Updated on: Dec 20, 2021 | 4:07 PM
ನಟಿ ಮಲೈಕಾ ಅರೋರಾ ಅವರು ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್ ಡಿಮ್ಯಾಂಡ್ ಇದೆ.
ಅನೇಕ ಐಟಂ ಸಾಂಗ್ಗಳಲ್ಲಿ ಮಲೈಕಾ ಅರೋರಾ ಮಿಂಚು ಹರಿಸಿದ್ದಾರೆ. ನಟನೆಯಲ್ಲೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಅನೇಕ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಾರೆ.
ಫಿಟ್ನೆಸ್ ಬಗ್ಗೆ ಮಲೈಕಾ ಅರೋರಾ ಹೆಚ್ಚು ಕಾಳಜಿ ವಹಿಸುತ್ತಾರೆ. ಜಿಮ್ನಲ್ಲಿ ವರ್ಕೌಟ್ ಮಾಡುವ ಅವರು, ಯೋಗಾಸನದಲ್ಲೂ ಪಳಗಿದ್ದಾರೆ.
ಹದಿಹರೆಯದ ಹುಡುಗಿಯರೂ ನಾಚುವಂತೆ ಮಲೈಕಾ ಅರೋರಾ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.
ನಟ ಅರ್ಜುನ್ ಕಪೂರ್ ಜತೆ ಮಲೈಕಾ ಅರೋರಾ ಡೇಟಿಂಗ್ ನಡೆಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದುಂಟು. ತಮ್ಮ ಸಂಬಂಧವನ್ನು ಮಲೈಕಾ ಎಂದಿಗೂ ಮುಚ್ಚಿಟ್ಟಿಲ್ಲ.