
ನಟಿ ಖುಷ್ಬೂ ಸುಂದರ್ ಅವರು ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಅವರು ಸೋಶಿಯಲ್ ಮೀಡಿಯಾ ಬಳಸುತ್ತಾರೆ.

ದಿನನಿತ್ಯದ ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಖುಷ್ಬು ಸುಂದರ್ ಅಪ್ಡೇಟ್ ನೀಡುತ್ತಾರೆ. ಈಗ ಅವರು ಹಳೇ ಗೆಳತಿ ರಂಭಾ ಅವರನ್ನು ಭೇಟಿ ಆಗಿದ್ದು, ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಂಭಾ ಅವರು ಮಕ್ಕಳ ಜೊತೆ ಚೆನ್ನೈನಲ್ಲಿ ವಾಸವಾಗಿದ್ದಾರೆ. ಅವರ ಮನೆಗೆ ತೆರಳಿರುವ ಖುಷ್ಬೂ ಅವರು ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

‘ಹಳೇ ಸ್ನೇಹಿತರನ್ನು ಭೇಟಿ ಮಾಡಿ, ಬಿರಿಯಾನಿ ಸವಿದು, ನಗುತ್ತಾ ಕಾಲ ಕಳೆಯುವುದಕ್ಕಿಂತ ಉತ್ತಮ ಫೀಲಿಂಗ್ ಬೇರೊಂದಿಲ್ಲ’ ಎಂದು ಖುಷ್ಬೂ ಪೋಸ್ಟ್ ಮಾಡಿದ್ದಾರೆ. ಮತ್ತೆ ಮತ್ತೆ ಭೇಟಿ ಆಗೋಣ ಎಂದು ಅವರು ರಂಭಾಗೆ ಹೇಳಿದ್ದಾರೆ.

ರಂಭಾ ಮತ್ತು ಖುಷ್ಬೂ ಇಬ್ಬರೂ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯರಾಗಿದ್ದರು. ಇಬ್ಬರೂ ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಮನೆಮಾತಾಗಿದ್ದವರು. ಈಗ ಸಂಸಾರದ ಕಡೆಗೆ ರಂಭಾ ಹೆಚ್ಚು ಗಮನ ಹರಿಸಿದ್ದಾರೆ.