ಅಂಬರೀಶ್ ಸೊಸೆ ಅವಿವಾ ಬಿದ್ಧಪ್ಪ ಸೀಮಂತ ಶಾಸ್ತ್ರ: ಇಲ್ಲಿವೆ ಚಿತ್ರಗಳು
Aviva-Abhishek: ಅಭಿಷೇಕ್ ಅಂಬರೀಶ್ ಪತ್ನಿ, ಅಂಬರೀಶ್ ಸೊಸೆ ಅವಿವಾ ಬಿದಪ್ಪ ಅವರ ಸೀಮಂತ ಕಾರ್ಯ ಅದ್ಧೂರಿಯಾಗಿ ನೆರವೇರಿದೆ. ಈ ಜೋಡಿ ಕಳೆದ ವರ್ಷ ಜೂನ್ ತಿಂಗಳಲ್ಲಿ ವಿವಾಹವಾಗಿದ್ದರು. ಅವಿವಾ ಬಿದಪ್ಪ ಸೀಮಂತ ಶಾಸ್ತ್ರದ ಸುಂದರ ಚಿತ್ರಗಳು ಇಲ್ಲಿವೆ.
Updated on: Sep 17, 2024 | 7:24 PM

ಅಂಬರೀಶ್ ಮನೆಗೆ ಹೊಸ ಅತಿಥಿ ಆಗಮಿಸಲಿದ್ದಾರೆ. ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದಪ್ಪ ತಾಯಿಯಾಗಲಿದ್ದು, ಇತ್ತೀಚೆಗಷ್ಟೆ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಲಾಗಿದೆ.

ಸೀಮಂತ ಕಾರ್ಯಕ್ರಮದಲ್ಲಿ ಚಿತ್ರರಂಗದ ಕೆಲವು ಗಣ್ಯರು ಆಗಮಿಸಿದ್ದರು. ಪ್ರಿಯಾಂಕಾ ಉಪೇಂದ್ರ ಇನ್ನೂ ಕೆಲವು ಸಿನಿಮಾ ರಂಗದ ಗಣ್ಯರು ಆಗಮಿಸಿ, ಅವಿವಾ ಬಿದ್ದಪ್ಪಗೆ ಹರಿಸಿದರು.

ಸೀಮಂತ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್, ಅವಿವಾ ಬಿದಪ್ಪ ಅವರ ಪೋಷಕರು ಸಹ ಭಾಗಿಯಾಗಿದ್ದರು.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ಅವರುಗಳು ಕಳೆದ ವರ್ಷ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

ಅವಿವಾ ಬಿದಪ್ಪ ಅವರು, ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಪುತ್ರಿಯಾಗಿದ್ದಾರೆ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದಪ್ಪ ಮಾಡೆಲಿಂಗ್ನಲ್ಲಿಯೂ ಆಸಕ್ತಿ ಹೊಂದಿದ್ದರು.

ಅಭಿಷೇಕ್ ಅಂಬರೀಶ್ ಅವರ ಪತ್ನಿ ಅವಿವಾ ಬಿದಪ್ಪ ಅವರು ಬಹು ಸಮಯ ಪ್ರೀತಿ, ಎರಡೂ ಕಡೆಯ ಕುಟುಂಬದವರನ್ನು ಒಪ್ಪಿಸಿ ಕಳೆದ ವರ್ಷ ವಿವಾಹವಾಗಿದ್ದಾರೆ.

ಅವಿವಾ ಬಿದಪ್ಪ ಅವರು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಆ ಮೂಲಕ ಅಂಬರೀಶ್ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನ ಆಗಲಿದೆ.



















