ತಮಿಳಿನ ‘ಹಿಡನ್ ಕ್ಯಾಮೆರಾ’ ಸಿನಿಮಾಗೆ ನಾಯಕಿಯಾದ ಕನ್ನಡದ ನಟಿ ಸಂಹಿತಾ ವಿನ್ಯಾ

Updated on: Oct 03, 2025 | 7:07 PM

ಸ್ಯಾಂಡಲ್​ವುಡ್ ನಟಿ ಸಂಹಿತಾ ವಿನ್ಯಾ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಿಂದಲೂ ಆಫರ್ ಬರುತ್ತಿರುವುದು ಅವರಿಗೆ ಸಂತಸ ತಂದಿದೆ. ತಮಿಳಿನ ‘ಹಿಡನ್ ಕ್ಯಾಮೆರಾ’ ಸಿನಿಮಾಗೆ ಸಂಹಿತಾ ವಿನ್ಯಾ ಅವರು ನಾಯಕಿ ಆಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಸಂಹಿತಾ ಅವರು ಬ್ಯುಸಿ ಆಗಿದ್ದಾರೆ.

1 / 5
ಕನ್ನಡದ ನಟಿ ಸಂಹಿತಾ ವಿನ್ಯಾ ಅವರು ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗು  ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. 75ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿರುವ ಖ್ಯಾತಿ ಅವರಿಗೆ ಇದೆ.

2 / 5
ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಜತೆಗೂ ಸಂಹಿತಾ ವಿನ್ಯಾ ನಟಿಸುತ್ತಿದ್ದಾರೆ. ಇದಲ್ಲದೇ ತಮಿಳಿನ ‘ಹಿಡನ್ ಕ್ಯಾಮೆರಾ’ ಚಿತ್ರಕ್ಕೆ ಸಂಹಿತಾ ನಾಯಕಿ ಆಗಿದ್ದಾರೆ. ಕೇರಳದಲ್ಲಿ ಆ ಚಿತ್ರದ ಕೆಲಸ ನಡೆಯುತ್ತಿದೆ.

3 / 5
ಸಂಹಿತಾ ವಿನ್ಯಾ ನಟನೆಯ ಮಿಕ್ಸಿಂಗ್ ಪ್ರೀತಿ, ಮೆಜೆಸ್ಟಿಕ್ 2, ಆಯುಧ, ಜಿಎಸ್​​ಟಿ, ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ, ಮಿಕ್ಸಿಂಗ್ ಕಾದಲ್ ಮುಂತಾದ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

4 / 5
‘ಹಾಲು ತುಪ್ಪ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ ಅವರು ನಂತರ ಅಮೃತಘಳಿಗೆ, ಲಂಗೋಟಿ ಮ್ಯಾನ್, ಯು ಆರ್ ಮೈ ಹೀರೋ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಿದರು.

5 / 5
ಈವರೆಗೂ ತಮಿಳು ಸೇರಿದಂತೆ 18ಕ್ಕೂ ಅಧಿಕ ಸಿನಿಮಾಗಳಲ್ಲಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಪರಭಾಷೆಯಿಂದ ಸಾಕಷ್ಟು ಅವಕಾಶ ಬರುತ್ತಿರುವುದು ಸಂಹಿತಾ ವಿನ್ಯಾ ಅವರಿಗೆ ಖುಷಿ ನೀಡಿದೆ.

Published On - 6:48 pm, Fri, 3 October 25