- Kannada News Photo gallery Redmi 12 5G is scheduled to launch in India on August 1st A budget price 5g phone
Redmi 12 5G: ಶವೋಮಿಯಿಂದ ವಿನೂತನ ಸ್ಮಾರ್ಟ್‌ಫೋನ್: ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಲಿದೆ ರೆಡ್ಮಿ 12 5G ಫೋನ್
ವಿಶೇಷ ಎಂದರೆ ರೆಡ್ಮಿ 12 ಸ್ಮಾರ್ಟ್ಫೋನಿನ ಬೆಲೆ ಕೇವಲ 9,999 ರೂ. ಎನ್ನಲಾಗುತ್ತಿದ್ದು, ಇದು 5G ಬೆಂಬಲ ಪಡೆದುಕೊಂಡಿದೆ. ಇಷ್ಟು ಕಡಿಮೆ ದರಕ್ಕೆ 5G ಸಪೋರ್ಟ್ ಮಾಡುವ ಮೊದಲ ರೆಡ್ಮಿ ಫೋನ್ ಇದಾಗಿದೆ.
Updated on: Jul 27, 2023 | 3:46 PM

ಚೀನಾ ಮೂಲದ ಪ್ರಸಿದ್ಧ ಶವೋಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್ನ ಅಡಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಆಗಸ್ಟ್ 1 ರಂದು ಅಂದರೆ ನಾಳೆ ಭಾರತದಲ್ಲಿ ಹೊಸ ರೆಡ್ಮಿ 12 ಫೋನ್ ಲಾಂಚ್ ಮಾಡಲು ಸಿದ್ದವಾಗಿದೆ.

ವಿಶೇಷ ಎಂದರೆ ಈ ಸ್ಮಾರ್ಟ್ಫೋನಿನ ಬೆಲೆ ಕೇವಲ 9,999 ರೂ. ಎನ್ನಲಾಗುತ್ತಿದ್ದು, ಇದು 5G ಬೆಂಬಲ ಪಡೆದುಕೊಂಡಿದೆ. ಇಷ್ಟು ಕಡಿಮೆ ದರಕ್ಕೆ 5G ಸಪೋರ್ಟ್ ಮಾಡುವ ಮೊದಲ ರೆಡ್ಮಿ ಫೋನ್ ಇದಾಗಿದೆ.

ರೆಡ್ಮಿ 12 5G ಸ್ಮಾರ್ಟ್‌ಫೋನ್ 6GB + 128GB ಮತ್ತು 8GB + 256GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆಯಂತೆ. ಇದರ ಬೆಲೆ ಕ್ರಮವಾಗಿ 9,999ರೂ. ಮತ್ತು 13,999 ರೂ. ಇರಲಿದೆ ಎನ್ನಲಾಗಿದೆ. ಆದರೆ, ರೆಡ್ಮಿ 12 ಸ್ಮಾರ್ಟ್ಫೋನ್ನ ಬೆಲೆ ಅಥವಾ ಫೀಚರ್ಸ್ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ರೆಡ್ಮಿ 12 5ಜಿ ಸ್ಮಾರ್ಟ್‌ಫೋನ್ ದೊಡ್ಡದಾದ 6.79 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ನಿಂದ ಕೂಡಿದೆ.

ಬೆಲೆಗೆ ತಕ್ಕಂತೆ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. 8GB RAM ಮತ್ತು 256GB ಇನ್‌ಬಿಲ್ಟ್ ಸ್ಟೋರೇಜ್ ಹೊಂದಿರಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

ರೆಡ್ಮಿ 12 5G ಫೋನಿನ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಬದಿಯ ಕ್ಯಾಮೆರಾದಲ್ಲಿ ಫ್ಲ್ಯಾಷ್‌ಲೈಟ್ ಅನ್ನು ಇರಿಸಿರುವ ಸಾಧ್ಯತೆ ಇದೆ.

ರೆಡ್ಮಿ 12 ಸ್ಮಾರ್ಟ್ಫೋನ್ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. NFC ಮತ್ತು ಬ್ಲೂಟೂತ್ v5.3 ಸಂಪರ್ಕವನ್ನು ನೀಡಲಾಗಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅಳವಡಿಸಲಾಗಿದೆ.



















