹಿಂದಕ್ಕೆ ಹೋಗಿ ಅವರು ವಿಭಿನ್ನ ಪ್ರತಿಕ್ರಿಯೆ ನೀಡುತ್ತಿರುವುದನ್ನು ನೋಡಿದರೆ ಅವರಲ್ಲಿ ದೂರದೃಷ್ಟಿ ಇಲ್ಲ ಎಂಬ ಸಂಶಯ ಮೂಡುತ್ತಿದೆ. ಒಗ್ಗಟ್ಟು ಇಲ್ಲವೇನೋ ಎಂಬ ಭಾವನೆ ಜನರಲ್ಲಿ ಮೂಡಿದರೆ ಆಶ್ಚರ್ಯ ಇಲ್ಲ.

ವಿರೋಧ ಪಕ್ಷಗಳು ಅಂದುಕೊಂಡಂತೆ ಇಂಗ್ಲಿಷ್​ನ ಇಂಡಿಯಾ ಬದಲು ಭಾರತ ಎಂಬುದನ್ನು ಅಧಿಕೃತವಾಗಿ ಸ್ವೀಕರಿಸುವ ಬೆಳವಣಿಗೆಯಾದರೆ, ಏನಾದಂತೆ ಆಯ್ತು ಗೊತ್ತಾ? ಭಾರತ ಶಬ್ದ ಬಂದಿದ್ದು ಭರತನಿಂದ. ಭರತ ಬಂದಿದ್ದು ಅದೇ ಸನಾತನ ಫಿಲಾಸಫಿಯಿಂದ. ಈ ಸನಾತನ ಸಂಸ್ಕೃತಿಯನ್ನೆ ನಿರ್ನಾಮ ಮಾಡಲು ಹೊರಟಿರುವ ಸ್ವಾಲಿನ್​ ಜ್ಯೂನಿಯರ್ ಮತ್ತು I.N.D.I.A ನಾಯಕರುಗಳಿಗೆ ಮೋದಿ ಒಂದು ಸವಾಲು ನೀಡಿದಂತೆ ಆಗುತ್ತದೆ. ಭರತನ ‘ಭಾರತ’ದ ಬೆಳವಣಿಗೆ. ಅದರ ಹಿಂದಿನ ಪರಿಕಲ್ಪನೆಯನ್ನು I.N.D.I.A. ನಾಯಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ.

ಇದನ್ನೂ ಓದಿ: ಟರ್ಕಿಯಿಂದ ಶ್ರೀಲಂಕಾವರೆಗೆ; ಇಲ್ಲಿಯವರೆಗೆ ಯಾವೆಲ್ಲ ದೇಶಗಳು ಹೆಸರು ಬದಲಿಸಿವೆ?

ಅದಕ್ಕಿಂತ ಇನ್ನೊಂದು ಮಜಕೂರು ಇಲ್ಲಿದೆ. ಈಗ ಯಾರೆಲ್ಲ ‘ಭಾರತ’ ಎಂದು ಹೆಸರಿಸುವುದಕ್ಕೆ ವಿರೋಧಿಸಿ ತಮ್ಮದೇ ಆದ ತರ್ಕ ನೀಡುತ್ತಿದ್ದಾರೋ ಅವರು ಒಮ್ಮೆ ಕನ್ನಡಿ ಮುಂದೆ ನಿಂತು ನೋಡಬೇಕು. 1995 ರಲ್ಲಿ ಬಾಂಬೆ ಇದ್ದಿದ್ದನ್ನು ಮುಂಬಯಿ ಮಾಡಿದ್ದು ಶಿವಸೇನೆ. ಮರುವರ್ಷ 1996 ರಲ್ಲಿ, ದಿವಂಗತ ಕರುಣಾನಿಧಿ ನೇತೃತ್ವದ ಸರಕಾರ ಮದ್ರಾಸನ್ನು ತೆಗೆದು ಚೆನ್ನೈ ಅಂತ ಹೆಸರಿಸಿತು. 2001 ರಲ್ಲಿ ಅಂದಿನ ಬುದ್ಧದೇವ್​ ಭಟ್ಟಾಚಾರ್ಯ ನೇತೃತ್ವದ ಸಿಪಿಎಮ್​ ಸರಕಾರ ಕಲ್ಕತ್ತಾವನ್ನು ಕೋಲ್ಕೊತಾ ಅಂತ ಮಾಡಿತು. ಆಗ ಆ ನಾಯಕರಿಗೆ ಮತ್ತು ಅವರಿದ್ದ ಪಕ್ಷಗಳಿಗೆ ಕಾಡಿದ್ದು ಏನು? ಪ್ರಾದೇಶಿಕ ಅಸ್ಮಿತೆ ಅಲ್ಲವೇ? ಹಾಗಾದರೆ ಅದನ್ನೇ ಇಡೀ ದೇಶಕ್ಕೆ ಅನ್ವಯಿಸಿ, ಭಾರತೀಯ ಅಸ್ಮಿತೆಗೆ ಭಾರತ ಎಂದು ಹೆಸರಿಸೋಣ ಎಂದು ಪ್ರಧಾನಿ ಮೋದಿ ನಿರ್ಧಾರ ಮಾಡಿದರೆ ಈ ನಿರ್ಣಯ ಹೇಗೆ ತಪ್ಪಾಗುತ್ತದೆ? ಇವರು ತಮ್ಮ ರಾಜಕೀಯ ಗುಂಪಿನ ಹೆಸರನ್ನು ಅಂದರೆ I.N.D.I.A ಮೈತ್ರಿಕೂಟವನ್ನು ಜನ ನೆನಪಿಟ್ಟುಕೊಳ್ಳದೇ ಹೋದರೆ ತಮಗೆ ಕಷ್ಟ ಆಗಬಹುದು ಎಂದು ಸ್ವಾರ್ಥದ ವಿಚಾರದಲ್ಲಿ ಮುಳುಗಿರಬೇಕೇ ಅಥವಾ ಭಾರತವನ್ನು ಅಪ್ಪಿಕೊಳ್ಳಬೇಕೆ ಎಂಬುದನ್ನು I.N.D.I.A ನಾಯಕರು ನಿರ್ಧರಿಸಬೇಕಾಗಿ ಬಂದಿದೆ.

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Tue, 5 September 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ