Mahindra Roxor: ಮಹೀಂದ್ರಾ ರೋಕ್ಸರ್: ಜಬರ್ದಸ್ತ್ ಎಸ್​ಯುವಿ ಬಿಡುಗಡೆ

| Updated By: ಝಾಹಿರ್ ಯೂಸುಫ್

Updated on: Nov 17, 2021 | 8:06 PM

Mahindra Roxor: ಇನ್ನು ಮುಂಭಾಗದಲ್ಲಿ 11-ಇಂಚಿನ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 11-ಇಂಚಿನ ಡ್ರಮ್ ಬ್ರೇಕ್​ಗಳನ್ನು ನೀಡಲಾಗಿದೆ. ಮಹೀಂದ್ರಾ ರೋಕ್ಸರ್ SUV ಕೆಂಪು ಅಥವಾ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.

1 / 7
ಭಾರತದ ಪ್ರಸಿದ್ಧ ವಾಹನ ತಯಾರಕ ಕಂಪೆನಿ ಮಹೀಂದ್ರಾ & ಮಹೀಂದ್ರಾ ಇತ್ತೀಚೆಗೆ ತನ್ನ ಜನಪ್ರಿಯ SUV ರೋಕ್ಸರ್ (ROXOR) ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹಳೆಯ ಜೀಪ್​ ಮಾದರಿಯಲ್ಲಿರುವ ಈ ವಾಹನ ಇದೀಗ ಎಸ್​ಯುವಿ ಪ್ರಿಯರನ್ನ ತನ್ನತ್ತ ಸೆಳೆಯುತ್ತಿರುವುದು ವಿಶೇಷ.

2 / 7
ಆದರೆ ಮಹೀಂದ್ರಾ ಬಿಡುಗಡೆ ಮಾಡಿರುವ ಹೊಸ ರೋಕ್ಸರ್ ಭಾರತದಲ್ಲಿ ಖರೀದಿಗೆ ಲಭ್ಯವಿಲ್ಲ. ಬದಲಾಗಿ ಈ ವಾಹನ ಬಿಡುಗಡೆಯಾಗಿರುವುದು ಉತ್ತಮ ಅಮೆರಿಕದಲ್ಲಿ ಎಂಬುದು ವಿಶೇಷ. ಅಲ್ಲಿನ ಮಾರುಕಟ್ಟೆಯಲ್ಲಿ ನೂತನ ವಾಹನ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಭಾರತದ ರಸ್ತೆಯಲ್ಲೂ ಓಡಲಿದೆ.

3 / 7
ಮಹೀಂದ್ರಾ ರೋಕ್ಸರ್ ಎಂಜಿನ್ ಬಗ್ಗೆ ಹೇಳುವುದಾದರೆ, ಮಹೀಂದ್ರಾ ಕಂಪೆನಿಯು ಇದರಲ್ಲಿ 2.5-ಲೀಟರ್ ಟರ್ಬೊ ಎಂಜಿನ್‌ ಅಳವಡಿಸಿದೆ. ಇದು 144Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಎಂಜಿನ್ 62 ಹೋರ್ಸ್​ ಪವರ್​ ಸಾಮರ್ಥ್ಯ ಹೊಂದಿದೆ. ಇದರ ಇಂಧನ ಟ್ಯಾಂಕ್ ಸಾಮರ್ಥ್ಯ 45.43 ಲೀಟರ್.

4 / 7
 ಮಹೀಂದ್ರಾ ರೋಕ್ಸರ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಅಂದಹಾಗೆ ಎಸ್‌ಯುವಿಯ ಗರಿಷ್ಠ ವೇಗ ಗಂಟೆಗೆ 88 ಕಿಮೀ. ಇದಾಗ್ಯೂ ಈ ವಾಹನದಲ್ಲಿ ಹೈಡ್ರಾಲಿಕ್ ಪವರ್ ಸ್ಟೀರಿಂಗ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿರುವುದು ವಿಶೇಷ.

5 / 7
ಇನ್ನು ಮುಂಭಾಗದಲ್ಲಿ 11-ಇಂಚಿನ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 11-ಇಂಚಿನ ಡ್ರಮ್ ಬ್ರೇಕ್​ಗಳನ್ನು ನೀಡಲಾಗಿದೆ. ಮಹೀಂದ್ರಾ ರೋಕ್ಸರ್ SUV ಕೆಂಪು ಅಥವಾ ಕಪ್ಪು ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ.

6 / 7
ಅಂದಹಾಗೆ ಮಹೀಂದ್ರಾ ರೋಕ್ಸರ್ (Mahindra ROXOR) ನ ಆರಂಭಿಕ ಬೆಲೆ 18,899 ಯುಎಸ್ ಡಾಲರ್. ಅಂದರೆ ಭಾರತೀಯ ಮೌಲ್ಯ ಸುಮಾರು 14.04 ಲಕ್ಷ ರೂ. ಇದರ ಉನ್ನತ ಮಾದರಿಯ ಬೆಲೆ 26,299 ಡಾಲರ್. ಇದರ ಭಾರತೀಯ ಬೆಲೆ ಸುಮಾರು 19.54 ಲಕ್ಷ ರೂ. ಆಗಿರಲಿದೆ.

7 / 7
ಮಹೀಂದ್ರಾ ರೋಕ್ಸರ್ (Mahindra ROXOR)

ಮಹೀಂದ್ರಾ ರೋಕ್ಸರ್ (Mahindra ROXOR)