ಹರಿಹರದ ಕ್ಯಾನಲ್ ಕ್ಲಬ್ ವತಿಯಿಂದ ‘ಡಾಗ್​ ಶೋ’ ಹಮ್ಮಿಕೊಂಡಿದ್ದು, ದೇಶ ವಿದೇಶ ತಳಿಯ ಶ್ವಾನಗಳು ನೆರೆದಿದ್ದವರ ಕಣ್ಮನ ಸೆಳೆದವು; ಅದರ ಝಲಕ್​ ಇಲ್ಲಿದೆ ನೋಡಿ

Edited By: ಕಿರಣ್ ಹನುಮಂತ್​ ಮಾದಾರ್

Updated on: Feb 27, 2023 | 3:23 PM

ಜಿಲ್ಲೆಯ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಕ್ಯಾನಲ್ ಕ್ಲಬ್​ನ ಶ್ವಾನ ಪ್ರೇಮಿಗಳು, ಈ ಡಾಗ್​ ಶೋ ಹಮ್ಮಿಕೊಂಡಿದ್ದು, ಯುವಕ ಯುವತಿಯರು ಸೇರಿದಂತೆ ನೂರಾರು ಜನ ತಮ್ಮ ನೆಚ್ಚಿನ ಶ್ವಾನಗಳನ್ನ ತೆಗೆದುಕೊಂಡು ಪ್ರದರ್ಶನಕ್ಕೆ ಬಂದಿದ್ದರು.

1 / 8
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಕ್ಯಾನಲ್ ಕ್ಲಬ್​ನ ಶ್ವಾನ ಪ್ರೇಮಿಗಳು ಈ ಡಾಗ್​ ಶೋ ಹಮ್ಮಿಕೊಂಡಿದ್ದರು. ಯುವಕ ಯುವತಿಯರು ಹಿರಿಯರು ಸೇರಿದಂತೆ ನೂರಾರು ಜನ  ತಮ್ಮ ಅಚ್ಚು ಮೆಚ್ಚಿನ ಶ್ವಾನಗಳನ್ನ ತೆಗೆದುಕೊಂಡು ಪ್ರದರ್ಶನಕ್ಕೆ ಬಂದಿದ್ದರು.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಕ್ಯಾನಲ್ ಕ್ಲಬ್​ನ ಶ್ವಾನ ಪ್ರೇಮಿಗಳು ಈ ಡಾಗ್​ ಶೋ ಹಮ್ಮಿಕೊಂಡಿದ್ದರು. ಯುವಕ ಯುವತಿಯರು ಹಿರಿಯರು ಸೇರಿದಂತೆ ನೂರಾರು ಜನ ತಮ್ಮ ಅಚ್ಚು ಮೆಚ್ಚಿನ ಶ್ವಾನಗಳನ್ನ ತೆಗೆದುಕೊಂಡು ಪ್ರದರ್ಶನಕ್ಕೆ ಬಂದಿದ್ದರು.

2 / 8

ಈ ಪ್ರಸಿದ್ಧ ಶ್ವಾನ ಪ್ರದರ್ಶನ, ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿರುವ ಶ್ವಾನ ಪ್ರದರ್ಶನ ಇದಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ವಿವಿಧ ಬಗೆಯ ಶ್ವಾನಗಳನ್ನ ತೆಗೆದುಕೊಂಡು ಜನ ಬಂದಿದ್ದರು. ಇಂತಹ ಅಪರೂಪ ತಳಿಯ ನಾಯಿಗಳನ್ನ ನೋಡುವುದೇ ಒಂದು ಸಂಭ್ರಮ.

3 / 8

ಒಂದು ಪುಟ್ಟ ವಿಚಿತ್ರ ಮುಖದ ಪಗ್ ನಾಯಿಂದ ಹಿಡಿದು ರಾಜ್ಯದ ಪ್ರಸಿದ್ಧ ಬೇಟೆಗಾರಿಕೆಗೆ ಹೆಸರಾದ ಮುದೋಳ ನಾಯಿ ಹೀಗೆ 20ಕ್ಕೂ ಹೆಚ್ಚು ದೇಶಗಳ 30ಕ್ಕೂ ಹೆಚ್ಚು ವಿಭಿನ್ನ ತಳಿಯ 300 ನಾಯಿಗಳು ಇಲ್ಲಿ ಪಾಲ್ಗೊಂಡಿದ್ದವು.

4 / 8

ಸ್ಪರ್ಧೆಯ ಇನ್ನೊಂದು ವಿಶೇಷವೆಂದರೆ ನಾಯಿ ಕೇವಲ ನೋಡಲು ಚೆನ್ನಾಗಿದ್ದರೆ ಸಾಲದು, ಅದರ ದೇಹದ ಸ್ಥಿತಿ, ನಡೆಯುವ ಸ್ಟೈಲ್, ನೋಡುವ ರೀತಿ, ಅದರ ಜೊತೆಗಾರ ಹಾಕುವ ಪ್ರತಿಯೊಂದು ಹೆಜ್ಜೆಯು ಸಹ ಸ್ಪರ್ಧೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

5 / 8

ಹೆಚ್ಚಾಗಿ ಯುವಕರು ಇಂತಹ ಶ್ವಾನಗಳನ್ನ ಸಾಕಿ, ಸ್ಪರ್ಧೆಗೆ ತರುವುದನ್ನ ನೋಡಿದ್ದೇವೆ. ಆದರೆ ಈಗ ಯುವತಿಯರಲ್ಲಿಯೂ ಶ್ವಾನ ಪ್ರೀತಿ ಜಾಸ್ತಿಯಾಗಿದೆ. ಹೀಗಾಗಿ ಇಂದು ಸ್ಪರ್ಧೆಗೆ ತಮ್ಮ ನಾಯಿಗಳನ್ನ ತಂದ ಯುವತಿಯರು ಪ್ರಶಸ್ತಿಗಳನ್ನ ಬಾಚಿಕೊಂಡಿದ್ದು ಮಾತ್ರ ವಿಶೇಷವಾಗಿತ್ತು.

6 / 8

ರಾಜಸ್ತಾನ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇಂತಹ ಡಾಗ್ ಶೋ ನಡೆಯುತ್ತಿವೆ. ಆದರೆ ದಾವಣಗೆರೆ ಭಾಗದಲ್ಲಿ ಇಂತಹ ಶೋ ನಡೆಯಲು ಒಂದು ವಿಶೇಷ ಕಾರಣವಿದೆ. ಅಂದರೆ ಜಿಲ್ಲೆಯ ಹರಿಹರದಲ್ಲಿ ಪ್ರಸಿದ್ಧ ಕಿರ್ಲೋಸ್ಕರ ಕಂಪನಿ ಇತ್ತು. ಅದರ ಉದ್ಯೋಗಕ್ಕೆ ದೇಶ ವಿದೇಶದಿಂದ ಜನ ಬರುತ್ತಿದ್ದ ಜನರಿಂದ ಇಂತಹ ಸ್ಪರ್ಧೆಗಳು ನಡೆಯಲ್ಪಟ್ಟವು.

7 / 8

ಹೀಗಾಗಿ ಶತಮಾನಗಳಿಂದ ವಿಶೇಷ ನಾಯಿ ಸಾಕುವುದು ಇಲ್ಲಿನ ಜನಕ್ಕೆ ರೂಢಿಯಾಗಿದೆ. ಇದಕ್ಕೆ ನಿದರ್ಶನ ಇಲ್ಲಿ ಸೇರಿದ ವಿಭಿನ್ನ ತಳಿಯ ನಾಯಿಗಳೇ ಸಾಕ್ಷಿ. 28 ತಳಿಯ ನಾಯಿಗಳು ಇಲ್ಲಿದ್ದವು. ಲ್ಯಾಬ್ರಿಡಾರ್ , ಜರ್ಮನ್ ಶಫರ್ಡ್, ಡಾಬರ್ ಮನ್, ಮುದೋಳ ಭೇಟೆ ನಾಯಿ, ಸೇಂಟ್ ಬರ್ನಾಡ್ , ಗ್ರೇಡನ್, ಬಾಕ್ಸರ್, ಪಗ್, ಇಂಗ್ಲೀಷ ಮ್ಯಾಸ್ಟಫ್ , ಬ್ರೇಜಿಲ್ ಮ್ಯಾಸ್ಟಾಫ್ , ಐರಿಶ್ ಸೆಟರ್, ನೆಪೋಲಿನ್ ಮ್ಯಾಸ್ಟಾಫ್ , ರೋಡ್ ವಿಲ್ಲರ್, ಸೈಬರ್ ಮ್ಯಾಸ್ಟಾಫ್ , ಫೈಟರ್ ಹೀಗೆ 28 ತಳಿಗಳ ನಾಯಿಗಳು ಸ್ಪರ್ಧಾಳುಗಳ ಮುಂದೆ ತಮ್ಮ ಬುದ್ಧಿ ಮತ್ತೆಯಿಂದ ಪ್ರದರ್ಶನ ನೀಡಿ ನಾನಾ ಪ್ರಶಸ್ತಿ ಗೆದ್ದಕೊಂಡವು.

8 / 8

ಇಂತಹ ಅಪರೂಪದ ನಾಯಿಗಳನ್ನ ಮಾಲೀಕರು ಮನೆಯ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಪಾಲನೆ ಮಾಡಿದ್ದಾರೆ. ಊಟ ಉಪಚಾರ ಅಷ್ಟೆ ಅಲ್ಲ, ಬಾಡಿ ಫಿಟ್​ನೆಸ್ ಬಗ್ಗೆ ಕೂಡಾ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ಇದೊಂದು ನಂಬಿಕೆಗೆ ಹೆಸರಾದ ನಾಯಿಗಳ ಅದ್ಭುತ ಲೋಕವೇ ತೆರೆದುಕೊಂಡಿತ್ತು.

Loading...
Unable to load recommendations.
Follow Us