Amulya: ಅದ್ದೂರಿಯಾಗಿ ನಡೆದ ಅಮೂಲ್ಯ ಸೀಮಂತ ಶಾಸ್ತ್ರ; ಇಲ್ಲಿವೆ ಫೋಟೋಗಳು

Edited By:

Updated on: Jan 20, 2022 | 6:45 PM

Amulya Baby Shower Photos: ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತು. ಈಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

1 / 6
ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಪ್ರೆಗ್ನೆಂಟ್​ ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈಗ ಅವರ ಸೀಮಂತ ಶಾಸ್ತ್ರ ನೆರವೇರಿದೆ.

ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಪ್ರೆಗ್ನೆಂಟ್​ ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಈಗ ಅವರ ಸೀಮಂತ ಶಾಸ್ತ್ರ ನೆರವೇರಿದೆ.

2 / 6

ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ.

3 / 6

ಈಗ ಅಮೂಲ್ಯ 7 ತಿಂಗಳ ಗರ್ಭಿಣಿ. ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಸದ್ಯ ಅವರ ಸೀಮಂತದ ಫೋಟೋ ಅಭಿಮಾನಿಗಳ ವಲಯದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಹಲವು ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.

4 / 6

ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟವರು ಅಮೂಲ್ಯ. ನಂತರ ಅವರು ‘ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಹೀರೋಯಿನ್​ ಆಗಿ ಬಡ್ತಿ ಪಡೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್​ ಹೀರೋಯಿನ್​ ಆಗಿ ಮಿಂಚಿದರು.

5 / 6

ಗಣೇಶ್​, ಯಶ್​, ಲವ್ಲೀ ಸ್ಟಾರ್​ ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​ ಮುಂತಾದ ಸ್ಟಾರ್​ ಕಲಾವಿದರಿಗೆ ಅವರು ಜೋಡಿಯಾಗಿ ನಟಿಸಿದರು. ‘ನಾನು ನನ್ನ ಕನಸು’ ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್​ ರೈ ಜತೆ ತೆರೆಹಂಚಿಕೊಂಡು ಮೆಚ್ಚುಗೆ ಗಳಿಸಿದರು. ಹೀಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇರುವಾಗಲೇ ಅವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

6 / 6

ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತು. ಈಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Loading...
Unable to load recommendations.
Follow Us