
ನಟಿ ಅದಿತಿ ರಾವ್ ಹೈದರಿ ಅವರು ಹಲವು ಭಾಷೆಯ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ದಕ್ಷಿಣ ಭಾರತ ಮತ್ತು ಬಾಲಿವುಡ್ನಲ್ಲಿ ಸಕ್ರಿಯರಾಗಿರುವ ಅವರು ಈಗ ಕಾನ್ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದಾರೆ.

ಕಾನ್ ಚಿತ್ರೋತ್ಸವದಲ್ಲಿ ವಿವಿಧ ದೇಶ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಭಾರತದ ಅನೇಕ ನಟಿಯರು ಕೂಡ ಪಾಲ್ಗೊಂಡಿದ್ದಾರೆ. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಅದಿತಿಗೆ ಈ ಚಾನ್ಸ್ ಸಿಕ್ಕಿದ್ದಕ್ಕೆ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

ಕಳೆದ ವರ್ಷ ಕೂಡ ಅದಿತಿ ರಾವ್ ಹೈದರಿ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದರು. ಈ ಬಾರಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ಹಳದಿ ಬಣ್ಣದ ಗೌನ್ ಧರಿಸಿ ಅವರು ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.

ಮಲಯಾಳಂ, ಹಿಂದಿ, ಮರಾಠಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಅದಿತಿ ರಾವ್ ಹೈದರಿ ಅವರು ನಟಿಸಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹೊಸ ಹೊಸ ಸಿನಿಮಾ ಅವಕಾಶಗಳು ಅದಿತಿ ರಾವ್ ಹೈದರಿ ಅವರನ್ನು ಹುಡುಕಿಕೊಂಡು ಬರುತ್ತಿವೆ.

ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಕಾರಣದಿಂದಲೂ ಅದಿತಿ ರಾವ್ ಹೈದರಿ ಅವರು ಆಗಾಗ ಸುದ್ದಿ ಆಗುತ್ತಾರೆ. ನಟ ಸಿದ್ದಾರ್ಥ್ ಜೊತೆ ಅವರು ಹೆಚ್ಚು ಆಪ್ತವಾಗಿದ್ದಾರೆ. ಇಬ್ಬರ ರಿಲೇಷನ್ಶಿಪ್ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಆ ಬಗ್ಗೆ ಅವರಿಂದ ಅಧಿಕೃತ ಹೇಳಿಕೆ ಹೊರಬರಬೇಕಿದೆ ಅಷ್ಟೇ.