Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ಗೆ ಕೊರೋನಾ ಭೀತಿ: ಇಬ್ಬರಿಗೆ ಸೋಂಕು ದೃಢ

Updated on: Jul 24, 2024 | 1:02 PM

Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ರಣಯದೂರು ಪ್ಯಾರಿಸ್​ ಸಜ್ಜಾಗಿ ನಿಂತಿದೆ. ಇಂದಿನಿಂದ ಶುರುವಾಗಲಿರುವ ಒಲಿಂಪಿಯಾಡ್​ನಲ್ಲಿ ಈ ಬಾರಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯುತ್ತಿದ್ದು, ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ. ಆದರೀಗ ಈ ಕ್ರೀಡಾಕೂಟಕ್ಕೆ ಕೊರೋನಾ ಭೀತಿ ಎದುರಾಗಿದೆ.

1 / 5
ಪ್ಯಾರಿಸ್ ಒಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಮಹಾ ಕ್ರೀಡಾಕೂಟಕ್ಕೆ ಕೊರೋನಾ ಭೀತಿ ಕೂಡ ಎದುರಾಗಿದೆ. ಏಕೆಂದರೆ ಆಸ್ಟ್ರೇಲಿಯಾ ತಂಡದ ಇಬ್ಬರು ಪೋಲೋ ಆಟಗಾರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರನ್ನು ಕ್ವಾರಂಟೈನ್​ನಲ್ಲಿರಿಸಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಮಹಾ ಕ್ರೀಡಾಕೂಟಕ್ಕೆ ಕೊರೋನಾ ಭೀತಿ ಕೂಡ ಎದುರಾಗಿದೆ. ಏಕೆಂದರೆ ಆಸ್ಟ್ರೇಲಿಯಾ ತಂಡದ ಇಬ್ಬರು ಪೋಲೋ ಆಟಗಾರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರನ್ನು ಕ್ವಾರಂಟೈನ್​ನಲ್ಲಿರಿಸಲಾಗಿದೆ.

2 / 5

2020 ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಅನ್ನು ಕೊರೋನಾ ಕಾರಣದಿಂದಾಗಿ 2021 ರಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ ಇಡೀ ಕ್ರೀಡಾಕೂಟವನ್ನು ಮುಂಜಾಗೃತ ಕ್ರಮಗಳೊಂದಿಗೆ ನಡೆಸಲಾಗಿತ್ತು. ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಮತ್ತೆ ಕೊರೋನಾ ಭೀತಿ ಎದುರುಆಗಿದೆ.

3 / 5

ಆಸ್ಟ್ರೇಲಿಯಾ ಆಟಗಾರರಲ್ಲಿ ಕೋರೋನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ಎಲ್ಲರಿಗೂ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ಆಸ್ಟ್ರೇಲಿಯಾದ ಒಲಿಂಪಿಕ್ ತಂಡದ ಮೇಯರ್ಸ್ ಹೇಳಿದ್ದಾರೆ. ಅಲ್ಲದೆ ಅವರ ಜೊತೆಗಿರುವ ಇತರ ಕ್ರೀಡಾಪಟುಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

4 / 5

ಸದ್ಯ ಮಾಹಿತಿ ಪ್ರಕಾರ, ಕೇವಲ ಇಬ್ಬರಲ್ಲಿ ಮಾತ್ರ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಅವರೊಂದಿಗಿದ್ದ ಇತರೆ ಆಸ್ಟ್ರೇಲಿಯನ್ ಕ್ರೀಡಾಪಟುಗಳ ರಿಪೋರ್ಟ್​ ನೆಗೆಟಿವ್ ಬಂದಿದೆ. ಹೀಗಾಗಿ ಉಳಿದ ಆಸ್ಟ್ರೇಲಿಯಾ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

5 / 5

ಇನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯವಹಿಸುತ್ತಿರುವ ಫ್ರಾನ್ಸ್​ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂದು ಫ್ರೆಂಚ್ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದಾಗ್ಯೂ ಯಾವುದೇ ದೊಡ್ಡ ಅಪಾಯವಿಲ್ಲ ಎಂದು ಆರೋಗ್ಯ ಸಚಿವ ಫ್ರೆಡೆರಿಕ್ ವ್ಯಾಲೆಟೌಕ್ಸ್ ತಿಳಿಸಿದ್ದಾರೆ. ಅಲ್ಲದೆ ಪ್ಯಾರಿಸ್​ ಒಲಿಂಪಿಕ್ಸ್ ನಿಗದಿಯಂತೆ ಜರುಗಲಿದೆ ಎಂದು ಭರವಸೆ ನೀಡಿದ್ದಾರೆ.

Loading...
Unable to load recommendations.
Follow Us