ನಟಿ ರಮ್ಯಾ ಅವರು ಸ್ಯಾಂಡಲ್ವುಡ್ನ ಬೇಡಿಕೆಯ ನಟಿ ಆಗಿದ್ದರು. ಏಕಾಏಕಿ ಚಿತ್ರರಂಗ ತೊರೆದು ರಾಜಕೀಯದಲ್ಲಿ ಬ್ಯುಸಿ ಆದರು. ಕೆಲ ವರ್ಷಗಳ ಹಿಂದೆ ರಾಜಕೀಯವನ್ನು ತೊರೆದಿದ್ದಾರೆ.
ರಮ್ಯಾ ಅವರು ಚಿತ್ರರಂಗದ ಜತೆ ಒಳ್ಳೆಯ ನಂಟು ಹೊಂದಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅವರು ಕಂಬ್ಯಾಕ್ ಮಾಡುವ ಘೋಷಣೆ ಮಾಡಿದ್ದರು. ಆದರೆ, ಈ ಯೋಜನೆ ನಂತರ ಕ್ಯಾನ್ಸಲ್ ಆಯಿತು. ಆ ಚಿತ್ರವನ್ನು ಅವರು ಕೇವಲ ನಿರ್ಮಾಣ ಮಾಡುತ್ತಿದ್ದಾರೆ.
ನವೆಂಬರ್ನಲ್ಲಿ ರಮ್ಯಾ ಕಂಬ್ಯಾಕ್ ಸಿನಿಮಾ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದ್ದರು. ಇದೇ ಸಮಯಕ್ಕೆ ಸರಿಯಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪ್ರೋಮೋದಲ್ಲಿ ಭಾಗಿ ಆಗಿದ್ದರು. ಇದು ಅವರ ಕಂಬ್ಯಾಕ್ ಸಿನಿಮಾ ಎಂದು ಎಲ್ಲರೂ ಭಾವಿಸಿದ್ದರು.
ಈ ವಿಚಾರಕ್ಕೆ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ‘ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ. ಪ್ರೋಮೋ ಶೂಟ್ನಲ್ಲಿ ಮಾತ್ರ ಭಾಗಿ ಆಗಿದ್ದೇನೆ’ ಎಂದಿದ್ದಾರೆ ಅವರು.
ಇತ್ತೀಚೆಗೆ ರಮ್ಯಾ ಭಾಗಿ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪ್ರೋಮೋ ರಿಲೀಸ್ ಆಗಿತ್ತು. ಇದನ್ನು ನೋಡಿ ರಮ್ಯಾ ಫ್ಯಾನ್ಸ್ ಖುಷಿಯಾಗಿದ್ದಾರೆ.