
ನಟಿ ಐಶಾನಿ ಶೆಟ್ಟಿ ಅವರು ಈಗ ಹೆಸರು ಬದಲಿಸಿಕೊಂಡಿದ್ದಾರೆ. ಸನಿಹಾ ಪೊನ್ನಪ್ಪ ಆಗಿ ಅವರು ಅಭಿಮಾನಿಗಳ ಎದುರು ಬಂದಿದ್ದಾರೆ. ಅವರು ನಿಜಕ್ಕೂ ಹೆಸರು ಬದಲಿಸಿಕೊಂಡಿಲ್ಲ. ಇದೆಲ್ಲ ಸಿನಿಮಾ ಪ್ರಚಾರಕ್ಕಾಗಿ.

‘ಹೊಂದಿಸಿ ಬರೆಯಿರಿ’ ಸಿನಿಮಾ ಫೆಬ್ರವರಿ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಸನಿಹಾ ಹೆಸರಿನ ಪಾತ್ರಕ್ಕೆ ಐಶಾನಿ ಬಣ್ಣ ಹಚ್ಚಿದ್ದಾರೆ.

‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಐಶಾನಿ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ತಮ್ಮ ಗೆಟಪ್ ಫೋಟೋಗಳನ್ನು ಐಶಾನಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಪೋಸ್ಟ್ ಮಾಡಿರುವ ಐಶಾನಿ, ‘ನಾನು ಹನ್ಸಿಕಾ ಪೊನ್ನಪ್ಪ. ಮಡಿಕೇರಿಯವಳು. ವಿಜ್ಞಾನಿ ಆಗಬೇಕು ಎಂಬುದು ನನ್ನ ಕನಸು. ಫೆಬ್ರವರಿ 10ಕ್ಕೆ ಹೊಂದಿಸಿ ಬರೆಯಿರಿ’ ಎಂದು ಐಶಾನಿ ಬರೆದುಕೊಂಡಿದ್ದಾರೆ.

ಐಶಾನಿ ಅವರು ಸಿಕ್ಕ ಆಫರ್ಗಳೆಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಅಳೆದು ತೂಗಿ ಸಿನಿಮಾ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.