
ಪ್ರಕಾಶ್ ರಾಜ್ ಮತ್ತೆ ಮದುವೆ ಆಗಿದ್ದಾರೆ. ಆದರೆ ಬೇರೆ ಮಹಿಳೆ ಜೊತೆ ಅಲ್ಲ. ಪತ್ನಿ ಪೋನಿ ವರ್ಮಾ ಜೊತೆ ತಾವು ಮತ್ತೊಮ್ಮೆ ಮದುವೆ ಆಗಿರುವುದಾಗಿ ಅವರು ಹೇಳಿದ್ದಾರೆ. ಅಂದಹಾಗೆ ಅವರು ಹೀಗೆ ಮಾಡಿರುವುದು ಮಗನ ಒತ್ತಾಯಕ್ಕಾಗಿ!

‘ನಾವು ಇಂದು ಮತ್ತೊಮ್ಮೆ ಮದುವೆ ಆದೆವು. ಯಾಕೆಂದರೆ ನಮ್ಮ ಮಗ ವೇದಾಂತ್ ಇದನ್ನು ನೋಡಲು ಬಯಸಿದ್ದ. ಫ್ಯಾಮಿಲಿ ಕ್ಷಣಗಳು’ ಎಂಬ ಕ್ಯಾಪ್ಷನ್ನೊಂದಿಗೆ ಪ್ರಕಾಶ್ ರಾಜ್ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಕಾಶ್ ರೈ ಅವರಿಗೆ ಪೋನಿ ವರ್ಮಾ ಎರಡನೇ ಪತ್ನಿ. 2010ರಲ್ಲಿ ಅವರಿಬ್ಬರ ಮದುವೆ ನೆರವೇರಿತ್ತು. ಮಂಗಳವಾರ (ಆ.25) 11ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಈ ಜೋಡಿ ಆಚರಿಸಿಕೊಂಡಿತು.

ಪ್ರಕಾಶ್ ರೈ ಮತ್ತು ಪೋನಿ ವರ್ಮಾಗೆ 2015ರಲ್ಲಿ ಗಂಡು ಮಗು ಜನಿಸಿತು. ಮಗನಿಗೆ ವೇದಾಂತ್ ಎಂದು ಹೆಸರು ಇಟ್ಟಿದ್ದಾರೆ. ಪುತ್ರನ ಕೋರಿಕೆಯಂತೆ 11ನೇ ವಿವಾಹ ವಾರ್ಷಿಕೋತ್ಸವದ ದಿನ ಈ ಜೋಡಿ ಮತ್ತೊಮ್ಮೆ ಮದುವೆ ಆಗಿರುವುದು ವಿಶೇಷ.

ಬಹುಭಾಷಾ ನಟನಾಗಿ ಮಿಂಚುತ್ತಿರುವ ಪ್ರಕಾಶ್ ರೈ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹಂಚಿಕೊಂಡಿರುವ ಈ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಮೆಂಟ್ಗಳ ಮೂಲಕ ಶುಭ ಕೋರಲಾಗುತ್ತಿದೆ.

ಪ್ರಕಾಶ್ ರೈ-ಪೋನಿ ವರ್ಮಾ ಅಂದು-ಇಂದು. 11 ವರ್ಷಗಳಿಂದ ಈ ಸೆಲೆಬ್ರಿಟಿ ದಂಪತಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಪ್ರಕಾಶ್ ರೈ ಅವರ ಸಿನಿಪಯಣಕ್ಕೆ ಪೋನಿ ವರ್ಮಾ ಬೆಂಬಲವಾಗಿ ನಿಂತಿದ್ದಾರೆ.