- Kannada News Photo gallery Actress Amulya Shares Her Children Aradhya And Atharv Photo On Social Media
ಮಕ್ಕಳಿಗೆ ಕೃಷ್ಣನ ಅವತಾರ ತೊಡಿಸಿ ಖುಷಿಪಟ್ಟ ನಟಿ ಅಮೂಲ್ಯ
ಇಂದು (ಸೆಪ್ಟೆಂಬರ್ 6) ಕೃಷ್ಣ ಜನ್ಮಾಷ್ಟಮಿ. ಈ ಹಬ್ಬದಂದು ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕ್ಲಿಕ್ ಮಾಡಲಾಗುತ್ತದೆ. ಅದೇ ರೀತಿ ಅಮೂಲ್ಯ ಅವರು ಮಕ್ಕಳಿಗೆ ಕೃಷ್ಣನ ವೇಷ ಹಾಕಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದೆ. ಫ್ಯಾನ್ಸ್ ಕಡೆಯಿಂದ ಫೋಟೋಗೆ ಲೈಕ್ಸ್ ಸಿಕ್ಕಿದೆ.
Updated on: Sep 06, 2023 | 12:55 PM

ನಟಿ ಅಮೂಲ್ಯ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಇಂದು (ಸೆಪ್ಟೆಂಬರ್ 6) ಕೃಷ್ಣ ಜನ್ಮಾಷ್ಟಮಿ. ಈ ಹಬ್ಬದಂದು ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕ್ಲಿಕ್ ಮಾಡಲಾಗುತ್ತದೆ. ಅದೇ ರೀತಿ ಅಮೂಲ್ಯ ಅವರು ಮಕ್ಕಳಿಗೆ ಕೃಷ್ಣನ ವೇಷ ಹಾಕಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದೆ.

ಅಮೂಲ್ಯ ಅವರು ಮಕ್ಕಳಿಗೆ ಅಥರ್ವ್ ಹಾಗೂ ಆಧವ್ ಎಂದು ಹೆಸರು ಇಟ್ಟಿದ್ದಾರೆ. ಇವರ ಕ್ಯೂಟ್ ಫೋಟೋಗಳನ್ನು ಅಮೂಲ್ಯ ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಈಗ ಇವರ ಕೃಷ್ಣನ ಗೆಟಪ್ ಸಾಕಷ್ಟು ಗಮನ ಸೆಳೆದಿದೆ.

ಕೊಳಲು ಹಿಡಿದು ಅಥರ್ವ್ ಹಾಗೂ ಆಧವ್ ಕುಳಿತಿದ್ದಾರೆ. ಇವರ ಜೊತೆಗೆ ಅಮೂಲ್ಯ ಕೂಡ ಇದ್ದಾರೆ. ಗೋವಿನ ಜೊತೆಯೂ ಫೋಟೋಗಳಿವೆ. ಸದ್ಯ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಕನ್ನಡದಲ್ಲಿ ಅಮೂಲ್ಯ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ಆದ ಬಳಿಕ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಮಕ್ಕಳ ಆರೈಕೆಯಲ್ಲಿ ಅಮೂಲ್ಯ ಅವರು ಬ್ಯುಸಿ ಆಗಿದ್ದಾರೆ. ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಬಾಲ ನಟಿಯಾಗಿ ಅಮೂಲ್ಯ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ನಾಯಕಿ ಆಗಿ ನಟಿಸಿದ ‘ಚೆಲುವಿನ ಚಿತ್ತಾರ’ ಸಿನಿಮಾ ಹಿಟ್ ಆಯಿತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. 2017ರಲ್ಲಿ ರಿಲೀಸ್ ಆದ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದರು. ಆ ಬಳಿಕ ಅವರು ನಟನೆಗೆ ಮರಳಿಲ್ಲ.



















