
ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ಇನ್ಸ್ಟಾಗ್ರಾಂನಲ್ಲಿ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದು, ಲಂಡನ್ನಲ್ಲಿ ದೇಸಿ ಲುಕ್ ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಆದರೆ ಚಿತ್ರ ನೋಡಿದ ಅಭಿಮಾನಿಗಳು ಇದು ದೇಸಿ ಲುಕ್ನಂತೆ ಕಾಣುತ್ತಿಲ್ಲ ಎಂದಿದ್ದಾರೆ. ಅದರಲ್ಲಿಯೂ ಶ್ರುತಿಯ ತುಟಿಯುಂಗುರದ ಬಗ್ಗೆ ಕಮೆಂಟ್ ಸೆಕ್ಷನ್ನಲ್ಲಿ ಚರ್ಚೆಯಾಗಿದೆ.

ಲಂಡನ್ಗೆ ತೆರಳಿ ಹಾಡು ರೆಕಾರ್ಡ್ ಮಾಡುತ್ತಿರುವ ವಿಡಿಯೋವನ್ನು ಶ್ರುತಿ ಹಾಸನ್ ಹಂಚಿಕೊಂಡಿದ್ದಾರೆ. ಹೊಸ ಆಲ್ಬಂ ಬಿಡುಗಡೆ ಮಾಡುತ್ತಿದ್ದಾರಾ? ಕಾದು ನೋಡಬೇಕಿದೆ.

ಶ್ರುತಿ ಹಾಸನ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾನಿಯ ಮುಂದಿನ ಸಿನಿಮಾ ಹಾಗೂ ಥರ್ಡ್ ಐ ಹೆಸರಿನ ಸಿನಿಮಾದಲ್ಲಿ ಶ್ರುತಿ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ನಟಿಸಿರುವ ಸಲಾರ್ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಬಾಯ್ಫ್ರೆಂಡ್ ಜೊತೆಗೆ ಲಿವಿನ್ ರಿಲೇಶನ್ನಲ್ಲಿದ್ದಾರೆ. ಅವರ ಬಾಯ್ಫ್ರೆಂಡ್ ಜೊತೆಗಿನ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.
Published On - 11:04 pm, Tue, 16 May 23