- Kannada News Photo gallery Cricket photos India vs New Zealand 1st ODI Match Photos Cricket news in Kannada
IND vs NZ 1st ODI: ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದ ರೋಚಕ ಫೋಟೋಗಳು
India vs New Zealand 1st ODI: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಬೊಂಬಾಟ್ ಆಗಿ ಆರಂಭಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ 12 ರನ್ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದುಕೊಂಡಿದೆ.
Updated on:Jan 19, 2023 | 10:37 AM

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಬೊಂಬಾಟ್ ಆಗಿ ಆರಂಭಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ 12 ರನ್ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದುಕೊಂಡಿದೆ.

ಈ ಮೊದಲ ಏಕದಿನ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ದೊಡ್ಡ ಮೊತ್ತ ಕಲೆಹಾಕಿದ್ದರೂ ಈ ಸವಾಲನ್ನು ಎದುರಿಸಿದ ನ್ಯೂಜಿಲೆಂಡ್ ಗೆಲುವಿನ ಅಂಚಿಗೆ ಬಂದು ಸೋತಿತು. ಕಿವೀಸ್ ಗೆಲುವಿಗೆ ಮಿಚೆಲ್ ಬ್ರೆಸ್ವೆಲ್ ಕಠಿಣ ಹೋರಾಟ ನಡೆಸಿದರೆ ಭಾರತ ಬೆಟ್ಟದಂತಹ ಮೊತ್ತ ಗಳಿಸಲು ನೆರವಾಗಿದ್ದು ಶುಭ್ಮನ್ ಗಿಲ್.

ಕೊನೆಯ 50ನೇ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಗಿಲ್ ಕೇವಲ 145 ಎಸೆತಗಳಲ್ಲಿ 200 ರನ್ ಕಲೆಹಾಕಿದರು. ಒಟ್ಟಾರೆಯಾಗಿ 149 ಎಸೆತಗಳಲ್ಲಿ 19 ಫೋರ್, 9 ಸಿಕ್ಸರ್ನೊಂದಿಗೆ 208 ರನ್ ಚಚ್ಚಿದರು. ಇದರೊಂದಿಗೆ ಕೆಲ ದಾಖಲೆ ಕೂಡ ಬರೆದರು.

ಗಿಲ್ ಅಬ್ಬರದ ದ್ವಿಶತಕದ ಬಲದಿಂದ ಭಾರತ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 349 ರನ್ ಗಳಿಸಿತು.

ಇದಕ್ಕುತ್ತರವಾಗಿ ಕಿವೀಸ್ ಬಳಗವೂ ದಿಟ್ಟ ಆಟವಾಡಿತು. ಮಿಚೆಲ್ ಬ್ರೇಸ್‌ವೆಲ್ 140 ರನ್ ಬಾರಿಸಿ ಅಬ್ಬರದ ಶತಕದಿಂದಾಗಿ ಗೆಲುವಿನ ಸನಿಹ ಸಾಗಿತ್ತು. ಆದರೆ, ಕಿವೀಸ್ ಬಳಗವು 49.2 ಓವರ್‌ಗಳಲ್ಲಿ 337 ರನ್ ಗಳಿಸಿ ಆಲೌಟ್ ಆಯಿತು.

ಭಾರತ ಪರ ಮೊಹಮ್ಮದ್ ಸಿರಾಜ್ 10 ಓವರ್ ಬೌಲಿಂಗ್ ಮಾಡಿ 2 ಮೇಡನ್ ಸಹಿತ ಕೇವಲ 46 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು.

ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೈಖರಿ.
Published On - 10:37 am, Thu, 19 January 23
