
ನಟಿ ಕೃತಿ ಶೆಟ್ಟಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಟಾಲಿವುಡ್ನಲ್ಲಂತೂ ಕೃತಿ ತುಂಬಾನೇ ಫೇಮಸ್. ‘ಉಪ್ಪೇನಾ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿಯ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ.

‘ಉಪ್ಪೇನಾ’ ಸಿನಿಮಾ ಬಳಿಕ ತೆರೆಗೆ ಬಂದ ‘ಶ್ಯಾಮ್ ಸಿಂಗ ರಾಯ್’ ಚಿತ್ರ ಹಿಟ್ ಆಯಿತು. ನಾನಿ ಹಾಗೂ ಕೃತಿ ಕಾಂಬಿನೇಷನ್ ಫ್ಯಾನ್ಸ್ಗೆ ಇಷ್ಟವಾಯಿತು. ಈ ಚಿತ್ರದಿಂದ ಕೃತಿಯ ಖ್ಯಾತಿ ಮತ್ತಷ್ಟು ಹೆಚ್ಚಿತು.

ಸದ್ಯ ಕೃತಿ ನಾಲ್ಕು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಬಂಗಾರ್ರಾಜು’ ಸಿನಿಮಾ ಬಳಿಕ ಮತ್ತೊಮ್ಮೆ ಅವರು ನಾಗ ಚೈತನ್ಯ ಜತೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.

ಕೃತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ಕೃತಿ ಅವರು ಸೀರೆಯಲ್ಲಿ ಮಿಂಚಿದ್ದಾರೆ.

ಕೃತಿ ಶೆಟ್ಟಿ ಅವರು ಕ್ಯೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೀರೆಯಲ್ಲಿ ಕೃತಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.
Published On - 6:46 pm, Tue, 28 June 22