ಕರ್ಣನ ಪಾತ್ರಕ್ಕೆ ಯಶ್ ಸೂಕ್ತವಾಗುತ್ತಾರೆ. ಅವರು ಈ ಗೆಟಪ್ನಲ್ಲಿ ಇರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಬಲ ಭೀಮನಂತೆ ಕಾಣುತ್ತಿದ್ದಾರೆ ನಟ ಧ್ರುವ ಸರ್ಜಾ. ಅವರ ಕಟ್ಟುಮಸ್ತಾದ ದೇಹವು ಈ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆ.
ಕೃಷ್ಣನ ಗೆಟಪ್ನಲ್ಲಿ ಕಿಚ್ಚ ಸುದೀಪ್ ಅವರ ಫೋಟೋ ಹೀಗಿದೆ. ‘ಮುಕುಂದ ಮುರಾರಿ’ ಚಿತ್ರದಲ್ಲಿ ಅವರು ಕೃಷ್ಣನಾಗಿ ನಟಿಸಿದ್ದರು.
ಅರ್ಜುನನ ಪಾತ್ರದಲ್ಲಿ ಪುನೀತ್ ನಟಿಸಿದರೆ ಹೀಗಿರುತ್ತದೆ. ಬಿಲ್ಲು ಹಿಡಿದು ನಿಂತಿರುವ ಗೆಟಪ್ನಲ್ಲಿ ಈ ಫೋಟೋ ಮೂಡಿಬಂದಿದೆ.
ರಿಷಬ್ ಶೆಟ್ಟಿ ಅವರು ಭೀಷ್ಮನ ಪಾತ್ರ ಮಾಡಿದರೆ ಈ ರೀತಿ ಕಾಣಬಹುದು. ಮಹಾಭಾರತದಲ್ಲಿ ಇದು ಕೂಡ ಬಹಳ ಮುಖ್ಯವಾದ ಪಾತ್ರ.
ಶಿವರಾಜ್ಕುಮಾರ್ ಅವರು ದ್ರೋಣಾಚಾರ್ಯರ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎನ್ನುತ್ತಿದೆ ಎಐ ಮೂಲಕ ವಿನ್ಯಾಸಗೊಂಡ ಈ ಫೋಟೋ.
ಶಕುನಿ ಪಾತ್ರವನ್ನು ನಟ ರಾಜ್ ಬಿ. ಶೆಟ್ಟಿ ಅವರು ನಿಭಾಯಿಸಿದರೆ ಹೇಗೆ ಕಾಣಬಹುದು ಎಂಬುದನ್ನು ಈ ಫೋಟೋ ವಿವರಿಸುತ್ತಿದೆ.
ರಚಿತಾ ರಾಮ್ ಅವರಿಗೆ ದ್ರೌಪದಿ ಪಾತ್ರ ನೀಡಿದರೆ ಈ ಗೆಟಪ್ನಲ್ಲಿ ಅವರು ಕಂಗೊಳಿಸಬಹುದು. ಈ ಫೋಟೋ ಕೂಡ ವೈರಲ್ ಆಗಿದೆ.