AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇ ಪದೇ ತುಟಿ ಒಡೆಯುವುದು ಕೇವಲ ಹವಾಮಾನದಿಂದಲ್ಲ ಇದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು

ಅನೇಕರಿಗೆ ತುಟಿಗಳು ಪದೇ ಪದೇ ಒಡೆಯುತ್ತದೆ. ಆದರೆ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುವುದು ಸರಿಯಲ್ಲ. ಇದಕ್ಕೆ ಕಾರಣ ದೇಹದಲ್ಲಿನ ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯೂ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಅಲರ್ಜಿ, ಚರ್ಮದ ಸಮಸ್ಯೆಗಳು ಅಥವಾ ಇತರ ಆರೋಗ್ಯ ತೊಂದರೆಗಳೂ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪದೇ ಪದೇ ತುಟಿ ಒಡೆಯುವುದು ಕೇವಲ ಹವಾಮಾನದಿಂದಲ್ಲ ಇದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು
Cracked Lips Beyond WeatherImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 14, 2026 | 7:41 PM

Share

ಮುಖ್ಯಾಂಶಗಳು

  • ತುಟಿ ಒಡೆಯಲು ವಿಟಮಿನ್ ಬಿ, ಕಬ್ಬಿಣದ ಕೊರತೆಯೂ ಕಾರಣ
  • ಪದೇ ಪದೇ ತುಟಿ ಒಡೆಯುವುದನ್ನು ನಿರ್ಲಕ್ಷಿಸಬೇಡಿ; ದೇಹದ ಈ ಕೊರತೆಯ ಸೂಚನೆಯಾಗಿರಬಹುದು
  • ತುಟಿ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಸೇವಿಸಿ; ಪೌಷ್ಟಿಕಾಂಶ ಕೊರತೆಯಿಂದ ದೂರವಿರಿ

ತುಟಿಗಳು ಒಣಗಿ, ಪದೇ ಪದೇ ಒಡೆಯುವುದು ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಕಂಡುಬರುವ ಸಮಸ್ಯೆ ಎಂದು ಹಲವರು ಭಾವಿಸುತ್ತಾರೆ. ಆದರೆ ಲಿಪ್‌ಬಾಮ್ ಹಚ್ಚಿದರೂ ಸಮಸ್ಯೆ ಮತ್ತೆ ಮತ್ತೆ ಕಂಡುಬರುತ್ತಿದ್ದರೆ ಅಥವಾ ತುಟಿಗಳಲ್ಲಿ ನೋವು, ಉರಿ, ರಕ್ತಸ್ರಾವ ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಆರೋಗ್ಯ ತಜ್ಞರ ಪ್ರಕಾರ, ಇದು ದೇಹದಲ್ಲಿ ವಿಟಮಿನ್ ಬಿ ಸಮೂಹ, ಕಬ್ಬಿಣ (Iron), ಜಿಂಕ್ ಅಥವಾ ನೀರಿನ ಕೊರತೆಯ ಸೂಚನೆಯಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಅಲರ್ಜಿ, ಚರ್ಮದ ಸಮಸ್ಯೆಗಳು ಅಥವಾ ಇತರ ಆರೋಗ್ಯ ತೊಂದರೆಗಳೂ ಕಾರಣವಾಗಬಹುದು.

ತುಟಿಗಳು ಪದೇ ಪದೇ ಒಡೆಯಲು ಕಾರಣವೇನು?

ತುಟಿಗಳ ಮೇಲ್ಭಾಗದಲ್ಲಿ ಎಣ್ಣೆ ಗ್ರಂಥಿಗಳು (Oil Glands) ಇಲ್ಲದಿರುವುದರಿಂದ ಅವು ಬೇಗ ಒಣಗುತ್ತವೆ. ಕಡಿಮೆ ನೀರು ಕುಡಿಯುವುದು, ಆಗಾಗ ತುಟಿಯನ್ನು ನಾಲಿಗೆಯಿಂದ ನೆಕ್ಕುವುದು, ತೀವ್ರ ಬಿಸಿಲು, ತಂಪಾದ ಗಾಳಿ, ಏರ್‌ಕಂಡೀಷನರ್ ವಾತಾವರಣ ಹಾಗೂ ಕೆಲವು ಔಷಧಿಗಳ ಬಳಕೆಯಿಂದ ಸಮಸ್ಯೆ ಹೆಚ್ಚಾಗಬಹುದು. ಇದರ ಜೊತೆಗೆ ವಿಟಮಿನ್ ಬಿ2 (ರಿಬೋಫ್ಲೇವಿನ್), ಬಿ6, ಬಿ12, ಫೋಲೇಟ್ ಹಾಗೂ ಕಬ್ಬಿಣದ ಕೊರತೆ ಇದ್ದರೆ ತುಟಿಗಳಲ್ಲಿ ಬಿರುಕು, ಉರಿ ಮತ್ತು ನೋವು ಕಾಣಿಸಬಹುದು.

ತುಟಿಗಳು ಒಡೆಯುವುದನ್ನು ತಡೆಯಲು ಯಾವ ರೀತಿಯ ಆಹಾರ ಸೇವಿಸಬೇಕು?

ಸಾಮಾನ್ಯವಾಗಿ ತುಟಿಗಳ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ಬಹಳ ಮುಖ್ಯ. ಹಸಿರು ಸೊಪ್ಪು, ಬೇಳೆಕಾಳುಗಳು, ಮೊಟ್ಟೆ, ಹಾಲು, ಮೊಸರು, ಸಂಪೂರ್ಣ ಧಾನ್ಯಗಳು, ಮೀನು, ಕೋಳಿ, ಒಣಹಣ್ಣುಗಳು ಹಾಗೂ ಬೀಜಗಳನ್ನು ಆಹಾರದಲ್ಲಿ ಸೇರಿಸಬಹುದು. ಸಾಕಷ್ಟು ನೀರು ಕುಡಿಯುವುದು ದೇಹವನ್ನು ಹೈಡ್ರೇಟ್ ಆಗಿರಿಸಿ ತುಟಿಗಳ ಒಣಗುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಾವು ಮಧುಮೇಹಿಗಳಿಗೆ ಮಾತ್ರವಲ್ಲ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ

ಕೆಲವರು ತುಟಿ ಒಣಗಿದಾಗ ಪದೇ ಪದೇ ನಾಲಿಗೆಯಿಂದ ನೆಕ್ಕುತ್ತಾರೆ. ಆದರೆ ಈ ಅಭ್ಯಾಸ ತುಟಿಗಳು ಇನ್ನಷ್ಟು ಒಣಗಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಮೆಂಥಾಲ್, ಕರ್ಪೂರ ಅಥವಾ ಹೆಚ್ಚು ಸುಗಂಧ ಹೊಂದಿರುವ ಲಿಪ್‌ಪ್ರಾಡಕ್ಟ್‌ಗಳು ಕೆಲವರಲ್ಲಿ ಅಲರ್ಜಿ ಉಂಟುಮಾಡಬಹುದು. ಆದ್ದರಿಂದ SPF ಹೊಂದಿರುವ ಅಥವಾ ಪೆಟ್ರೋಲಿಯಂ ಜೆಲ್ಲಿ ಆಧಾರಿತ ಲಿಪ್‌ಬಾಮ್ ಬಳಸುವುದು ಉತ್ತಮ ಆಯ್ಕೆಯಾಗಿದೆ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ತುಟಿಗಳ ಬಿರುಕುಗಳು ಹಲವು ವಾರಗಳಾದರೂ ಗುಣವಾಗದಿದ್ದರೆ, ಪದೇ ಪದೇ ರಕ್ತಸ್ರಾವವಾಗುತ್ತಿದ್ದರೆ, ಸೋಂಕಿನ ಲಕ್ಷಣಗಳು ಕಂಡುಬಂದರೆ ಅಥವಾ ಬಾಯಿಯ ಮೂಲೆಗಳಲ್ಲಿ ನಿರಂತರ ಗಾಯಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಇಲ್ಲವಾದಲ್ಲಿ ರಕ್ತ ಪರೀಕ್ಷೆ ಮೂಲಕ ಪೌಷ್ಟಿಕಾಂಶಗಳ ಕೊರತೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವುದನ್ನು ವೈದ್ಯರು ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

ಗಮನಿಸಿ: ತುಟಿಗಳು ಒಡೆಯುವುದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಅದು ದೇಹದೊಳಗಿನ ಪೌಷ್ಟಿಕಾಂಶ ಕೊರತೆಯ ಸಂಕೇತವೂ ಆಗಿರಬಹುದು. ಆದ್ದರಿಂದ ಕೇವಲ ಲಿಪ್‌ಬಾಮ್ ಬಳಕೆಗೆ ಸೀಮಿತವಾಗದೆ, ಸಮತೋಲನ ಆಹಾರ ಮತ್ತು ಉತ್ತಮ ಜೀವನಶೈಲಿಯತ್ತ ಗಮನ ಹರಿಸುವುದು ಆರೋಗ್ಯಕರ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us