ರಾಯಚೂರು: ಸಿಂಧನೂರು ಬಳಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಲಾರಿ ಹಾಗೂ ಟಾಟಾ ಏಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದುವೆ ಸಮಾರಂಭ ನಿಮಿತ್ತವಾಗಿ ಡೆಕೊರೇಶನ್ ಹಾಗೂ ಶಾಮಿಯಾನ ಹಾಕಲು ಹೋಗುತ್ತಿದ್ದವರು ದುರಂತ ಅಂತ್ಯಕಂಡಿದ್ದಾರೆ.
Updated on: Dec 07, 2023 | 12:34 PM
Share

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿಯಾಗಿ ಟಾಟಾ ಏಸ್ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಟಾಟಾ ಏಸ್ ಸಿಂಧನೂರಿನಿಂದ ಮಸ್ಕಿ ತಾಲ್ಲೂಕಿನ ಮದ್ಲಾಪುರ ಗ್ರಾಮಕ್ಕೆ ಹೊರಟಿತ್ತು. ಆದ್ರೆ, ಮಾರ್ಗ ಮಧ್ಯೆ ಪಗಡದಿನ್ನಿ ಕ್ಯಾಂಪ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಇಸ್ಮಾಯಿಲ್(25), ಚನ್ನಬಸವ(26), ಅಂಬರೀಶ್(20), ರವಿ(21) ಮೃತ ದುರ್ವೈವಿಗಳು

ಮೃತ ನಾಲ್ವರು ಮದುವೆ ಸಮಾರಂಭ ನಿಮಿತ್ತವಾಗಿ ಡೆಕೊರೇಶನ್ ಹಾಗೂ ಶಾಮಿಯಾನ ಹಾಕಲು ಟಾಟಾ ಏಸ್ನಲ್ಲಿ ಮದ್ಲಾಪುರ ಗ್ರಾಮಕ್ಕೆ ಹೋಗುತ್ತಿದ್ದರು.

ಇನ್ನು ಘಟನೆಯಲ್ಲಿ ಸಮೀರ್ ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಮೃತದೇಹಗಳನ್ನ ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಬಗ್ಗೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು?
ಹರಿಪ್ರಸಾದ್ ಅಮಾನತಿಗೆ ಬಿಜೆಪಿ ಪಟ್ಟು: ರಣಾಂಗಣವಾದ ವಿಧಾನ ಪರಿಷತ್
ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು!
ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿಳಿದ 286 ಕೆಜಿ ತೂಕದ ಸ್ವರ್ಣ ಧನಸ್ಸು
ನರೇಗಾ ಹೆಸರು ವಿವಾದ, ಸರ್ಕಾರ-ಪ್ರತಿಪಕ್ಷಗಳ ನಡುವೆ ಜಟಾಪಟಿ
ಸಂಧ್ಯಾ ಜೊತೆ ಸರಳವಾಗಿ ವಿವಾಹ ಆದ ಉಗ್ರಂ ಮಂಜು; ಇಲ್ಲಿದೆ ವಿಡಿಯೋ
ಮೊದಲೇ ಗೆಲುವಿನ ಸೂಚನೆ ಕೊಟ್ಟಿದ್ದ ಸುದೀಪ್; ಗಿಲ್ಲಿ ಹೇಳಿದ್ದಿಷ್ಟು
ರೈಲ್ವೆ ಹಳಿಯಲ್ಲಿ ಅಡ್ಡವಾಗಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ರೈಲು
ಯಾರೇ ಗೆದ್ರು ಖುಷೀನೆ; ಅಶ್ವಿನಿ ಹೇಳಿದ್ದ ಕೊನೆಯ ಮಾತು ನನೆಪಿಸಿಕೊಂಡ ಗಿಲ್ಲಿ