AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi 12 5G: ಶವೋಮಿಯಿಂದ ವಿನೂತನ ಸ್ಮಾರ್ಟ್​ಫೋನ್: ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಲಿದೆ ರೆಡ್ಮಿ 12 5G ಫೋನ್

ವಿಶೇಷ ಎಂದರೆ ರೆಡ್ಮಿ 12 ಸ್ಮಾರ್ಟ್​ಫೋನಿನ ಬೆಲೆ ಕೇವಲ 9,999 ರೂ. ಎನ್ನಲಾಗುತ್ತಿದ್ದು, ಇದು 5G ಬೆಂಬಲ ಪಡೆದುಕೊಂಡಿದೆ. ಇಷ್ಟು ಕಡಿಮೆ ದರಕ್ಕೆ 5G ಸಪೋರ್ಟ್ ಮಾಡುವ ಮೊದಲ ರೆಡ್ಮಿ ಫೋನ್ ಇದಾಗಿದೆ.

Vinay Bhat
|

Updated on: Jul 27, 2023 | 3:46 PM

Share
ಚೀನಾ ಮೂಲದ ಪ್ರಸಿದ್ಧ ಶವೋಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್​ನ ಅಡಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಆಗಸ್ಟ್ 1 ರಂದು ಅಂದರೆ ನಾಳೆ ಭಾರತದಲ್ಲಿ ಹೊಸ ರೆಡ್ಮಿ 12 ಫೋನ್‌ ಲಾಂಚ್‌ ಮಾಡಲು ಸಿದ್ದವಾಗಿದೆ.

1 / 8
ವಿಶೇಷ ಎಂದರೆ ಈ ಸ್ಮಾರ್ಟ್​ಫೋನಿನ ಬೆಲೆ ಕೇವಲ 9,999 ರೂ. ಎನ್ನಲಾಗುತ್ತಿದ್ದು, ಇದು 5G ಬೆಂಬಲ ಪಡೆದುಕೊಂಡಿದೆ. ಇಷ್ಟು ಕಡಿಮೆ ದರಕ್ಕೆ 5G ಸಪೋರ್ಟ್ ಮಾಡುವ ಮೊದಲ ರೆಡ್ಮಿ ಫೋನ್ ಇದಾಗಿದೆ.

2 / 8
ರೆಡ್ಮಿ 12 5G ಸ್ಮಾರ್ಟ್​ಫೋನ್ 6GB + 128GB ಮತ್ತು 8GB + 256GB ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆಯಂತೆ. ಇದರ ಬೆಲೆ ಕ್ರಮವಾಗಿ 9,999ರೂ. ಮತ್ತು 13,999 ರೂ. ಇರಲಿದೆ ಎನ್ನಲಾಗಿದೆ. ಆದರೆ, ರೆಡ್ಮಿ 12 ಸ್ಮಾರ್ಟ್​ಫೋನ್​ನ ಬೆಲೆ ಅಥವಾ ಫೀಚರ್ಸ್ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

3 / 8
ರೆಡ್ಮಿ 12 5ಜಿ ಸ್ಮಾರ್ಟ್‌ಫೋನ್‌ ದೊಡ್ಡದಾದ 6.79 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್​ನಿಂದ ಕೂಡಿದೆ.

4 / 8
ಬೆಲೆಗೆ ತಕ್ಕಂತೆ ಆಕ್ಟಾ-ಕೋರ್ ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. 8GB RAM ಮತ್ತು 256GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿರಲಿದೆ.

5 / 8
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

6 / 8
ರೆಡ್ಮಿ 12 5G ಫೋನಿನ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಬದಿಯ ಕ್ಯಾಮೆರಾದಲ್ಲಿ ಫ್ಲ್ಯಾಷ್‌ಲೈಟ್‌ ಅನ್ನು ಇರಿಸಿರುವ ಸಾಧ್ಯತೆ ಇದೆ.

7 / 8
ರೆಡ್ಮಿ 12 ಸ್ಮಾರ್ಟ್‌ಫೋನ್​ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. NFC ಮತ್ತು ಬ್ಲೂಟೂತ್ v5.3 ಸಂಪರ್ಕವನ್ನು ನೀಡಲಾಗಿದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಅಳವಡಿಸಲಾಗಿದೆ.

8 / 8
Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು

ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?

ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ

ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?

ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!

ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ