ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ನಟ ವಿಶಾಲ್ ಅವರಿಗೆ ತೀವ್ರ ನೋವಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಅವರು ಅಪ್ಪು ಕುಟುಂಬಕ್ಕೆ ಸಾಥ್ ನೀಡಿದ್ದಾರೆ.
ಶಿವರಾಜ್ಕುಮಾರ್ ನಿವಾಸಕ್ಕೆ ತೆರಳಿರುವ ವಿಶಾಲ್ ಅವರು ಕೆಲವು ಮುಖ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಅವರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು.
ಮೈಸೂರಿನ ಶಕ್ತಿಧಾಮವನ್ನು ನೋಡಿಕೊಳ್ಳಲು ವಿಶಾಲ್ ಮುಂದೆಬಂದಿದ್ದಾರೆ. ಆ ಬಗ್ಗೆ ಡಾ. ರಾಜ್ ಕುಟುಂಬದ ಸದಸ್ಯರ ಜೊತೆ ವಿಶಾಲ್ ಮಾತುಕತೆ ನಡೆಸಿದ್ದಾರೆ.
ಪುನೀತ್ ಅವರ ಕೆಲವು ಸಮಾಜಮುಖಿ ಕೆಲಸಗಳನ್ನು ಮುಂದುವರಿಸಲು ತಮಗೆ ಅನುಮತಿ ನೀಡಿ ಎಂದು ವಿಶಾಲ್ ಅವರು ಅಣ್ಣಾವ್ರ ಕುಟುಂಬದ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅನುಮತಿಗಾಗಿ ಅವರು ಕಾಯುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಮತ್ತು ವಿಶಾಲ್ ನಡುವೆ ಹಲವು ವರ್ಷಗಳ ಒಡನಾಟ ಇತ್ತು. ಸಹೋದರನಂತೆ ಇದ್ದ ಗೆಳೆಯನನ್ನು ಕಳೆದುಕೊಂಡು ವಿಶಾಲ್ ಕಣ್ಣೀರು ಸರಿಸುತ್ತಿದ್ದಾರೆ. ಅಪ್ಪು ಕುಟುಂಬಕ್ಕೆ ಅವರು ಧೈರ್ಯ ತುಂಬುತ್ತಿದ್ದಾರೆ.
ಪುನೀತ್ ಅವರ ಭಾವಚಿತ್ರಕ್ಕೆ ವಿಶಾಲ್ ಹಾರ ಹಾಕಿ ನಮಿಸಿದ್ದಾರೆ. ಶಕ್ತಿಧಾಮದ ಮುಂದಿನ ಕಾರ್ಯಗಳ ಕುರಿತಂತೆ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ ಜತೆಗೆ ಮಾತುಕತೆ ನಡೆಸಿದ್ದಾರೆ.