AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಒಂದೇ ಕೈನಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ಕೆಎಲ್ ರಾಹುಲ್; ವಿಡಿಯೋ

KL Rahul's Stunning Catch: ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ vs ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಕೆಎಲ್ ರಾಹುಲ್ ಅವರ ಆಕರ್ಷಕ ಕ್ಯಾಚ್ ಗಮನ ಸೆಳೆಯಿತು. ಇಂಗ್ಲೆಂಡ್ ತಂಡವನ್ನು 258 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಅಕ್ಷರ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರು. ತಂಡದ ಉತ್ತಮ ಫೀಲ್ಡಿಂಗ್ ಪ್ರದರ್ಶನ ಹಿಂದಿನ ಲೋಪಗಳನ್ನು ಮರೆಸಿತು.

IND vs ENG: ಒಂದೇ ಕೈನಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ಕೆಎಲ್ ರಾಹುಲ್; ವಿಡಿಯೋ
Kl Rahul
ಪೃಥ್ವಿಶಂಕರ
|

Updated on:Jul 14, 2026 | 7:35 PM

Share

ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್‌ ತಂಡವನ್ನು 258 ರನ್​ಗಳಿಗೆ ಆಲೌಟ್ ಮಾಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲ್ಲೂ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಫಿಲ್ಡಿಂಗ್ ವಿಚಾರದಲ್ಲಿ ಟೀಂ ಇಂಡಿಯಾ ಸಾಕಷ್ಟು ತಪ್ಪುಗಳನ್ನು ಮಾಡಿತ್ತು. ಇದರಿಂದಾಗಿ ಸೋಲಿನ ಬೆಲೆಯನ್ನು ತೆತ್ತಿತ್ತು. ಆದರೆ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಫಿಲ್ಡಿಂಗ್ ಎಲ್ಲರ ಗಮನ ಸೆಳೆಯಿತು. ಮೂರು ಅದ್ಭುತ ಕ್ಯಾಚ್​ಗಳನ್ನು ಫಿಲ್ಡರ್​ಗಳು ಹಿಡಿದರು. ಅದರಲ್ಲೂ ವಿಕೆಟ್ ಕೀಪರ್ ರಾಹುಲ್ (KL Rahul) ಹಿಡಿದ ಕ್ಯಾಚ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಅದ್ಭುತ ಕ್ಯಾಚ್ ಹಿಡಿದ ರಾಹುಲ್‌

ಸುಮಾರು 706 ದಿನಗಳ ನಂತರ ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ಆಲ್‌ರೌಂಡರ್ ಶಿವಂ ದುಬೆ ಅವರ ಬೌಲಿಂಗ್​ನಲ್ಲಿ ವಿಲ್ ಜ್ಯಾಕ್ಸ್ ನೀಡಿದ ಕ್ಯಾಚ್ ಅನ್ನು ವಿಕೆಟ್‌ ಕೀಪರ್ ಕೆಎಲ್ ರಾಹುಲ್ ತಮ್ಮ ಬಲಕ್ಕೆ ಜಿಗಿದ್ದು ಒಂದೇ ಕೈನಲ್ಲಿ ಹಿಡಿದುಕೊಂಡರು. ಈ ಪಂದ್ಯದಲ್ಲಿ ಶಿವಂ ದುಬೆ 6 ಓವರ್‌ಗಳನ್ನು ಬೌಲ್ ಮಾಡಿ 27 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಅಪಾಯಕಾರಿಯಾಗಿ ಕಾಣುತ್ತಿದ್ದ ವಿಲ್ ಜ್ಯಾಕ್ಸ್ ಅವರನ್ನು ಔಟ್ ಮಾಡಿದರು. ಜ್ಯಾಕ್ಸ್ 19 ಎಸೆತಗಳಲ್ಲಿ 20 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯಕ್ಕೂ ಮೊದಲು ಶಿವಂ ದುಬೆ ಕೇವಲ ಒಂದು ಏಕದಿನ ವಿಕೆಟ್ ಮಾತ್ರ ಪಡೆದಿದ್ದರು. ವಿಲ್ ಜ್ಯಾಕ್ಸ್ ಅವರ ಎರಡನೇ ಬಲಿಯಾದರು.

ಇಂಗ್ಲೆಂಡ್ ಇನ್ನಿಂಗ್ಸ್ ಹೀಗಿತ್ತು

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 47.5 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಲಿಯಾಮ್ ಡಾಸನ್ ಮತ್ತು ಜೋ ರೂಟ್ ಅರ್ಧಶತಕಗಳನ್ನು ಗಳಿಸಿದರು. ಇಬ್ಬರೂ ಶತಕದ ಪಾಲುದಾರಿಕೆಯನ್ನು ಗಳಿಸಿ ಇಂಗ್ಲೆಂಡ್ ತಂಡವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು. ಇಬ್ಬರ ನಡುವೆ 134 ಎಸೆತಗಳಲ್ಲಿ 121 ರನ್‌ಗಳ ಪಾಲುದಾರಿಕೆ ಇತ್ತು. ಒಂದು ಹಂತದಲ್ಲಿ ಇಂಗ್ಲೆಂಡ್ 107 ರನ್​ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಲ್ಲಿಂದ ಇವರಿಬ್ಬರು ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಲಿಯಾಮ್ ಡಾಸನ್ 68 ರನ್ ಬಾರಿಸಿದರೆ, ಜೋ ರೂಟ್ 76 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತದ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಪಡೆದರು. ಜಸ್ಪ್ರಿತ್ ಬುಮ್ರಾ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Tue, 14 July 26

Follow Us