Updated on:Mar 23, 2023 | 8:49 AM
ಸೆಲೆಬ್ರಿಟಿಗಳನ್ನು ಹೊಸಹೊಸ ಅವತಾರದಲ್ಲಿ ನೋಡಲು ಫ್ಯಾನ್ಸ್ ಇಷ್ಟಪಡುತ್ತಾರೆ. ಅದರಲ್ಲೂ ಅವರು ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡರೆ ಮತ್ತಷ್ಟು ಇಷ್ಟವಾಗುತ್ತಾರೆ. ರಂಜನಿ ರಾಘವನ್ ಈಗ ಎಲ್ಲರ ಗಮನ ಸೆಳೆದಿದ್ದಾರೆ.
ನಟಿ ರಂಜನಿ ರಾಘವನ್ ಅವರು ಧಾರಾವಾಹಿ ಮೂಲಕ ಫೇಮಸ್ ಆದವರು. ಅವರಿಗೆ ಹಿರಿತೆರೆಯಲ್ಲೂ ಬೇಡಿಕೆ ಇದೆ. ಸೋಶಿಯಲ್ ಮೀಡಿಯಾದಲ್ಲೂ ಅವರನ್ನು ಹಿಂಬಾಲಿಸುವವರ ಸಂಖ್ಯೆ ದೊಡ್ಡದಿದೆ.
ಈಗ ರಂಜನಿ ರಾಘವನ್ ಅವರು ಮೂಗುತಿ ಧರಿಸಿ ಕಾಣಿಸಿಕೊಂಡಿದ್ದಾರೆ. ಯುಗಾದಿ ಸಂಭ್ರಮಕ್ಕೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರನ್ನು ನೋಡಿ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಎಷ್ಟು ಮುದ್ದಾಗಿ ಕಾಣಿಸುತ್ತಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಂಜನಿ ಅವರ ಅಂದವನ್ನು ಹೊಗಳಿದ್ದಾರೆ.
ರಂಜನಿ ರಾಘವನ್ ಅವರು ‘ಕನ್ನಡತಿ’ ಧಾರಾವಾಹಿ ಮುಗಿದ ಬಳಿಕ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಅವರು ಹಿರಿತೆರೆಯಲ್ಲಿ ಬ್ಯುಸಿ ಆಗುವ ಪ್ಲ್ಯಾನ್ನಲ್ಲಿದ್ದಾರೆ.
Published On - 8:19 am, Thu, 23 March 23